ಲಿಂಗಸಗೂರು :ಸುಜಾತ ಹೆಚ್ ಶಿರಸ್ತೇದಾರ, ತಹಶೀಲ್ ಕಛೇರಿ ಲಿಂಗಸುಗೂರು.ದಿನಾಂಕ:23-03-2023 ರಂದು ಸಮಯ 3.30 ಗಂಟೆಗೆ ಕಛೇರಿಯಲ್ಲಿ ನಡೆದ ಘಟನೆ ನಾನು ಜಾತಿಯಿಂದ ಮಾದಿಗ ಜಾತಿಯವಳಾಗಿದ್ದು, ನನ್ನ ವಯಸ್ಸು :32 ಇದ್ದು, ಇಡಬ್ಲ್ಯೂಎಸ್ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ದಿನಾಂಕ:23-03-2023 ರಂದು ಕಛೇರಿ ಟಿಪ್ಪಣಿಯಲ್ಲಿ ಬರೆದಿರುವಂತೆ ಸದರಿ ಪ್ರಮಾಣ ಪತ್ರ ನೀಡಲು ಅವಶ್ಯವಿರುವ ಪಾನ್ ಕಾರ್ಡ್, ಅರ್ಜಿದಾರರ ಕುಟುಂಬದಲ್ಲಿ ಸರ್ಕಾರಿ ನೌಕರರು ಇಲ್ಲದಿರುವ ಬಗ್ಗೆ, ಆದಾಯದ ಕುರಿತು ಪಂಚನಾಮೆ ಇಲ್ಲದಿರುವ ಬಗ್ಗೆ, ಸದರಿ ದಾಖಲೆಗಳು ಸಲ್ಲಿಸದೇ ಇರುವ ಕಾರಣ ನನ್ನ ಷರಾ `ಬರೆದು ಮಾನ್ಯ ತಹಶೀಲ್ದಾರರಿಗೆ ರವಾನಿಸಿರುತ್ತೆನೆ. ಆದರೆ ಸದರಿ ದಾಖಲೆಗಳು ಇಲ್ಲದ್ದಿದರೂ ಸಹ ಸದರಿ ಪ್ರಮಾಣ ಪತ್ರವನ್ನು ಮಂಜೂರು ಮಾಡಲು ಒತ್ತಾಯಿಸುತ್ತಿದ್ದರು,
ದಿನಾಂಕಃ23-03-2023 ರಂದು ಸುಮಾರು ಮದ್ಯಾಹ್ನ 3.30 ಗಂಟೆಗೆ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಹಾಗೂ ಶಿರಸ್ತೇದಾರರು ಇರುವ ಕೊಠಡಿ ಸಂಖ್ಯೆ 10 ಕ್ಕೆ ಏಕಾಏಕಿ 8 ಜನರ ಗುಂಪಿನೊಂದಿಗೆ ವೀರನಗೌಡ ಲೆಕ್ಕಿಹಾಳ ಇವರು ನನಗೆ “ ಏ ನೀನು ದುಡ್ಡು ಕೊಟ್ಟರೆ ಮಾತ್ರ ಕೆಲಸ ಮಾಡುತ್ತಿಯಾ, ನೀನು ಯಾವಕಿ ನಿಂದೇನು ಅಂತಾ ಇಡಿ ತಾಲೂಕಿಗೆ ಗೊತ್ತು, ನೀನೇನು ಸುಪ್ರೀಂ ಜಡ್ಡಾ, ನಿಂದೇ ಅಂತಿಮಾನಾ’ ಎಂದು ಅವ್ಯಾಚ್ಚ ಶಬ್ದಗಳಿಂದ ಹಾಗೂ ಏಕ ವಚನದಿಂದ ಮಾದಿಗ ಜಾತಿನಿಂದನೆ ಮಾಡುವ ಮಾತುಗಳನ್ನು ಆಡುತ್ತಾ, ನನ್ನ ಮೇಲೆ ಹಲ್ಲೆ ಮಾಡಲು ಯತ್ನಿಸಿದಾಗ ಕಛೇರಿಯಲ್ಲಿ ಹಾಜರಿದ್ದ ಮಹಿಳಾ ಸಿಬ್ಬಂದಿಗಳು ಸಮಜಾಯಿಸಿ ಹೇಳಲು ಮುಂದಾದಾಗ ಅವರಿಗೂ ಸಹ ತಹಶೀಲ್ ಕಛೇರಿಯವರು ನಿವೇನು ಸತ್ಯ ಹರಿಚ್ಚಂದ್ರನ ಮೊಮ್ಮಕಳಾ, ವಂಶಸ್ಥರಾ, ನಿಮ್ಮದೇಲ್ಲಾ ಗೋತ್ತು ನೀವು 5, ಸಾವರ ಮತ್ತು 10, ಸಾವಿರ ದುಡ್ಡು ಕೊಟ್ಟರೆ ಎಲ್ಲವನ್ನೂ ಮಾಡುತ್ತಿರಿ ಎಂದು ಮಹಿಳಾ ಸಿಬ್ಬಂದಿಗಳಿಗೆ ಅತೀ ಕೇವಲವಾಗಿ ಮಾತನಾಡಿರುತ್ತಾರೆ.
ಇದರಿಂದ ಕಛೇರಿಯ ಎಲ್ಲಾ ಮಹಿಳಾ ಸಿಬ್ಬಂದಿಗಳು ಕಛೇರಿಗೆ ಬಂದು ಕಾರ್ಯನಿರ್ವಹಿಸಲು ಭಯಬಿದ್ದು, ಕರ್ತವ್ಯಕ್ಕೆ ಬರುವುದಿಲ್ಲ ಎಂದು ತಮ್ಮ ವೇದನೆಯನ್ನು ಹಾಗೂ ಅಳಲನ್ನು ಕಣ್ಣಿರು ಹಾಕುತ್ತಾ ಹೇಳಿಕೊಂಡಿರುತ್ತಾರೆ. ಈ ಘಟನೆಯಿಂದ ನಾನು ಮಾನಸಿಕವಾಗಿ ಜರ್ಜರಿತಳಾಗಿರುತ್ತನೆ. ವೀರನಗೌಡ ಲೆಕ್ಕಹಾಳ ಇವರು ನನಗೆ ಜೀವ ಬೇದರಿಕೆ ಕೂಡಾ ಹಾಕಿರುತ್ತಾರೆ. ನನಗೆ ಕರ್ತವ್ಯ ನಿರ್ವಹಿಸಲು ಭಯವಾಗುತ್ತಿದ್ದು, ಪೊಲೀಸ್ ರಕ್ಷಣೆ ನೀಡಬೇಕು ವೀರನಗೌಡ ಲೆಕ್ಕಿಹಾಳ ಹಾಗೂ 8 ಜನ ಸಹಚರರ ವಿರುದ್ಧ ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ, ಜಾತಿ ನಿಂದನೆ ಮಾಡಿರುವ ಆರೋಪ ಮತ್ತು ಮಹಿಳಾ ನೌಕರರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಕುರಿತು ತಕ್ಷಣ ಕಠಿಣ ಕಾನೂನು ಕ್ರಮ ಕೈಗೊಳ್ಳ ಬೇಕು ತಪ್ಪಿದಲ್ಲಿ ತಾಲೂಕಾ ಮಟ್ಟದ ಹಾಗೂ ಜಿಲ್ಲಾ ಮಟ್ಟದ ಎಲ್ಲಾ ಸರಕಾರಿ ನೌಕರರ ಸಂಘದಿಂದ ಅನಿರ್ದಿಷ್ಟಾವಧಿ ಹೋರಾಟವನ್ನು ಮಾಡಲಾಗುವುದು ಎಂದು
ಸಹಾಯಕ ಆಯುಕ್ತರು ಲಿಂಗಸುಗೂರು ಹಾಗೂ ತಹಶೀಲ್ದಾರರು ಲಿಂಗಸುಗೂರು ಇವರಿಗೆ ಮನವಿಯನ್ನು ಸಲ್ಲಿಸಿದರು ಈ ಸಂದರ್ಭದಲ್ಲಿ ತಹಶೀಲ್ದಾರ್ ಕಚೇರಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Be the first to comment