ರಾಹುಲ್ ಗಾಂಧಿ ಅನರ್ಹ: ಕಾಂಗ್ರೆಸ್ ಮುಖಂಡ ಪ್ರಮೋದ ಕುಲಕರ್ಣಿ ಖಂಡನೆ. 

ಲಿಂಗಸುಗೂರ : ಲೋಕಸಭಾ ಸದಸ್ಯ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹ ಭಾರತದಲ್ಲಿ ಪ್ರಜಾಪ್ರಭುತ್ವ ಸತ್ತು ಹೋಗಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಪುರಸಭೆ ಸದಸ್ಯ ಪ್ರಮೋದ ಕುಲಕರ್ಣಿ ಟೀಕೆ ಮಾಡುವ ಮೂಲಕ ಕಂಡಿಸಿದ್ದಾರೆ

 

ಲೋಕಸಭಾ ಸದಸ್ಯ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹತೆ ಕುರಿತು ಪತ್ರಿಕಾ ಹೇಳಿಕೆ ನೀಡುವ ಮೂಲಕ

ಪ್ರಧಾನಿ ಮೋದಿಯವರು ಅದಾನಿ ನಡುವಿನ ಮಹಾ ಮೆಗಾ ಹಗರಣದ ಬಗ್ಗೆ ತನಿಖೆಗೆ ವಹಿಸುವ ಬದಲು ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಲಾಗಿದೆ. ಭಾರತದ ಪ್ರಜಾಪ್ರಭುತ್ವ ಸತ್ತು ಹೋಗಿದೆ

ಪ್ರಜಾಪ್ರಭುತ್ವಕ್ಕೆ ಕೆಟ್ಟದ್ದನ್ನು ಸೂಚಿಸುತ್ತದೆ ಎಂದು ಬಲವಾಗಿ ಖಂಡಿಸಿದರು.

 

ಜನಪ್ರತಿನಿಧಿ ಕಾಯ್ದೆ 1951 ರ ಅಡಿ ಅನರ್ಹಗೊಳಿಸಿದ್ದು, ಇಂದು ಭಾರತ ದೇಶಕ್ಕೆ ಕರಾಳ ದಿನವಾಗಿರುತ್ತದೆ. ನೀರವ್ ಮೋದಿ, ಲಲಿತ್ ಮೋದಿ ತರಹದ ಮೊದಿಗಳು ಭಾತರದಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಸತ್ಯ ಹೇಳಿದ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿ, ಸತ್ಯ ಹೇಳುವವರ ಮತ್ತು ಸರ್ಕಾರದ ವಿರುದ್ಧ ಮಾತನಾಡುವವರಿಗೆ ಮಾತು ಮುಟ್ಟಿಸಲು ಇಂತಹ ಸುಳ್ಳು ಪ್ರಕರಣಗಳು ದಾಖಲಿಸುತ್ತಿದ್ದಾರೆ.

 

ನೀರವ್ ಮೋದಿ 14,000 ಕೋಟಿ ಭ್ರಷ್ಟಚಾರ ಮಾಡಿದ್ದಾರೆ ಮೆಹೂಲ್ ಬೌಕ್ಸಿ 1,500 ಕೋಟಿ ಭ್ರಷ್ಟಚಾರ ಮಾಡಿದ ಇಂತವರ ಗಂಭೀರ ವಿಷಯವನ್ನು ಇಟ್ಟುಕೊಂಡು ಸಂಸತ್ತಿನಲ್ಲಿ ಮಾತನಾಡಲು ಹೋದರೆ ಮೈಕ್‌ಗಳನ್ನು ಆಫ್ ಮಾಡುವುದರ ಮೂಲಕ ಸತ್ಯವನ್ನು ಮುಚ್ಚುವ ಕೆಲಸ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಉಂಟು ಮಾಡಿದ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.

Be the first to comment

Leave a Reply

Your email address will not be published.


*