ಕೊಟ್ಟ ಮಾತಿಗೆ ತಪ್ಪಿ ನಡೆದರೆ ಮೆಚ್ಚನು ಪರಮಾತ್ಮ -ಶಾಸಕ ಡಾಃಅವಿನಾಶ*

ಚಿಂಚೋಳಿ :ನನಗೆ ಸಿಕ್ಕ ಅಲ್ಪ ಅವಧಿಯಲ್ಲಿ ಚಿಂಚೋಳಿ ಮತಕ್ಷೇತ್ರವನ್ನು ಅಭಿವೃದ್ಧಿದತ್ತ ಕೊಂಡ್ಯೋಯಲು ಪ್ರಯತ್ನಿಸಿದ್ದೇನೆ ಕ್ಷೇತ್ರದ ರೈತರ ಬಹುದಿನಗಳ ಬೇಡಿಕೆಯಾದ ಸಕ್ಕರೆ ಕಾರ್ಖಾನೆ ಐನಾಪೂರ ಏತ ನೀರಾವರಿ ಅನುಷ್ಠಾನ ಸೇರಿದಂತೆ ಹತ್ತು ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜನರ ಸೇವಕನಾಗಿದ್ದೇನೆ ಜನರಿಗೆ ಕೊಟ್ಟ ಮಾತು ತಪ್ಪಿದರೆ ಮೆಚ್ಚನು ಪರಮಾತ್ಮ ಎಂದು ಶಾಸಕ ಡಾಃಅವಿನಾಶ ಜಾಧವ ಮಾರ್ಮಿಕವಾಗಿ ನುಡಿದರು

 

ಅವರು ನಗರದಲ್ಲಿ ಹಮ್ಮಿಕೊಂಡ ನೂತನ ಆಡಳಿತ ಸೌಧ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳು ಮತ್ತು ಸಮುದಾಯ ಭವನಗಳನ್ನು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು

 

ನನಗೆ ಮೂರುವರೆ ವರ್ಷ ಸಮಯ ಸಿಕ್ಕಿದೆ ಸಿಕ್ಕಿರುವ ಸಮಯವನ್ನು ಸದುಪಯೋಗ ಪಡಿಸಿಕೊಂಡು ಕ್ಷೇತ್ರದ ಬಹುತೇಕ ಜ್ವಲಂತ ಸಮಸ್ಯೆಗಳನ್ನು ನಿವಾರಿಸಿದ್ದೇನೆ ಕೋವಿಡ್ ಸಂದರ್ಭದಲ್ಲಿ ಜನರ ಕಷ್ಟಗಳಲ್ಲಿ ಪಾಲ್ಗೊಂಡು ಸಮಸ್ಯೆ ನಿವಾರಿಸಿದ್ದೇನೆ ನನಗೆ ಮತ್ತೊಂದು ಬಾರಿ ಆಶೀರ್ವದಿಸಿ ಅವಕಾಶ ಮಾಡಿಕೊಡಿ ರಾಜ್ಯದಲ್ಲಿಯೇ ಚಿಂಚೋಳಿ ನಂ-1 ಕ್ಷೇತ್ರವನ್ನಾಗಿ ಮಾಡುವೆ ಎಂದು ಪರೋಕ್ಷವಾಗಿ ಮತಯಾಚಿಸಿದರು

 

ಮುಖ್ಯಾತಿಥಿಗಳಾಗಿ ಮಾತನಾಡಿದ ಕಲಬುರ್ಗಿ ಸಂಸದ ಡಾಃಉಮೇಶ ಜಾಧವ ನಗರದಲ್ಲಿ ಕೆಲವು ದಶಕಗಳ ಹಿಂದೆ ನಿರ್ಮಾಣಗೊಂಡ ಮಿನಿ ವಿಧಾನ ಸೌಧದಲ್ಲಿ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆ ಕಾಡುತ್ತಿತ್ತು ಆದರೆ ಶಾಸಕರು ವಿಶೇಷ ಮುತುವರ್ಜಿವಹಿಸಿ ತಾಲೂಕು ಆಡಳಿತ ಸೌಧ ನಿರ್ಮಾಣ ಮಾಡಿ ವಿವಿಧ ಇಲಾಖೆಗಳು ಒಂದೆಡೆ ವ್ಯವಸ್ಥೆ ಮಾಡಿ ಜನರ ತಾಪತ್ರೆ ನಿವಾರಿಸಿದ್ದಾರೆ ಎಂದರು

 

ನಾವು ಉಪ-ಚುನಾವಣೆಯಲ್ಲಿ ಚಿಂಚೋಳಿ ಮತಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಜನರಿಗೆ ವಿವಿಧ ಭರವಸೆಗಳನ್ನು ನೀಡಿದ್ದೇವೆ ಅದರಂತೆ 90% ಈಡೇರಿಸಿದ್ದೇವೆ ಉಳಿದ ಭರವಸೆ ಈಡೇರಿಸಲು ಡಾಃಅವಿನಾಶ ಅವರಿಗೆ ಆಶೀರ್ವದಿಸಿ ಎಂದು ಸಂಸದ ಡಾಃಜಾಧವ ಮಗನ ಪರ ಮತಯಾಚನೆ ಮಾಡಿದರು

 

ನಮ್ಮ ಸರಕಾರ ಹಾಗೂ ಶಾಸಕ ಡಾಃಅವಿನಾಶ ತಮ್ಮ ಅಧಿಕಾರದ ಅವಧಿಯಲ್ಲಿ ಯಾವುದೇ ತರಹ ಪಕ್ಷಪಾತ ಮಾಡಿಲ್ಲ ಎಲ್ಲರನ್ನೂ ಸಮಾನವಾಗಿ ಕರೆದುಕೊಂಡು ಹೋಗಿದ್ದಾರೆ ತಮ್ಮ ಕಾಲಿಗೆ ಗೆಜ್ಜೆ ಕಟ್ಟಿ ತಿರುಗಾಡಿ ವಿವಿಧ ಇಲಾಖೆಗಳಿಂದ ಕೋಟ್ಯಾಂತರ ರೂ.ಗಳನ್ನು ಅನುದಾನ ತಂದು ಕ್ಷೇತ್ರ ಅಭಿವೃದ್ಧಿ ಮಾಡಿದ್ದಾರೆ ಅವರ ಸಾಧನೆ ನೋಡಿ ಬರುವ ವಿಧಾನಸಭಾ ಚುನಾವಣೆಯಲ್ಲಿ ಅಂಕ ನೀಡುವಂತೆ ಜನರಲ್ಲಿ ಕೋರಿಕೊಂಡರು

 

ವೇದಿಕೆಯನ್ನುದ್ದೇಶಿಸಿ ಡಿಸಿಸಿ ಬ್ಯಾಂಕಿನ ನಿರ್ದೇಶಕ ಗೌತಮ ವೈಜನಾಥ ಪಾಟೀಲ ಸಂತೋಷ ಗಡಂತಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಾಧನೆ ಮತ್ತು ಸ್ಥಳಿಯ ಶಾಸಕರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮೆಲಕು ಹಾಕಿದರು

 

ವೇದಿಕೆಯಲ್ಲಿ ಪುರಸಭಾ ಅಧ್ಯಕ್ಷೆ ಜಗದೇವಿ ಗಡಂತಿ ತಾಲೂಕಾ ಕಾರ್ಯನಿರ್ವಾಹಕಾಧಿಕಾರಿ ವೈ.ಎಲ್.ಹಂಪಣ್ಣಾ ಗ್ರೇಡ್-2 ತಹಸಿಲ್ದಾರ ವೆಂಕಟೇಶ ದುಗ್ಗನ ಲೋಕೋಪಯೋಗಿ ಇಲಾಖೆ ಎಇಇ ಆನಂದ ಕಟ್ಟಿ ಗ್ರಾಮೀಣ ನೀರು ಸರಬರಾಜು ಇಲಾಖೆ ಎಇಇ ಪ್ರಕಾಶ ಕುಲಕರ್ಣಿ ಪುರಸಭಾ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ ತಾಲೂಕಾ ಆರೋಗ್ಯಾಧಿಕಾರಿ ಡಾಃಮಹ್ಮದ ಗಫ್ಫಾರ ಅಲ್ಪಸಂಖ್ಯಾತರ ಇಲಾಖೆಯ ಸಹಾಯಕ ನಿರ್ದೇಶಕ ಶಾಂತವೀರಯ್ಯಾ ಮಠ ಮುಖಂಡರಾದ ಬಸವಣಪ್ಪಾ ಕುಡ್ಹಳ್ಳಿ ಸಂಗಪ್ಪಾ ಪಾಲಾಮೂರ ಸಲಾವುದ್ದೀನ ಪಟೇಲ ಕೆ.ಎಮ್.ಬಾರಿ ಸದ್ದಾಮ ವಜೀರಗಾಂವ್ ವಿಶ್ವನಾಥ ಗುತ್ತೇದಾರ ಶಾಮರಾವ ಕೊರವಿ ಶಿವಯೋಗಿ ರುಸ್ತಂಪೂರ ಅಣವಾರ ಪಂಚಾಯತ ಅಧ್ಯಕ್ಷೆ ಹಾಗೂ ಇತರರು ಉಪಸ್ಥಿತರಿದ್ದರು

 

ಬಿಜೆಪಿ ಅಧ್ಯಕ್ಷ ಸಂತೋಷ ಗಡಂತಿ ಸ್ವಾಗತಿಸಿದರು ಉಪನ್ಯಾಸಕರ ಮಲ್ಲಿಕಾರ್ಜುನ ಪಾಲಾಮೂರ ನಿರೂಪಿಸಿದರು ಬಿ.ಆರ್.ಸಿ ನಾಗಶೆಟ್ಟಿ ಭದ್ರಶೆಟ್ಟಿ ವಂದಿಸಿದರು ಈ ಸಂದರ್ಭದಲ್ಲಿ ಪುರಸಭೆ ವ್ಯಾಪ್ತಿಯ ಹಾಗೂ ಗ್ರಾಮಾಂತರ ಪ್ರದೇಶಗಳ ನೂರಾರು ಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Be the first to comment

Leave a Reply

Your email address will not be published.


*