ಕರ್ನಾಟಕ ರಾಜ್ಯದಲ್ಲಿ ಲಂಚಮುಕ್ತ ಮಾಡಲು ಆಮ್ ಆದ್ಮಿ ಪಾರ್ಟಿ ಅನಿವಾರ್ಯ: ಅಭ್ಯರ್ಥಿ ಮಲ್ಲಿಕಾರ್ಜುನ್ ಹಲಗಿಗೌಡರ

ಬಾಗಲಕೋಟೆ: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗು ಜೆಡಿಎಸ್ ಪಕ್ಷಗಳು ಹಗರಣಗಳ ಕೂಟವಾಗಿ ಪರಿಣಮಿಸಿ, ರಾಜ್ಯದ ಸಂಪತ್ತನ್ನು ಕೊಳ್ಳೆ ಹೊಡೆದು ಜನರ ತೆರಿಗೆಯಲ್ಲಿ ಜನರ ಅಭಿವೃದ್ಧಿ ಬದಲಾಗಿ ತಾವೇ ಅಭಿವೃದ್ಧಿ ಹೊಂದಿ ಇಡೀ ರಾಜ್ಯವನ್ನೇ ಬರ್ಬಾದ್ ಮಾಡುವಲ್ಲಿ ಕಾರಣವಾಗಿವೆ. ಪ್ರಸಕ್ತ ವರ್ಷದ ಚುನಾವಣೆಯಲ್ಲಿ ಜನತೆ ಆಪ್‌ಗೆ ಆಶೀರ್ವದಿಸುವ ಮೂಲಕ ಲಂಚ ಮುಕ್ತ ಮಾಡಲು ಕರ್ನಾಟಕ ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷ ಅನಿವಾರ್ಯವಾಗಲಿದೆ ಎಂದು ತೇರದಾಳ ಮತಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಮಲ್ಲಿಕಾರ್ಜುನ್ ಹಲಗಿಗೌಡರ ಹೇಳಿದರು.

 

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ ತೇರದಾಳ ವಿಧಾನಸಭಾ ಕ್ಷೇತ್ರದ ಬನಹಟ್ಟಿಯಲ್ಲಿ ದಿ. 19.03.2023 ಆಮ್ ಆದ್ಮಿ ಪಾರ್ಟಿ ಕಚೇರಿಯಲ್ಲಿ ಸಾರ್ವಜನಿಕರ ಕುಂದು ಕೊರತೆಗಳು ಹಾಗೂ ಸಮಸ್ಯೆಗಳ ಸಂವಾದ ಕಾರ್ಯಕ್ರಮ ನಡೆಯಲಿದೆ.

ದೇಶದಲ್ಲಿ ಆಡಳಿತ ನಡೆಸುವ ಮುಂಚೆ ಪ್ರಣಾಳಿಕೆಗೆ ತಕ್ಕಂತೆ ನಡೆದ ಸರ್ಕಾರ ದೆಹಲಿ ಹಾಗು ಪಂಜಾಬ್‌ಗಳಲ್ಲಿನ ಆಪ್ ಪಕ್ಷ. ರಾಜ್ಯದಲ್ಲಿಯೂ ಅದೇ ಮಾದರಿಯಲ್ಲಿ ಸರ್ಕಾರ ನಿರ್ಮಾಣವಾಗಿ ಭವಿಷ್ಯ ಬದಲಾವಣೆ ನಡೆಯಲಿದೆ ಎಂದರು.

 

ಆಮ್ ಆದ್ಮಿ ಪಕ್ಷವು ಬೇರು ಮಟ್ಟದಲ್ಲಿ ಬಾಗಲಕೋಟೆ ಜಿಲ್ಲೆಯಾದ್ಯಂತ ತಳವೂರಿದೆ. ಬ್ಲಾಕ್, ಸರ್ಕಲ್, ವಾರ್ಡ್ ಹಾಗು ಭೂತ್ ಮಟ್ಟದ ಕಾರ್ಯಕರ್ತರನ್ನು ರಚನೆ ಮಾಡುವದರೊಂದಿಗೆ ರಾಷ್ಟಿಯ ಪಕ್ಷಗಳಿಗೆ ಪ್ರಬಲವಾಗುವಲ್ಲಿ ಆಪ್ ಯಶಸ್ವಿಯಾಗಿದೆ ಎಂದರು.

 

ಇದೇ ಸಂದರ್ಭದಲ್ಲಿ ಆಮ್ ಆದ್ಮಿ ಪಾರ್ಟಿ ರಬಕವಿ ಬನಹಟ್ಟಿ ತಾಲೂಕಿನ ಅಧ್ಯಕ್ಷ ಶಂಕರ ಹಲಕೇರಿ. ಶ್ರೀಶೈಲ ಬುದ್ನಿ. ವಿಜಯ ಗಾಡಿವಡ್ಡರ. ಆನಂದ ಪರಕಾಳಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು…

 

Be the first to comment

Leave a Reply

Your email address will not be published.


*