ಚೆನ್ನೈ ಮೆಟ್ರೋ ಜತೆ 200 ಮಿಲಿಯನ್ ಡಾಲರ್ ಮೊತ್ತದ ಒಪ್ಪಂದ ಮಾಡಿಕೊಂಡ ಹಿಟಾಚಿ ರೈಲ್ ಎಸ್‌ಟಿಎಸ್ ಸಂಸ್ಥೆ, 

ಚೆನ್ನೈ ಮೆಟ್ರೋಗೆ ಸ್ವಯಂಚಾಲಿತ ಡಿಜಿಟಲ್ ಸಿಗ್ನಲಿಂಗ್ ವ್ಯವಸ್ಥೆ ಒದಗಿಸಲು 200 ಮಿಲಿಯನ್ ಡಾಲರ್ ಒಪ್ಪಂದ ಮಾಡಿಕೊಂಡ ಹಿಟಾಚಿ ರೈಲ್ ಎಸ್‌ಟಿಎಸ್ ಸಂಸ್ಥೆ

 

ಬೆಂಗಳೂರು: ಬೆಂಗಳೂರು ಮೂಲದ ಹಿಟಾಚಿ ರೈಲ್ ಎಸ್‌ಟಿಎಸ್ ಸಂಸ್ಥೆ ಚೆನ್ನೈ ಮೆಟ್ರೋಗೆ ಸ್ವಯಂಚಾಲಿತ ಡಿಜಿಟಲ್ ಸಿಗ್ನಲಿಂಗ್ ವ್ಯವಸ್ಥೆ ಒದಗಿಸಲು 200 ಮಿಲಿಯನ್ ಡಾಲರ್ ಮೊತ್ತದ ಹರಾಜನ್ನು ತನ್ನದಾಗಿಸಿದೆ.

 

ಈ ಮೂಲಕ ಚೆನ್ನೈ ಮೆಟ್ರೋ ರೈಲು ಯೋಜನೆಯ ಎರಡನೇ ಹಂತವನ್ನು ಅಭಿವೃದ್ಧಿಪಡಿಸಲಾಗುತ್ತದೆ. ಹಿಟಾಚಿ ರೈಲ್ ಸಂಸ್ಥೆಯ ಅತ್ಯಾಧುನಿಕ ತಂತ್ರಜ್ಞಾನ ಮೆಟ್ರೋ ಸೇವೆಗಳು ಚಾಲಕ ರಹಿತವಾಗಿ ನಡೆಯುವಂತೆ ಮಾಡಲಿದೆ.

 

ಭಾರತದ ನಾಲ್ಕನೇ ಅತಿ ದೀರ್ಘವಾದ ಮೆಟ್ರೋ ವ್ಯವಸ್ಥೆಯಾದ ಚೆನ್ನೈ ಮೆಟ್ರೋದಲ್ಲಿ ಅತ್ಯಾಧುನಿಕ ಡಿಜಿಟಲ್ ಸಿಗ್ನಲಿಂಗ್ ವ್ಯವಸ್ಥೆ ಅಳವಡಿಸಲಾಗುತ್ತಿದೆ. ಕಮ್ಯುನಿಕೇಶನ್ ಬೇಸ್ಡ್ ಟ್ರೈನ್ ಕಂಟ್ರೋಲ್ (ಸಿಬಿಟಿಸಿ) ವ್ಯವಸ್ಥೆಯನ್ನು ಎರಡನೇ ಹಂತದ ಮೆಟ್ರೋ ರೈಲುಗಳಲ್ಲಿ ಅಳವಡಿಸಲಾಗುತ್ತದೆ. ಈ ವ್ಯವಸ್ಥೆ ಸ್ವಯಂಚಾಲಿತವಾಗಿ ರೈಲಿನ ಎಳೆತ ಮತ್ತು ಬ್ರೇಕಿಂಗ್ ವ್ಯವಸ್ಥೆಯನ್ನು ನಿಯಂತ್ರಿಸಿ, ಸತತವಾಗಿ ಗರಿಷ್ಠ ವೇಗವನ್ನು ಲೆಕ್ಕಾಚಾರ ಮಾಡುತ್ತದೆ. ಇದರಲ್ಲಿ ಅಳವಡಿಸಲಾಗುವ ವೀಡಿಯೋ ನಿರ್ವಹಣಾ ವ್ಯವಸ್ಥೆ ನಿಯಂತ್ರಣ ಕೇಂದ್ರಕ್ಕೆ ಎಲ್ಲ ರೈಲುಗಳ ಪ್ರತಿಕ್ಷಣದ ವೀಡಿಯೋವನ್ನು ಒದಗಿಸುತ್ತಾ, ಆ ಮೂಲಕ ಪ್ರಯಾಣಿಕರ ಡಿಸ್‌ಪ್ಲೇ ಬೋರ್ಡ್‌ಗಳನ್ನು, ಪ್ಲಾಟ್‌ಫಾರಂ ಸ್ಕ್ರೀನ್ ಬಾಗಿಲುಗಳನ್ನು, ಹಾಗೂ ನಿಲ್ದಾಣದ ಘೋಷಣೆಗಳನ್ನು ನಿಯಂತ್ರಿಸಲು ನೆರವಾಗುತ್ತದೆ.

 

ಈ ಆಧುನಿಕ ತಂತ್ರಜ್ಞಾನ ರೈಲುಗಳನ್ನು 90 ಸೆಕೆಂಡುಗಳ ಅಂತರದಲ್ಲಿ ಸಂಚರಿಸಲು ಅನುವು ಮಾಡಿಕೊಡುತ್ತದೆ. ಆ ಮೂಲಕ ಹೆಚ್ಚಿನ ಸಾಮರ್ಥ್ಯ, ನಂಬಿಕಾರ್ಹತೆಯನ್ನು ಮೆಟ್ರೋದ ಎರಡನೇ ಹಂತಕ್ಕೆ ಒದಗಿಸುತ್ತದೆ. ಚೆನ್ನೈ ಮೆಟ್ರೋದ ಎರಡನೇ ಹಂತ 118 ಕಿಲೋಮೀಟರ್‌ಗಳ ವ್ಯಾಪ್ತಿಯನ್ನು ಹೊಂದಿದ್ದು, ಅದರಲ್ಲಿ 42 ಕಿಲೋಮೀಟರ್‌ಗಳಷ್ಟು ನೆಲದಾಳದಲ್ಲಿ ಸಂಚರಿಸುವ ಮಾರ್ಗವನ್ನು ಹೊಂದಿದೆ. ಇದರಲ್ಲಿ ಎರಡು ಡಿಪೋಗಳು, 113 ನಿಲ್ದಾಣಗಳು, 138 ರೈಲುಗಳು, ಹಾಗೂ ಮೂರು ರೈಲು ನಿರ್ವಹಣಾ ವ್ಯವಸ್ಥೆಗಳು ಸೇರಿವೆ. ಮೆಟ್ರೋ ಎರಡನೇ ಹಂತ 2027ರ ಕೊನೆಯ ವೇಳೆಗೆ ಪೂರ್ಣಗೊಳ್ಳಲಿದೆ.

 

ಸಿಎಂಆರ್‌ಎಲ್ ನಿರ್ದೇಶಕ (ಸಿಸ್ಟಮ್ಸ್ ಆ್ಯಂಡ್ ಆಪರೇಶನ್ಸ್) ರಾಜೇಶ್ ಚತುರ್ವೇದಿ ಮತ್ತು ಹಿಟಾಚಿ ರೈಲ್ ಎಸ್‌ಟಿಎಸ್ ಇಂಡಿಯಾ ಸಂಸ್ಥೆಯ ದೇಶೀಯ ಮುಖ್ಯಸ್ಥರು, ಪೂರ್ಣಾವಧಿ ನಿರ್ದೇಶಕರಾದ ಮನೋಜ್ ಕೃಷ್ಣಪ್ಪ ಕುಮಾರ್ ಅವರು 1,620 ಕೋಟಿ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಯೋಜನೆಗೆ ಜಪಾನ್ ಇಂಟರ್‌ನ್ಯಾಷನಲ್ ಕೋಆಪರೇಶನ್ ಏಜೆನ್ಸಿ (ಜೆಐಸಿಎ) ಹಣ ಹೂಡಿಕೆ ಮಾಡಲಿದೆ.

 

 

ಭಾರತೀಯ ಮೆಟ್ರೋ ಜಾಲಕ್ಕೆ ಬೃಹತ್ ಜಿಗಿತ ಒದಗಿಸುವ ನಿಟ್ಟಿನಲ್ಲಿ ಹಿಟಾಚಿ ರೈಲ್ ಸಂಸ್ಥೆ ರೋಲಿಂಗ್ ಸ್ಟಾಕ್, ಸಿಗ್ನಲಿಂಗ್, ಸೇವೆ ಮತ್ತು ನಿರ್ವಹಣೆ, ಡಿಜಿಟಲ್ ತಂತ್ರಜ್ಞಾನ, ಹಾಗೂ ಟರ್ನ್ ಕೀ ಯೋಜನೆಗಳನ್ನು ಜಾಗತಿಕ ಮಟ್ಟದಲ್ಲಿ ಒದಗಿಸುತ್ತಿದೆ. ಜಾಗತಿಕವಾಗಿ ತನ್ನ ಛಾಪು ಮೂಡಿಸಿರುವ ಹಿಟಾಚಿ ರೈಲ್ ಸಂಸ್ಥೆ ಆರು ಖಂಡಗಳ 38 ರಾಷ್ಟ್ರಗಳಲ್ಲಿ ತನ್ನ ಉಪಸ್ಥಿತಿ ಹೊಂದಿದ್ದು, 14,000 ನೌಕರರನ್ನು ಹೊಂದಿದೆ. ಸಂಸ್ಥೆಯ ಗುರಿ ಎಂದರೆ ಅತ್ಯುತ್ತಮ ರೈಲು ಪ್ರಯಾಣ ವ್ಯವಸ್ಥೆಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಸಮಾಜಕ್ಕೆ ಕಾಣಿಕೆ ನೀಡಲು ರೈಲ್ವೆ ವ್ಯವಸ್ಥೆಗಳ ಅಭಿವೃದ್ಧಿಗೆ ನೆರವಾಗುತ್ತದೆ.

 

ಭಾರತ ಸರ್ಕಾರ ಭಾರತ ಮುಂದಿನ ಸಹಸ್ರಮಾನವನ್ನು ಅತ್ಯಂತ ಯಶಸ್ವಿಯಾಗಿ ಪ್ರವೇಶಿಸಲಿದೆ ಎಂದು ಘೋಷಿಸಿತ್ತು. ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆ ಎಂಬ ಸ್ಥಾನಮಾನದಿಂದ, ಭಾರತ ಅಭಿವೃದ್ಧಿ ಹೊಂದಿದ ಆರ್ಥಿಕತೆಯಾಗುವತ್ತ ದಾಪುಗಾಲಿಟ್ಟಿದೆ. ಪ್ರಸ್ತುತ ನಮ್ಮ ಗುರಿಯೆಂದರೆ, ತಾಂತ್ರಿಕ ಅಭಿವೃದ್ಧಿಯ ಮೂಲಕ ಇನ್ನಷ್ಟು ನಾವೀನ್ಯತೆಗಳನ್ನು ಸಾಧಿಸುವುದು, ಪರಿಸರವನ್ನು ರಕ್ಷಿಸುವುದು ಮತ್ತು ಸಾರ್ವಜನಿಕರ ಜೀವನಮಟ್ಟವನ್ನು ಅಭಿವೃದ್ಧಿ ಪಡಿಸುವುದು. ಮುಂದಿನ ತಲೆಮಾರಿನ ಚಲನಶೀಲ ಪರಿಹಾರೋಪಾಯಗಳ ಮೂಲಕ ಸಂಸ್ಥೆ ನಮ್ಮ ಕಲ್ಪನೆಗಳನ್ನೂ ಮೀರಿ, ಈ ಗುರಿಯನ್ನು ಸಾಕಾರಗೊಳಿಸಲಿದೆ ಎಂದು ಹಿಟಾಚಿ ರೈಲ್ ಎಸ್‌ಟಿಎಸ್ – ಇಂಡಿಯಾ ಪೂರ್ಣಾವಧಿ ನಿರ್ದೇಶಕರು ಮತ್ತು ಮುಖ್ಯಸ್ಥ ಮನೋಜ್ ಕುಮಾರ್ ಕೆ ತಿಳಿಸಿದ್ದಾರೆ.

 

Be the first to comment

Leave a Reply

Your email address will not be published.


*