ಸಿಪಿಐ ಮೇಲೆ ಆರೋಪಿಯಿಂದ ಚೂರಿ ಇರಿತ, ಆರೋಪಿ ಕಾಲಿಗೆ ಗುಂಡೇಟು

ಯಾದಗಿರಿ ಪೋಲೀಸ್ ಠಾಣಾ ಸಿಪಿಐ ಮೂಲಿಮನಿ ಮೇಲೆ ಚಾಕುವಿನಿಂದ ಹಲ್ಲೆ : ಆರೋಪಿ ಕಾಲಿಗೆ ಗುಂಡು ತಾಗಿ ಆಸ್ಪತ್ರೆಗೆ ದಾಖಲು.ಯಾದಗಿರಿ ನಗರ ಪೋಲೀಸ್ ಠಾಣೆ ಗುನ್ನೆ ನಂಬರ್ 23/2023 ರಾಬ್ರಿ ಪ್ರಕರಣದ ಪ್ರಮುಖ ಆರೋಪಿ ಮಹ್ಮದ್ ರಫೀ ತಂದೆ ಅಬ್ದುಲ್ ರಸೂಲ್ ಸಾ// ಅಜೀಜ್ ಕಾಲೋನಿ ಈತನು ಪೋಲೀಸರಿಂದ ತಪ್ಪಿಸಿಕೊಂಡು ಹೋಗುವಾಗ ಯಾದಗಿರಿ ನಗರ ಪೋಲೀಸರಿಂದ ಶೂಟೌಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.ಶೂಟೌಟ್ ಆದ ವ್ಯಕ್ತಿಯನ್ನು ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎನ್ನಲಾಗಿದೆ.

ಯಾದಗಿರಿ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ರಾಜೀವ್ ಗಾಂಧಿ ನಗರದ ದೀಪಕ್ ನಂದ ಕಿಶೋರ್ ಜವಾಹರ್ ಎಂಬುವರ ಮನೆಯಲ್ಲಿ ಕಳೆದ 15 ದಿನಗಳ ಹಿಂದೆ ನಡೆದಿದ್ದ ಡಕಾಯಿತಿ ಪ್ರಕರಣದ ಪ್ರಮುಖ ಆರೋಪಿ ಶಫೀ ವಯಸ್ಸು 40 ವರ್ಷ ಈತನ ದಸ್ತರಿಗಾಗಿ ಪಿಐ ಯಾದಗಿರಿ ರವರ ನೇತೃತ್ವದ ತಂಡ ಮಿಂಚಿನ‌ ಕಾರ್ಯಾಚರಣೆ ಮಾಡುತ್ತಿರುವ ಸಂದರ್ಭದಲ್ಲಿ ಆರೋಪಿ ರಫೀ ಈತನು ಯಾದಗಿರಿ ನಗರ ಠಾಣಾ ಹಾಗೂ ದಕ್ಷ ಅಧಿಕಾರಿ ಸಿಪಿಐ ಸುನೀಲ್ ಮೂಲಿಮನಿ ಅವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಪಿಸ್ತೂಲಿನಿಂದ ಗುಂಡು ಹಾರಿಸಲು ಬಂದಾಗ ಮೂಲಿಮನಿ ಅವರು ತಮ್ಮ ಆತ್ಮ ರಕ್ಷಣೆಗೆ ರಫೀ ಈತನ ಮೇಲೆ ಗುಂಡು ಹಾರಿಸಿರುತ್ತಾರೆ.ಈ ಸಂದರ್ಭದಲ್ಲಿ ರಫೀ ಕಾಲಿಗೆ ಗುಂಡು ತಗುಲಿ ಗಾಯಗೊಂಡಿದ್ದರಿಂದ ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Be the first to comment

Leave a Reply

Your email address will not be published.


*