ಕ್ಷೇತ್ರದ ಅಭಿವೃದ್ದಿಗಾಗಿ ಸತತವಾಗಿ ಪ್ರಯತ್ನಿಸುವೆ- ಆರ್. ರುದ್ರಯ್ಯ.

ಲಿಂಗಸಗೂರು:ಸದರಿ ಕ್ಷೇತ್ರಕ್ಕೆ ಸರಕಾರದಿಂದ ಹಣ ಬರುತ್ತಿದ್ದರು ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣುತ್ತಿಲ್ಲ ಮತ್ತು ಸರಕಾರದ ಯೋಜನೆಗಳು ತಳಮಟ್ಟದವರಿಗೆ ತಲುಪುತಿಲ್ಲ ಇಂತಹ ತೊಂದರೆಯನ್ನು ಕಂಡಿರುವ ನಾನು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಸತತವಾಗಿ ಪ್ರಯತ್ನಿಸುವೆ ಎಂದು ಕಾಂಗ್ರೆಸ್ ಪಕ್ಷದ ಟಿಕೇಟ್ ಆಕಾಂಕ್ಷಿ ಆರ್ ರುದ್ರಯ್ಯ ಹೇಳಿದರು

ಅವರು ಪಟ್ಟಣದ ೭ನೇ ವಾರ್ಡಿನಲಿ ನಡೆದ ಜನಾಶಿರ್ವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಸರಕಾರದಿಂದ ಕೋಟಿ ಕೋಟಿ ಹಣ ಬರುತಿದ್ದರು ಅದು ತಳಮಟ್ಟದಲ್ಲಿ ಫಲಾನುಭವಿಗಳಿಗೆ ತಲುಪುವಲ್ಲಿ ವಿಫಲವಾಗಿದೆ ಅಂತಹ ಬಡಜನರಿಗೆ ಸರಕಾರದ ಯೋಜನೆಗಳನ್ನು ತಲುಪಿಸಬೇಕೆಂಬುದೆ ನನ್ನ ಮುಖ್ಯ ಉದ್ದೇಶವಾಗಿದ್ದು ಅದಕ್ಕಾಗಿ ಜನಸೇವೆ ಮಾಡಲು ಲಿಂಗಸಗೂರು ಕ್ಷೇತ್ರಕ್ಕೆ ಬಂದಿದ್ದೇನೆ ನಾನು ಈಭಾಗದಲ್ಲಿ ಸತತವಾಗಿ ಸಂಪರ್ಕದಲ್ಲಿದ್ದು ಕಷ್ಟನಷ್ಟಗಳನ್ನು ಹತ್ತಿರದಿಂದ ಬಲ್ಲವನಾಗಿದ್ದೇನೆ ಅಲ್ಲದೆ ನಾನು ಕೆಲಸದ ಸಂದರ್ಭದಲ್ಲಿ ಸ್ಲಂ ಬೋರ್ಡ, ನೀರಾವರಿ, ಇತ್ಯಾದಿ ಜನಸೇವೆಯ ಕೆಲಸದ ಇಲಾಖೆಯ ಹುದದೆಗಳಲ್ಲಿ ಸೇವೆ ಸಲ್ಲಿಸಿದ್ದು ಜನರಿಗೆ ಸಿಗಬೇಕಾದ ಸವಲತ್ತುಗಳ ಬಗೆಗೆ ಬಹಳ ಮಾಹಿತಿ ಇದ್ದು ನಾನು ನೌಕರಿಯಲ್ಲಿರುವಾಗಲೆ ಜನರಿಗೆ ಸರಕಾರದ ಯೋಜನೆಗಳು ತಲುವಂತೆ ಮಾಡಿದ ಉದಾಹರಣೆಗಳಿಗೆ ಅದಕ್ಕಾಗಿ ಸರಕಾರದ ಯೋಜನೆಗಳನ್ನು ತಂದು ಫಲಾನುಭವಿಗಳಿಗೆ ತಲುಪಿಸುವ ಕೆಲಸವನ್ನು ಪ್ರಾಮಣಿಕವಾಗಿ ಮಾಡುತ್ತೇವೆ ಮತ್ತು ಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ದುಡಿಯಲು ಸಿದ್ದನಿದ್ದು ಕ್ಷೇತ್ರದ ಜನ ಆಶಿರ್ವಾದ ಮಾಡಬೇಕು ಎಂದರು.

 

ಮತ್ತು ಈಗಿನ ಸರಕಾರ ಕೆಲಸ ಹೇಗೆ ಮಾಡುತ್ತಿದೆ ಎನ್ನುವುದನ್ನು ಕಂಡಿದೀರಿ ಬಿಜೆಪಿ ತಾನು ಘೋಷಿಣೆ ಮಾಡಿದವುಗಳಲ್ಲಿ ಕೇವಲ ೧೦ಮಾತ್ರ ಈಡೇರಿಸಲು ಸಫಲವಾಗಿದೆ ಆದರೆ ಕಾಂಗ್ರೆಸ್ ಸರಕಾರದಲ್ಲಿ ೧೬೮ ಕೆಲಸ ಘೋಷಣೆ ಮಾಡಿತ್ತು. ಅದರಲ್ಲಿ ೫ ಹೊರತುಪಡಿಸಿ ಎಲ್ಲಾ ಕೆಲಸಗಳನ್ನು ಮಾಡಿದೆ ರೈತರ ಸಾಲಮನ್ನಾದಂತಹ ಕೆಲಸ ಮಾಡಿದೆ ಬಡವರಿಗಾಗಿ ದುಡಿಯುವ ಪಕ್ಷ ಕಾಂಗ್ರೆಸ್ ಆಗಿದ್ದು ಅದಕ್ಕೆ ಬೆಂಬಲಿಸಿ ಎಂದು ಮನವಿ ಮಾಡಿದರು ನಂತರದಲ್ಲಿ ಶರಣಯ್ಯ ಗೊರೇಬಾಳ ರುದ್ರಯ್ಯನವರ ನೇತೃತ್ವದಲ್ಲಿ ಪಕ್ಷಸೇರ್ಪಡೆಯಾದರು

ಈ ಸಂದರ್ಭದಲ್ಲಿ ಮುಖಂಡರಾದ ಆರ್ ಎಸ್ ನಾಡಗೌಡ, ನಿವೃತ್ತ ಶಿಕ್ಷಕ ಸಂಗಣ್ಣ ಬಯ್ಯಾಪುರ, ಕೆ ಕಿರಣ ಬಸನಗೌಡ ಕರಡಕಲ್, ಮಾಧವ ನೆಲೋಗಿ, ಅನೀಸ್ ಪಾಷಾ ಮುಸ್ತಾಪ ಸೇರಿದಂತೆ ಇದ್ದರು.

Be the first to comment

Leave a Reply

Your email address will not be published.


*