ಮಸ್ಕಿ, ಮಾರ್ಚ್ 11 : ಪಟ್ಟಣದ ಪೆಟ್ರೋಲ್ ಬಂಕ್ ಹಿಂದುಗದೆಯ ರಸ್ತೆಯೂ ತಗ್ಗು ದಿಣ್ಣೆ ಪ್ರದೇಶಗಳಲ್ಲೇ ಸಾರ್ವಜನಿಕರು ವಿದ್ಯಾರ್ಥಿಗಳು ಓಡಾಡುತ್ತಿದ್ದರು ಜಂಗಲ್ ಕಟ್ಟಿಂಗ್ ಮತ್ತು ಮರಮ್ ಹಾಕದೆ ಇದ್ದ ಪುರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸರಕಾರದ ಗಣ್ಯ ವ್ಯಕ್ತಿಗಳು ಬರುವರು ಎಂದರೆ ತಗ್ಗು ದಿಣ್ಣೆ ಪ್ರದೇಶಗಳಲ್ಲಿ ಮರಮ್ ಹಾಕುವುದು ಎಂಥಹ ಅಭಿವೃದ್ದಿ ಹಾಗೂ ತಾಲೂಕಿನಲ್ಲಿ ಬಹುತೇಕ ಇಲಾಖೆಗಳೇ ಇಲ್ಲದೆ ಹಳೆಯ ತಾಲೂಕು ಗಳಿಗೆ ಅಲೆಯುವ ಸ್ಥಿತಿ ನಿರ್ಮಾಣ ಆಗಿದೆ ಎಂದು ಜಯ ಕರ್ನಾಟಕ ತಾಲೂಕ ಅಧ್ಯಕ್ಷ ಕಿರಣ್ ವಿ ಮುರಾರಿ ಪತ್ರಿಕೆಯ ಮೂಲಕ ತಮ್ಮ ಜನಪರ ಕಾಳಜಿಯ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಮಸ್ಕಿ ತಾಲೂಕಾಗಿ 15 ವರ್ಷ ಆದರೂ ಕೂಡ ಬಹು ಬೇಡಿಕೆಗಳಾದ ಸರ್ಕಾರಿbಆಸ್ಪತ್ರೆ ಮೇಲ್ದರ್ಜೆಗೆ ಏರಿಸುವುದು.ತಾಲೂಕ ತಹಶೀಲ್ದಾರ್ ಕಛೇರಿಯ ಸರ್ಕಾರಿ ಕಟ್ಟಡ.ಸಬ್ ರಿಜಿಸ್ಟ್ ಕಛೇರಿ ಸೇರಿ
ಬಹು ಬೇಡಿಕೆಯ ಸರಕಾರಿ ಕಚೇರಿಗಳೇಇಲ್ಲದೆ ಹಳೆಯ ತಾಲೂಕು ಗಳಾದ ಮಾನವಿ, ಸಿಂಧನೂರು,ಲಿಂಗಸ್ಗೂರು ಗಳಿಗೆ ಅಲೆದು ಅಲೆದು ಬೇಸತ್ತ ಕ್ಷೇತ್ರದ ಜನತೆಯ ಅಲೆಯುವುದನ್ನು ತಪ್ಪಿಸಬೇಕು ಹಾಗೂ ತಾಲೂಕಿನಲ್ಲಿ ಯಾವುದೇ ಇಲಾಖೆಯ ಸರ್ಕಾರಿ ಕಟ್ಟಡಗಳು ಇರುವುದಿಲ್ಲ ಇಂತಹ ಜನಪರ ಕೆಲಸಗಳನ್ನು ಮಾಡಿ ಎಂದು ಮತದಾರ ಪ್ರಭುಗಳು ಜನಪ್ರತಿನಿಧಿ ಗಳನ್ನು ಗೆಲ್ಲಿಸಿದರೇ ವಿನಃ ವಿಧಾನ ಸೌಧದ ತಣ್ಣನೆಯ ಕುರ್ಚಿ ಬಿಸಿ ಮಾಡಿ ಎಂದಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ತುಂಬಾ ಚರ್ಚೆಗೆ ಗ್ರಾಸವಾಗಿದೆ. ಇತಿಹಾಸ ಖ್ಯಾತಿಯ ಅಶೋಕನ ನಾಡು ಎಂದೇ ಪ್ರಸಿದ್ಧಿಯಾಗಿರುವ ಮಸ್ಕಿಯು ಕ್ಷೇತ್ರದ ಅಶೋಕನ ಶಿಲಾ ಶಾಸನವೇ ಅಭಿವೃದ್ಧಿ ಕಾಣದೇ ಹಾಳು ಕುಂಪೆಯಾಗಿಯೇ ಉಳಿದುಬಿಟ್ಟಿದೆ.
ಮಾತು ಎತ್ತಿದರೆ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇವೆ.ಜನರ ಕಷ್ಟಗಳಿಗೆ ಸ್ಪಂದಿಸುವ ಕಾರ್ಯವನ್ನು ಮಾಡುತ್ತೇವೆ ಎಂದು ಗೆದ್ದ ಶಾಸಕರೆಲ್ಲ 15 ವರ್ಷಗಳಿಂದ ಏನೂ ಅಭಿವೃದ್ದಿ ಮಾಡಿದರು..?ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಸಚಿವರು ಹಾಗೂ ಕೇಂದ್ರದ ಪ್ರಮುಖ ಗಣ್ಯ ವ್ಯಕ್ತಿಗಳು ಬರುವರು ಎಂದರೆ ಟಾರ್ ರಸ್ತೆ ಮತ್ತು ಮೊರಮ್ ಹಾಕುವುದು ಇಲ್ಲವಾದರೆ ಧೂಳಿನಲ್ಲಿ, ತಗ್ಗು ದಿಣ್ಣೆ ಪ್ರದೇಶ ಎಂಬ ನರಕದಲ್ಲೇ ನಮ್ಮ ಜೀವನ ಎಂತಹ ವಿಪರ್ಯಾಸ. ನಾವೂ ಜೀವನ ಪರ್ಯಂತ ಮತದಾರರೇ ನಮ್ಮ ಕ್ಷೇತ್ರದ ಶಾಸಕರು ತಮ್ಮ ಮನೆ ಮಕ್ಕಳ ಸಂಭಂದಿಗಳ ಅಭಿವೃದ್ಧಿಯಲ್ಲಿ ಯೇ ಅಧಿಕಾರದ ಪಾದರಸ ಕುಡಿಯುವರು.
ಕ್ಷೇತ್ರದ ಜನತೆ ವಿವಿಧ ಗ್ರಾಮಗಳಲ್ಲಿ ನಾನಾ ಬಗೆಯ ಯಾತನೆ ಅನುಭವಿಸುತ್ತಿರುವ ಸಂಧರ್ಭದಲ್ಲಿ ಯಾವ ತರಹದ ಅಭಿವೃದ್ದಿ ಕೆಲಸಗಳು ಮಾಡದ ಜನಪ್ರತಿನಿಧಿಗಳು ಇಂತಹ ರಾಜ್ಯದ ಮತ್ತು ಕೇಂದ್ರದ ಪ್ರಮುಖ ಗಣ್ಯ ವ್ಯಕ್ತಿಗಳು ಬರುವ ಸಂಧರ್ಭದಲ್ಲಿ ಮಾತ್ರ ಅಭಿವೃದ್ದಿ ಕಾರ್ಯಗಳ ಮೇಲೆ ಒಲವು ಎಂದರೆ ಮಸ್ಕಿ ಕ್ಷೇತ್ರದ ಅಭಿವೃದ್ಧಿ ಮಾಡಲು ಬಂದಿಲ್ಲ. ತಮ್ಮ ಹಿತಾಸಕ್ತಿಯನ್ನು ಈಡೇರಿಸಿಕೊಳ್ಳಲು ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ಜಯ ಕರ್ನಾಟಕ ತಾಲೂಕ ಅಧ್ಯಕ್ಷ ಕಿರಣ್ ವಿ ಮುರಾರಿ ಪರೋಕ್ಷವಾಗಿ ಪತ್ರಿಕೆಯ ಮೂಲಕ ಜನಪ್ರತಿನಿಧಿಗಳ ಕಾರ್ಯಗಳನ್ನು ಎಳೆ ಎಳೆಯಾಗಿ ಬಿಡಿಸಿ ತಮ್ಮ ಮನದಾಳದ ಆಕ್ರೋಶದ ಮಾತುಗಳನ್ನು ವ್ಯಕ್ತಪಡಿಸಿದ್ದಾರೆ.
Be the first to comment