ಬೆಂಗಳೂರು; ಬೆಂಗಳೂರು ಮೂಲದ ಶೈಕ್ಷಣಿಕ ನವೋದ್ಯಮ “ಐಆರ್‌ಇಯು ಎಜುಕೇಶನ್” ಸಂಸ್ಥೆ ಹಾಗೂ ಕೆನಡಾದ ಉನ್ನತ ಸಂಸ್ಥೆ ಸಾಸ್ಕಾಚೆವಾನ್ ವಿಶ್ವವಿದ್ಯಾಲಯದ ಜೊತೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಐಆರ್ ಇಯು ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಡಿ.ಎಸ್. ತೇಜಸ್ವಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ “ಐಆರ್‌ಇಯು ಎಜುಕೇಶನ್” ಶಿಕ್ಷಣವು ಕೆನಡಾದ ಪ್ರತಿಷ್ಠಿತ ಸಾಸ್ಕಾಚೆವಾನ್ ವಿಶ್ವವಿದ್ಯಾಲಯದೊಂದಿಗೆ ಔಪಚಾರಿಕ ಪಾಲುದಾರಿಕೆ ಒಪ್ಪಂದಕ್ಕೆ ಇದಾಗಿದೆ. ನಿರ್ದಿಷ್ಟವಾಗಿ ನಿರ್ಮಾಣ, ರಿಯಲ್ ಎಸ್ಟೇಟ್, ಮೂಲ ಸೌಕರ್ಯ, ಸೌಲಭ್ಯಗಳು, 3ಡಿ ಪ್ರಿಂಟಿಂಗ್ ಮತ್ತು ಉದ್ಯಮ ಶೀಲತೆ ವಲಯದಲ್ಲಿ ಎರಡೂ ಸಂಸ್ಥೆಗಳು ಜಂಟಿಯಾಗಿ ಸ್ನಾತಕೋತ್ತರ ಮತ್ತು ನಿರ್ವಹಣಾ ವಿಭಾಗದಲ್ಲಿ ಪದವಿ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಐಆರ್ ಇಯು ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಡಿ.ಎಸ್. ತೇಜಸ್ವಿ ಮತ್ತು ಕೆನಡಾದ ಉನ್ನತ ಸಂಸ್ಥೆ ಸಾಸ್ಕಾಚೆವಾನ್ ವಿಶ್ವವಿದ್ಯಾಲಯದ ಅಧ್ಯಕ್ಷರಾದ ಡಾ. ಲಾರಿ ರೋಸಿಯಾ ಸಹಿ ಹಾಕಿದರು. ಈ ಸಂದರ್ಭದಲ್ಲಿ ಕೆನಡಾ ಪ್ರಧಾನಿ ಸ್ಟಿಫನ್ ಹಾರ್ಪರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಕೈಗಾರಿಕಾ ವಲಯದಲ್ಲಿನಿರ್ದಿಷ್ಟ ಪದವಿ ಕಾರ್ಯಕ್ರಮಗಳು ಎರಡು ವರ್ಷಗಳಿಗೆ ಸೀಮಿತವಾಗಿದ್ದು, ಈ ಕೋರ್ಸ್ ಗಳನ್ನು ಮಾಡಿದವರಿಗೆ ಕೆನಡಾದಲ್ಲಿ ಶೇ 100 ರಷ್ಟು ಉದ್ಯೋಗ ದೊರೆಯಲಿದೆ. ವಾರ್ಷಿಕ ಒಂದು ಕೋಟಿಗೂ ಹೆಚ್ಚಿನ ವೇತನ ಸೌಲಭ್ಯ ದೊರೆಯಲಿದೆ. ಈ ಒಪ್ಪಂದ ನಮ್ಮ ಕಂಪೆನಿ ಮತ್ತು ಭಾರತೀಯ ಶಿಕ್ಷಣ ಪರಿಸರ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲಿದೆ. ಭಾರತೀಯ ವಿದ್ಯಾರ್ಥಿಗಳಿಗೆ ಬಹುದೊಡ್ಡ ಮಟ್ಟದ ಗೆಲುವು ಪ್ರಾಪ್ತವಾಗಲಿದೆ ಎಂದು ತಿಳಿಸಿದರು.
Be the first to comment