ಚಿಕ್ಕ ಉಪ್ಪೇರಿ ಗ್ರಾಮದಲ್ಲಿ ಶಾಲಾ ಕಟ್ಟಡ ಕಳಪೆ ಕಾಮಗಾರಿ ಗ್ರಾಮಸ್ಥರು ಮತ್ತು ಕರುನಾಡು ವಿಜಯ ಸೇನೆ ಪ್ರತಿಭಟನೆ

ವರದಿ : ಅಮರೇಶ ಕಾಮನಕೇರಿ

ಲಿಂಗಸಗೂರ: ಕಲ್ಯಾಣ ಕರ್ನಾಟಕ ಭಾಗ ಮಕ್ಕಳ ಭವಿಷ್ಯ ರೂಪಿಸುವ ಪ್ರಾಥಮಿಕ ಶಿಕ್ಷಣವು ಶಿಕ್ಷಣ ಬುನಾದಿ ಇದ್ದಂತೆ ಪ್ರಾಥಮಿಕ ಶಿಕ್ಷಣ ಕಟ್ಟಡವನ್ನೆ ಬುನಾದಿಯಿಂದಲೆ ಕಾಮಗಾರಿ ಕಳಪೆಯಾಗಿ ಚಿಕ್ಕ ಉಪ್ಪೇರಿ ಮತ್ತು ಸುಣಕಲ್ಲ ಗ್ರಾಮದಲ್ಲಿ ಮಾಡುತ್ತಿದ್ದಾರೆ. ಇಂದು ಚಿಕ್ಕ ಉಪ್ಪೆರಿ ಗ್ರಾಮಸ್ಥರು ಶಾಲಾ ಕಟ್ಟಡದ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ಪ್ರತಿಭಟನೆ ಮಾಡಿದರು ಮತ್ತು ಇಲಾಖೆಯ ಯಾವುದೆ ಅಧಿಕಾರಿ ಇಲ್ಲದೆ ಶಾಲೆಯ ಮೇಲಚಾವಣಿ( ಮೋಡ) ಕಾಂಕ್ರೀಟ್ ಆಕುವುದನು ತಡೆ ಹಿಡಿದಿರುವ ಘಟನೆ ಜರುಗಿದೆ.

ಗ್ರಾಮದ ಹೊಸ ಪ್ಲಾಟ್ ನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಮೀಸಲಿಟ್ಟ ಆವರಣದಲ್ಲಿ 52 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸುತ್ತಿರುವ ಕೊಠಡಿ ಕಾಮಗಾರಿ ಕಳಪೆಯಾಗಿದೆ. ಟೆಂಡರ್ ಅಂದಾಜು ವೆಚ್ಚದಂತೆ ನಿರ್ಮಾಣ ಮಾಡದೆ ತಮ್ಮ ಮನಸಿಗೆ ಬಂದಂತೆ ನಿರ್ಮಾಣ ಮಾಡುತ್ತಿದ್ದಾರೆ. ಎಂದು ಗ್ರಾಮಸ್ಥರು ಕಾಮಗಾರಿ ಸ್ಥಗಿತಗೊಳಿಸಿ, ಪ್ರತಿಭಟಿಸಿದರು. ಇಂಜಿನಿಯರ್ ಗಳನ್ನು ಸಂಪರ್ಕಿಸಿದರೆ ನಮ್ಮ ಗಮನಕ್ಕೆ ಇಲ್ಲ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಶಾಲಾ ಕಟ್ಟಡಕಾಮಗಾರಿಯನ್ನು ತರಾತುರಿಯಲ್ಲಿ ಮಾಡುತ್ತಿರುವುದು ಗ್ರಾಮಸ್ಥರಿಗೆ ಅನುಮಾನ ಬಂದು ಕಾಮಗಾರಿಯನ್ನು ಪರಿಶೀಲಿಸಿದಾಗ ಅಡಿಪಾಯ ಕುಸಿದ್ದಿದು ಕಂಡುಬಂದಿದೆ ಕಳಪೆ ಮಟ್ಟದ ಸಾಮಗ್ರಿ ಬಳಸಿ ಅಡಿಪಾಯದ ಕಾಲಂ,ಪಿಂತ್ ಬೀಮ್ ಹಾಕಿರುವುದು ಗಮನಕ್ಕೆ ಬಂದಿದೆ.

ತರ ತೆಗೆಯದೆ ಕಲ್ಲಿನ ಬುನಾದಿ ನಿರ್ಮಾಣ ಮಾಡುತ್ತಿರುವುದು

ಗುತ್ತಿಗೆದಾರನನ್ನು ಕೇಳಿದಾಗ ಒಂದು ಅಡಿ ಕಾಂಕ್ರೀಟ್‌ ಹಾಕಿದ್ದೀನಿ ಗುಣಮಟ್ಟದ ಕಾಂಕ್ರೀಟ್ ಹಾಕಿದೆನೆ ಎಂದು ಹೇಳಿದಾಗ. ಪ್ರತಿಭಟನಕಾರರು ಕೈಯಿಂದ ಕಾಂಕ್ರೀಟ್‌ ಕೆದಕಿ ನೋಡಿದಾಗ ಕಿತ್ತಿ ಬಂದಿರುವು ಇವರು ಮಾಡಿರುವ ಕಳಪೆ ಕಾಮಗಾರಿ ಕೈಗನ್ನಡಿ ಆಯಿತು. ಕಳಪೆ ಕಾಂಕ್ರೀಟ್‌ಹಾಕಿದ್ದು ಗಮನಕ್ಕೆ ಬಂದಾಗ ಸ್ಥಳೀಯರು ಕೆಂಡಾಮಂಡಲವಾದರು.

ಪ್ರತಿಭಟನೆಯ ಸಂದರ್ಭದಲ್ಲಿ ವರದಿಗಾರರು ಮತ್ತು ಪ್ರತಿಭಟನೆ ಕಾರರು ನೋಡಿ ಹೊಡಿಬಂದ ವಿದ್ಯಾರ್ಥಿ ಒಬ್ಬ ಶಾಲಾ ಕಟ್ಟಡ ಅಡಿಪಾಯ ತೆಗೆಯುವ ಸಂದರ್ಭದಲ್ಲಿ ಮತ್ತು ಅಡಿ ಪಾಯ ಮುಚ್ಚುವ ಸಂದರ್ಭದಲ್ಲಿ ತೆಗೆದ ಪೋಟೋಗಳನ್ನು ವರದಿಗಾರರಿಗೆ ನೀಡಿದ ಅಡಿಪಾಯ 1.8 ಮೀಟರ ತೆಗೆಯಬೇಕು ಆದರೆ 1.0 ಮಿಟರ ತೆಗೆದಿದ್ದು ಮತ್ತು ಸಂಪೂರ್ಣ ವಾಗಿ ಕರಿ ಮಣ್ಣು ಬಳಿಸಿದು ಕಂಡು ಬಂತು ಅಡಿಪಾಯವು SBC (ಗಟ್ಟಿ ಮಣ್ಣು ಬರುವವರೆಗೆ) ನಿಯಮದಂತೆ ಸಂಪೂರ್ಣವಾಗಿ ತೆಗೆಯದೆ ಅವೈಜ್ಞಾನಿಕ ಮತ್ತು ಕಳಪೆ ಮಟ್ಟದ ಎನುವುಕ್ಕೆ ಸಾಕ್ಷಿ ಸಮೇತ ಸಿಕ್ಕಂತಾಗಿದೆ.(ವಿದ್ಯಾರ್ಥಿಯ ಸುರಕ್ಷತೆ ದೃಷ್ಟಿಯಿಂದ ಹೆಸರು ಬಳಸಿಲ್ಲ)

ಗ್ರಾಮಾಂತರ ಪ್ರದೇಶಗಳಲ್ಲಿ ಕಾಮಗಾರಿಯನ್ನು ಯಾರೂ ಪರಿಶೀಲಿಸುವುದಿಲ್ಲ ಎಂದು ಕೊಠಡಿ ನಿರ್ಮಾಣ ಮಾಡುವಾಗ ಸರಿಯಾಗಿ ಬುನಾದಿ ಹಾಕಿಲ್ಲ. ಕಟ್ಟಡ ನಿರ್ಮಾಣದಲ್ಲಿ ಗುಣಮಟ್ಟದ ಸಿಮೆಂಟ್‌, ಮರಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಬಳಕೆ ಮಾಡಿಲ್ಲ.ಆದರಿಂದ ನಿರ್ಮಾಣ ಹಂತದಲ್ಲೆ ಕಟ್ಟಡ ಬಿರುಕು ಮತ್ತು ಕುಸಿದಿದೆ ಎಂದು ಕರುನಾಡಿ ವಿಜಯ ಸೇನೆಯ ತಾಲ್ಲೂಕ ಅಧ್ಯಕ್ಷರಾದ ಹನುಮಂತ ಬಡಿಗೇರ ಆರೋಪಿಸಿ ಗುತ್ತಿಗೆದಾರ ಪರವಾನಿಗೆ ರದ್ದು ಮಾಡಬೇಕು ಎಂದು ಆಗ್ರಹ ಮಾಡಿದರು.

ಈ ಕಟ್ಟಡ ಕಾಮಗಾರಿಯನ್ನು ಕೆಕೆಆರಡಿಬಿ ಅನುದಾನದಲ್ಲಿ KPWD ಇಲಾಖೆಯ ಟೆಂಡರ್ ಮೂಲಕ ಕ್ರಮ ಸಂಖ್ಯೆ RCH221923312ಯ ಕಾಮಗಾರಿಯನ್ನು ಗುತ್ತಿಗೆ ನೀಡಲಾಗಿದೆ. ಈ ಕಳಪೆ ಕಟ್ಟಡ ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣ ಮಾಡಬೇಕು. ಈ ಕಳಪೆ ಕಾಮಗಾರಿ ಕುರಿತು ಕೆಕೆಆರಡಿಬಿ ಅಧ್ಯಕ್ಷಾಗಿರು ಶಾಸಕ ಅಪ್ಪುಗೌಡ ಪಾಟೀಲ್ ರು ಮತ್ತು ಸಂಬಂಧಿಸಿದ ಅಧಿಕಾರಿಗಳು ಹಾಗೂ ಸರಕಾರದ ಗಮನ ಹರಿಸಬೇಕು ಗುತ್ತಿಗೆದಾರರು ಕಳಪೆ ಕಾಮಗಾರಿಯನ್ನು ಮಾಡುತ್ತಿರುವುದು ಸರಿಯಲ್ಲ.ಕಾಮಗಾರಿಗೆ ಸಂಬಂಧಿಸಿದ ಮಾಹಿತಿ ಬೊರ್ಡ ಕೂಡ ಹಾದೆ ಇರುವುದು ಇದರ ಬಗ್ಗೆ ಜಿಲ್ಲಾಧಿಕಾರಿಗಳು ಗಮನಹರಿಸಬೇಕೆಂದು ಮುತ್ತಣ ಶೆಟ್ಟರ್ ಆಗ್ರಹಿಸಿದರು.

 

ಈ ಕಾಮಗಾರಿಯೂ ಲಿಂಗಸಗೂರ ತಾಲ್ಲೂಕಿನ ಪ್ರಭಾವಿ ರಾಜಕೀಯ ಮುಖಂಡರ ಅಣತಿಯಂತೆ ತಮ್ಮ ಹಿಂಬಾಲಕರಿಗೆ ನೀಡಿದ್ದಾರೆ ಎಂದು ವರದಿಗಾರರಿಗೆ ತಿಳಿದು ಬಂದಿದೆ

ಕಲ್ಯಾಣ ಕರ್ನಾಟಕದಲ್ಲಿಉತ್ತಮ ಶಿಕ್ಷಣ ಸಿಗಬೇಕಾದರೆ ಉತ್ತಮ ಗುಣಮಟ್ಟದ ಶಾಲಾ ಕಟ್ಟಡ ನಿರ್ಮಾಣ ಆಗಬೇಕು ತಾಲ್ಲೂಕ ಆಡಳಿತ ಅಧಿಕಾರಿಗಳು,ಜಿಲ್ಲಾ ಮಟ್ಟದ ಅಧಿಕಾರಿಗಳು ಇತ್ತ ಗಮನ ಹರಿಸಬೇಕು ಎಂದು ಈ ಸಂದರ್ಭದಲ್ಲಿ ಗ್ರಾಮಸ್ಥರು ಕರುನಾಡ ವಿಜಯ ಸೇನೆಯ ಪದಾಧಿಕಾರಿಗಳಾದ ಹನುಮಂತ ಬಡಿಗೇರ ,ಹನುಮಂತ ಅರಸನಾಳ,ಸೂಗುರೆಡ್ಡಿ ಮೇಟಿ, ಶಂಕರ ಮೇಟಿ,ಶಣರಣಗೌಡ ಪಾಟೀಲ್, ವೀರಭದ್ರಪ್ಪ ಕುಂಬಾರ,ಮುತ್ತಣ್ಣ ಶೆಟ್ಟರ್,ದೊಡ್ಡಣ್ಣ ಅರಸನಾಳ,ಗದ್ದೆಣ್ಣ ಕುರಿ, ಶಿವಪ್ಪ ತಳವಾರ ಒತ್ತಾಯಿಸಿದ್ದಾರೆ.

Be the first to comment

Leave a Reply

Your email address will not be published.


*