ಜಿಲ್ಲೆಯಾದ್ಯಂತ ಬುಧವಾರ ಬೆಳಗ್ಗೆಯಿಂದಲೇ ರಂಗು ರಂಗಿನ ಹೋಳಿ ಆಟವನ್ನು ಆರಂಭಿಸಲಾಯಿತು. ಕೆಂಬಾವಿ ಪಟ್ಟಣ ನಿವಾಸಿಗಳು ತರಹೇವಾರಿ ಬಣ್ಣಗಳನ್ನು ಪರಸ್ಪರರ ಮೇಲೆ ಎರಚಿ ಸಂಭ್ರಮಿಸಿದರು. ಮಕ್ಕಳು ಪಿಚ್ ಕಾರಿ ಹಿಡಿದು ರಸ್ತೆಯಲ್ಲಿ ಓಡಾಡುವ ಜನರಿಗೆ ರಂಗುಸಿಡಿಸಿದ್ದರು. ಯುವಕ ತಮ್ಮ ಸ್ನೇಹಿತರು ಹಾಗೂ ಸಂಬಂಧಿಗಳ ಮನೆಗೆ ತೆರಳಿ ಬಣ್ಣ ಹಚ್ಚಿ ಬೊಬ್ಬೆ ಹಾಕಿ ಸಂಭ್ರಮಿಸಿದ್ದರು. ಇನ್ನು ಮಧ್ಯಾಹ್ನದ ಹೊತ್ತಿಗೆ ಎತ್ತರಕ್ಕೆ ಗಡಿಗೆಗಳನ್ನು ಕಟ್ಟಿ ಹಾಡುತ್ತಾ ಕುಣಿಯುತ್ತರು. ಎಲ್ಲಡೆ ನಾಗರಿಕರು ಬಣ್ಣಗಳಲ್ಲಿ ಮಿಂದೆದ್ದಿರುವ ದೃಶ್ಯಗಳು ಕಂಡುಬಂದವು. ನಗರದ ಪ್ರಮುಖ ಬೀದಿಗಳಲ್ಲಿ ಮಹಿಳೆಯರೂ ಸಹ ಬಣ್ಣಗಳನ್ನು ಪರಸ್ಪರರು ಎರಚಿ ಕೇಕೇ ಹಾಕಿ, ಕುಣಿದು ಕುಪ್ಪಳಿಸಿದರು. ಜಾನಪದ ಹಾಡುಗಳನ್ನು ಹಾಡುತ್ತಾ ವಿಶಿಷ್ಟವಾಗಿ ಹೋಳಿ ಆಚರಿಸಿದರು.
ಹೊಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ ಯುವ ಸಮೂಹ ಸಿದ್ದರಾಮ ತಳಹಳ್ಳಿ ಸಮಾಜ ಸೇವಕರು ಅಂಬಯ್ಯ ಬಡಿಗೇರ ಬಸವೇಶ್ವರ ಡ್ರೈವಿಂಗ್ ಸ್ಕೂಲ್ ರಾಮು ದೊಡ್ಡಮನಿ ಯಾಳಗಿ ಪರಶುರಾಮ ದೊಡ್ಡಮನಿ ಕೆಂಭಾವಿ ಮತ್ತು ಗೆಳೆಯರ ಬಳಗ.
Be the first to comment