ಚಳ್ಳಕರೆ ಮಾ 08 :: ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ಇತ್ತೀಚೆಗೆ ನನ್ನಿವಾಳ ಗ್ರಾಮ ಪಂಚಾಯತಿಯಲ್ಲಿ ಬಾರಿ ತೂಕದ ಲಾರಿಗಳ ಓಡಾಟ ದಿನಕ್ಕೆ ಹೆಚ್ಚಾಗುತ್ತಿದೆ ಮೊದಮೊದಲು ಕ್ರಷರ್ ಲಾರಿಗಳು ಓಡಾಡುತ್ತಿದ್ದವು ಈಗ ಇದರ ಜೊತೆಗೆ ಮಣ್ಣಿನ ಲಾರಿಗಳು ಓಡಾಡುತ್ತಿವೆ ನನ್ನಿವಾಳ ಗ್ರಾಮ ಪಂಚಾಯತಿಯಲ್ಲಿ ಬರೀ ಕೂಲಿ ಮಾಡುವ ಜನರೇ ಹೆಚ್ಚು ಇದ್ದು ಇದರ ಜೊತೆಗೆ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಜನಾಂಗದ ಬುಡಕಟ್ಟು ಜನರೇ ಹೆಚ್ಚು ಇದ್ದಾರೆ ಇವರು ದಿನನಿತ್ಯ ಪೌಷ್ಟಿಕಾಂಶದ ಆಹಾರವೇನು ಸೇವಿಸುವುದಿಲ್ಲ ಇವತ್ತಿನ ಊಟಕ್ಕೆ ಸಿಕ್ಕಿದರೆ ಸಾಕು ಎನ್ನುವ ಬಡ ಕುಟುಂಬದವರೇ ಇದ್ದಾರೆ ಇಂಥ ಜನಗಳು ಇರುವ ಗ್ರಾಮ ಹಾಗೂ ಬುಡಕಟ್ಟಿನ ಜನಾಂಗದ ಹಟ್ಟಿಗಳಲ್ಲಿ ದಿನನಿತ್ಯ ಸಮಯವಿಲ್ಲದ ಸಮಯದಲ್ಲಿ ಹಗಲಿರುಳು ಎನ್ನದೆ 5 ನಿಮಿಷಕ್ಕೊಮ್ಮೆ ಬಿಡುವಿಲ್ಲದೆ ಒಂದೇ ಸಲ ನಾಲ್ಕೈದು ಬಾರಿ ತೂಕದ ಲಾರಿಗಳು ಓಡಾಡಿದರೆ ಇದರಿಂದ ಗ್ರಾಮಸ್ಥರಿಗೆ ಎಷ್ಟು ತೊಂದರೆ ಆಗಬಹುದು ಒಂದು ಕಡೆ ದೂಳು ಮತ್ತೊಂದು ಕಡೆ ಲಾರಿಯ ಸೌಂಡ್ ಮತ್ತೆ ಲಾರಿಯ ಹಾರನ್ ಬೇರೆ ಈ ರೀತಿ ವಿಪರೀತ ತೊಂದರೆ ದಿನನಿತ್ಯ ಗ್ರಾಮಸ್ಥರು ಅನುಭವಿಸುತ್ತಿದ್ದಾರೆ ಒಂದೇ ಸಲ ನಾಲ್ಕೈದು ಲಾರಿಗಳ ಓಡಾಟದಿಂದ ಜನಗಳಿಗೆ ರಸ್ತೆಯಲ್ಲಿ ಓಡಾಡಲು ಬಹಳ ತೊಂದರೆಯಾಗುತ್ತದೆ ಚಿಕ್ಕಪುಟ್ಟ ಹುಡುಗರು ಮನೆಯಿಂದ ಆಚೆ ಬರಲು ಹೆದರುತ್ತಾರೆ ಮಕ್ಕಳನ್ನು ಮತ್ತು ಮುದುಕರನ್ನು ತಮ್ಮ ಸಂಬಂಧಪಟ್ಟ ಪೋಷಕರು ಕಣ್ಣಿನಲ್ಲಿ ಎಣ್ಣೆ ಬಿಟ್ಟುಕೊಂಡು ಕಾಯಬೇಕಾಗಿದೆ ಈ ಲಾರಿಗಳಿಂದ ರಸ್ತೆಗಳು ಗುಂಡಿಗಳಿಂದ ತುಂಬಿ ಅದೋಗತಿಯ ಸ್ಥಿತಿಯಲ್ಲಿ ತಲುಪಿದೆ.
ಇದರಿಂದ ಸಣ್ಣಪುಟ್ಟ ವಾಹನ ಸವಾರರು ಬಹಳ ಕಿರಿಕಿರಿಯನ್ನು ಅನುಭವಿಸುತ್ತಿದ್ದಾರೆ ಇದರ ಜೊತೆಗೆ ಶಬ್ದ ಮಾಲಿನ್ಯ ವಾಯು ಮಾಲಿನ್ಯ ದಿನ ದಿನಕ್ಕೆ ಹೆಚ್ಚಾಗುತ್ತಿದ್ದು ಇದರಿಂದ ಎಷ್ಟು ಮುದುಕರು ಹಾಸಿಗೆ ಹಿಡಿದಿದ್ದಾರೆ ಶಾಲಾ ಮಕ್ಕಳ ಪರಿಸ್ಥಿತಿಯಂತೂ ಹೇಳ ತೀರದಾಗಿದೆ ಲಾರಿಗಳ ಶಬ್ದಗಳಿಂದ ಮಕ್ಕಳ ಭವಿಷ್ಯ ದಿನ ದಿನಕ್ಕೆ ಹದಗೆಡುತ್ತಿದೆ ನನ್ನಿವಾಳ ಜಿಲ್ಲಾ ಪಂಚಾಯತಿ ಕ್ಷೇತ್ರನು ಹೌದು ತಾಲೂಕು ಪಂಚಾಯತಿ ಕ್ಷೇತ್ರ ಹೌದು ಹಾಗೆ ನನ್ನಿವಾಳ ಎ ಗ್ರೇಡ್ ಪಂಚಾಯತಿಯು ಸಹ ಇಂಥ ರಾಜಕೀಯ ಪ್ರಭಾವ ಇರುವ ನನ್ನಿವಾಳದಲ್ಲಿ ಬಾರಿ ತೂಕದ ಲಾರಿಗಳ ಓಡಾಟದಿಂದ ಇಡೀ ಗ್ರಾಮಕ್ಕೆ ತೊಂದರೆಯಾದರೂ ಸಂಬಂಧಪಟ್ಟ ಇಲಾಖೆಗಳಾದ ಚಳ್ಳೆಕೆರೆ ತಾಲೂಕು ಕಚೇರಿ ಪಿಡಬ್ಲ್ಯೂ ಇಲಾಖೆ ಪೋಲಿಸ್ ಇಲಾಖೆಗಳು ಮೂಗುಬಾಯಿ ಕಿವಿ ಮೂರನ್ನು ಮುಚ್ಚಿಕೊಂಡಿವೆ ಎಂದರೆ ಇದರ ಒಳ ಮರ್ಮವೇನು ಎನ್ನುವುದು ನನ್ನಿವಾಳ ಪಂಚಾಯತಿಯ ಗ್ರಾಮಸ್ಥರೇ ಯೋಚಿಸಬೇಕಾಗಿದೆ
Be the first to comment