ಕೋಲಿ ಸಮಾಜದಲ್ಲಿ ಒಗ್ಗಟ್ಟು ಇರಬೇಕು: ಮುಖಂಡ ಭೀಮಣ್ಣ ಸಾಲಿ

ಚಿತ್ತಾಪುರ: ಕೋಲಿ ಸಮಾಜದಲ್ಲಿ ಸಂಘಟನೆ ಬಲಿಷ್ಠಗೊಳಿಸಬೇಕು. ಸಮಾಜದ ವಿಷಯದಲ್ಲಿ ಸಮಾಜದ ಜನರೆಲ್ಲರೂ ರಾಜಕೀಯ ಪಕ್ಷಪಾತ ಮಾಡದೆ ಒಗ್ಗಟ್ಟು ತೋರಬೇಕು ಎಂದು ಕೋಲಿ ಸಮಾಜದ ಹಿರಿಯ ಮುಖಂಡ ಭೀಮಣ್ಣ ಸಾಲಿ ಅವರು ಹೇಳಿದರು.

ಚಿತ್ತಾಪುರ ಪಟ್ಟಣದಲ್ಲಿನ ನಿಜಶರಣ ಅಂಬಿಗರ ಚೌಡಯ್ಯ ಕಲ್ಯಾಣ ಮಂಟಪದಲ್ಲಿ ಬುಧವಾರ ತಾಲ್ಲೂಕು ಕೋಲಿ ಸಮಾಜದ ಅಧ್ಯಕ್ಷ ರಾಮಲಿಂಗ ಬಾನರ ಅವರ ಅಧ್ಯಕ್ಷತೆಯಲ್ಲಿ ಸಮಾಜದ ಸಭೆಯಲ್ಲಿ ಮಾತನಾಡಿದ ಅವರು, ರಾಜಕೀಯವಾಗಿ ಸಮಾಜಕ್ಕೆ ಸಿಗಬೇಕಾದ ಸಾಮಾಜಿಕ ನ್ಯಾಯ ಇಂದಿಗೂ ಸಿಕ್ಕಿಲ್ಲ. ಕೋಲಿ ಸಮಾಜದ ಜನರು ರಾಜಕೀಯವಾಗಿ ಬೆಳೆಯಲು, ಅಧಿಕಾರ ಪಡೆಯಲು ಸಮಾಜದವರು ಸಹಕರಿಸಬೇಕು. ಒಗ್ಗಟ್ಟು ಇದ್ದಾಗ ಮಾತ್ರ ರಾಜಕೀಯ ಅಧಿಕಾರ ಸಮಾಜವನ್ನು ಹುಡುಕಿಕೊಂಡು ಬರುತ್ತದೆ ಎಂದು ಅವರು ಹೇಳಿದರು.

 

ಪಟ್ಟಣಗಳಲ್ಲಿ ಹಾಗೂ ಗ್ರಾಮೀಣ ಭಾಗದಲ್ಲಿ ಕೋಲಿ ಸಮಾಜದ ಜನರು ತಮ್ಮ ವೈಯಕ್ತಿಕ ವಿಷಯ, ಜಗಳ, ಕಲಹವನ್ನು ತಂದು ಸಮಾಜದ ಮೇಲೆ ಹಾಕಬಾರದು. ಸಮಾಜದ ಜನರ ಸಹಕಾರ ಪಡೆದುಕೊಂಡು ಸಮಸ್ಯೆ ಪರಿಹರಿಸಿಕೊಳ್ಳಬೇಕು. ಸಮಾಜದ ಮೇಲೆ ಬೇರೆ ಯಾರಾದರೂ ದಬ್ಬಾಳಿಕೆ, ದೌರ್ಜನ್ಯ, ಅನ್ಯಾಯ ಮಾಡುತ್ತಿದ್ದರೆ ಸರಿಯಾಗಿ ಪರಾಮರ್ಶಿಸಿ ವಿರೋಧಿಸುವ, ಸಮಾಜಕ್ಕೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ಸಾಮಾಜಿಕ ವ್ಯವಸ್ಥೆಯಲ್ಲಿ ಕೋಲಿ ಸಮಾಜವು ರಾಜಕೀಯವಾಗಿ ಬೆಳೆಯದಂತೆ, ಅಧಿಕಾರ ಸ್ಥಾನ ಪಡೆಯದಂತೆ ಹಿಂದಿನಿಂದಲೂ ಷಡ್ಯಂತರ ನಡೆಯುತ್ತಿದೆ. ಅದು ಈಗಲೂ ಮುಂದುವರೆದಿದೆ. ಕೋಲಿ ಸಮಾಜದವರಾದ ಕೆಲವರು ರಾಜಕೀಯ ಅಧಿಕಾರ ತಮ್ಮಲ್ಲೆ ಇರಬೇಕು ಎಂದು ಸಮಾಜದ ಜನರಿಗೆ ಅಧಿಕಾರ ಸಿಗದಂತೆ ಸಂಚು ಮಾಡುತ್ತಿದ್ದಾರೆ. ಅಧಿಕಾರ ನೀಡಿದ ಪಕ್ಷ ಮತ್ತು ಮುಖಂಡರನ್ನು ನಿಂದಿಸುವ, ತೊಡೆತಟ್ಟುವ ಕೆಲಸ ಮಾಡುವುದು ಉಂಡ ಮನೆಗೆ ದ್ರೋಹ ಮಾಡಿದಂತೆ ಎಂದು ಅವರು ಹೇಳಿದರು.

ಕೋಲಿ ಸಮಾಜದ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಮಾಜದ ಅಧ್ಯಕ್ಷ ರಾಮಲಿಂಗ ಬಾನರ, ಗೌರವಾಧ್ಯಕ್ಷ ಹಣಮಂತ ಸಂಕನೂರು, ಸಲಹಾ ಸಮಿತಿಯ ಮುಖಂಡ ಮಲ್ಲಿಕಾರ್ಜುನ ಎಮ್ಮನೋ‌ರ್, ಬಸವರಾಜ ಚಿನ್ನಮ್ಮಳ್ಳಿ, ಚಂದ್ರಾಮ ಅಮನಗಡೆ, ಯಲ್ಲಪ್ಪ ತಳವಾರ, ಸಂತೋಷಕುಮಾರ ಶಿರನಾಳ, ಶಿವಪ್ಪ ರಾಂಪುರಹಳ್ಳಿ, ಮಲ್ಲಿಕಾರ್ಜುನ ಅಲ್ಲೂರ್ ಮೌನೇಶ ಭಂಕಲಗಾ ಅವರು ಮಾತನಾಡಿದರು.

ಸಭೆಯಲ್ಲಿ ನಗರ ಕೋಲಿ ಸಮಾಜದ ಅಧ್ಯಕ್ಷ ಭೀಮಣ್ಣ ಹೋತಿನಮಡು, ಮುಖಂಡರಾದ ತಮ್ಮಣ್ಣ ಡಿಗ್ಗಿ, ಶರಣಪ್ಪ ನಾಶಿ, ರಾಜೇಂದ್ರ ಪ್ರಸಾದ, ಹಣಮಂತ ಕಟ್ಟಿ, ಶಿವರಾಯ ಹೊಸಮನಿ, ಕರಣಕುಮಾರ ಬೂನಿ, ದಶರಥ ದೊಡ್ಡಮನಿ, ಅಂಬು ಹೋಳಿಕಟ್ಟಿ, ಶರಣಪ್ಪ ಸಿದ್ರಾಮಗೊಳ, ನಾಗೇಂದ್ರ ಜೈಗಂಗಾ, ಮಹೇಶ ಸಾತನೂರು, ಭೀಮಾಶಂಕರ ಹೋಳಿಕಟ್ಟಾ, ಮಹಾದೇವ ಮುಗಟಿ, ಗುರುನಾಥ ಪೋಸ್ತಾ, ದೇವಪ್ಪ ಬಮ್ಮನಳ್ಳಿ ಇಟಗಾ, ಸಾಬಣ್ಣ ಭರಾಟೆ, ಸೂರ್ಯಕಾಂತ ಕೊಂಕನಹಳ್ಳಿ, ದುರ್ಜನಪ್ಪ ಅಲ್ಲೂ‌ರ, ರಾಮಲಿಂಗ ಕೊನಿಗೇರಿ, ಶ್ರೀಶೈಲ್ ನಾಟಿಕಾರ್, ಬಸವರಾಜ ಜಕಾತಿ, ಸಂಗು, ಅಣ್ಣಪ್ಪ‌ ಮ್ಯಾಗೇರಿ, ಯರಗಲ್ ಅನೇಕರಿದ್ದರು.

Be the first to comment

Leave a Reply

Your email address will not be published.


*