ಇಂದಿನಿಂದ ಸರಕಾರಿ ನೌಕರರಿಂದ ಅನಿರ್ಧಿಷ್ಟಾವಧಿ ಮುಷ್ಕರ

ಹುಣಸಗಿ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಕೇಂದ್ರ ಸಂಘ ತಾಲೂಕ ಶಾಖೆ ವತಿಯಿಂದ

ನೌಕರರ ಬಹು ದಿನಗಳ ಬೇಡಿಕೆಗಾಗಿ 1/3/23/ರಂದು ಮುಷ್ಕರ ಹಮ್ಮಿಕೊಂಡಿರು ಪ್ರಯುಕ್ತ ಪೂರ್ವಬಾವಿ ಸಭೆಯನ್ನು ಎಲ್ಲಾ ವೃಂದ ನೌಕರರು ಹಾಗೂ ಅಧ್ಯಕ್ಷರು ಪದಾಧಿಕಾರಿಗಳ ಸಮ್ಮುಖದಲ್ಲಿ ಸಭೆ ಮಾಡಲಾಯಿತು.

ಈ ಸಂದರ್ಭದಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾದ ಮುಷ್ಕರ ಸಭೆಯಲ್ಲಿ ಕರ್ನಾಟಕ ರಾಜ್ಯ ಸರಕಾರಿ ಆರೋಗ್ಯ ಇಲಾಖೆ ನೌಕರರ ಸಂಘದ ಗೌವ ಅಧ್ಯಕ್ಷ ಗುರಿ ಹುಲಕಲ್ ಮಾತನಾಡಿ ಅನೇಕ ವಿಚಾರಗಳನ್ನು ಪ್ರಸ್ತಾಪಿಸಿ ಎಲ್ಲರೂ ಮುಷ್ಕರದಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.

 

ಜೊತೆಗೆ ದಿನಾಂಕ:21-02-2023 ರ ಗುರುವಾರದಂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಮಾರ್ಚ್ 1ನೇ ತಾರೀಖಿನಿಂದ ಅನಿರ್ದಿಷ್ಟಾವಧಿ ಮುಷ್ಕರವನ್ನು ಯಶಸ್ವಿಗೊಳಿಸಲು ಕೋರಿದೆ ಹಾಗಾಗಿ ಸರಕಾರಿ ನೌಕರರಾದ ನಮಗೆ ನಮ್ಮ ಮುಂದಿನ ಭವಿಷ್ಯಕ್ಕಾಗಿ ನಮ್ಮ ನ್ಯಾಯುತವಾದ ಹಕ್ಕುಗಳ ಬೇಡಿಕೆಗಳಿಗಾಗಿ NPS ರದ್ದು ಮಾಡಿ OPS ಮುಂದವರಿಸಬೇಕು ಮತ್ತು 7ನೇ ವೇತನ ಪೇ ಸ್ಕೇಲ್ ಅನ್ನು ಕೂಡಲೇ ಜಾರಿಗೊಳಿಸಲು ಈ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ.

 

ಹೆಚ್ಚಿನ ರೀತಿಯಲ್ಲಿ ಪ್ರಚುರಪಡಿಸುವ ಮೂಲಕ ಸರಕಾರಿ ನೌಕರರಾದ ನಮ್ಮ ಹಕ್ಕನ್ನು ಪಡೆದುಕೊಳ್ಳಲು ಅನುಕೂಲವಾಗುವಂತೆ ಎಲ್ಲಾ ಇಲಾಖೆಯ ನೌಕರರ ಈ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಹೇಳಿದರು.

ಪ್ರಾಥಮಿಕ ಶಾಲಾ‌ಶಿಕ್ಷಕರ ಸಂಘದ ಅಧ್ಯಕ್ಷ ಬಸನಗೌಡ ಪಾಟೀಲ್ ವಠಾರ, ನಾಗಪ್ಪ ಹಡಿಕ್ಯಾಳ, ಶ್ರೀನಾಥ ಹೂಗಾರ ಬಿರಾದಾರ, ಅಮರೇಶ ಮಾಲಗತ್ತಿ, ನಾಗನಗೌಡ ಪಾಟೀಲ್, ನಿಂಗಪ್ಪ ಚವ್ಹಾಣ, ಬಸನಗೌಡ ಪಾಟೀಲ್, ಸೋಮನಗೌಡ, ಸೇರಿದಂತೆ ಇತರರು ಇದ್ದರು.

Be the first to comment

Leave a Reply

Your email address will not be published.


*