ಮಸ್ಕಿ,ಫೆಬ್ರುವರಿ 28 : ರಾಜ್ಯ ಸರ್ಕಾರಿ ನೌಕರರಿಗೆ ೭ ನೇ ವೇತನ ಆಯೋಗ ಸೇರಿದಂತೆ ಇನ್ನಿತರ ಬೇಡಿಕೆಗಾಗಿ ಒತ್ತಾಯಿಸಿ ಮಾರ್ಚ್ ೧ ರಿಂದ ಎಲ್ಲಾ ನೌಕರರು ಕೆಲಸಕ್ಕೆ ಗೈರು ಆಗುವ ಮೂಲಕ ಪ್ರತಿಭಟನೆ ಮಾಡಲು ತಿರ್ಮಾನ ಕೈಗೊಂಡಿರುವ ಹೋರಾಟಕ್ಕೆ ನನ್ನ ಬೆಂಬಲ ಇದೆ ಎಂದು ಅಖಿಲ ಕಾರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ರಾಜ್ಯ ಹಿರಿಯ ಉಪಾಧ್ಯಕ್ಷ ಹಾಗೂ ಮಸ್ಕಿ ಕೃಷಿ ಅಧಿಕಾರಿ ಅಮರೇಶಪ್ಪ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಮಾದ್ಯಮದ ಜೊತೆ ಮಾತನಾಡಿದ ಅವರು ಸರ್ಕಾರಿ ನೌಕರರ ವೇತನ, ಭತ್ಯೆ, ೭ ನೇ ವೇತನ ಆಯೋಗ ಜಾರಿ, ಹಳೇ ಪಿಂಚಣಿ ಯೋಜನೆHappy wedding anniversary Mallikarjun Patil 💐💐💐💐💐💐 ಜಾರಿ ಅನೇಕ ಬೇಡಿಕೆಯನ್ನು ಸರ್ಕಾರದ ಮುಂದೆ ಬೇಡಿಕೆ ಇಡಲಾಗಿತ್ತು. ಪ್ರಸ್ತುತ ಬಜೆಟ್ ನಲ್ಲೂ ಜಾರಿಗೆ ತರಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಒಂದೇ
ಒಂದು ಬೇಡಿಕೆಯನ್ನು ಸರ್ಕಾರ ಈಡೇರಿಸಿಲ್ಲ. ಅದು ಅಲ್ಲದೆ ಮುಂದಿನ ತಿಂಗಳು ಚುನಾವಣೆ ನೀತಿ ಸಂಹಿತೆ ಘೋಷಣೆಯಾಗುತ್ತದೆ. ಆಗ ಜಾರಿ ಮಾಡಲು ಸಾಧ್ಯವಿಲ್ಲ. ಪಿಂಚಣಿ ಯೋಜನೆ ಇಲ್ಲದೆ ಕೆಲ ನೌಕರರ ಪಾಡು ಬಿದೀಗೆ ಬೀಳುವಂತಾಗಿದೆ. ನೌಕರರು ಇಲಾಖೆಗೆ ಗೈರು ಆಗುವ ಮೂಲಕ ಮಾಡುವ ಪ್ರತಿಭಟನೆಗೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದಿದ್ದಾರೆ.
Be the first to comment