ಬಿ.ಜಯಾಚಾರ್ಯ ಅವರ ನಿಧನಕ್ಕೆ ಯಸಪಾಲ್ ಸುವರ್ಣ ಸಂತಾಪ

ಬೆಂಗಳೂರು: ಯಾದಗಿರಿ ಜಿಲ್ಲೆಯ ಹಿರಿಯ ನ್ಯಾಯವಾದಿ ಹಾಗೂ ಜನಸಂಘದ ಹಿರಿಯರಾಗಿದ್ದ ಬಿ.ಜಯಾಚಾರ್ಯ ಅವರ ನಿಧನಕ್ಕೆ ಬಿಜೆಪಿ ಹಿಂದುಳಿ ವರ್ಗದ (OBC) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಸಪಾಲ್ ಸುವರ್ಣ ಅವರು ತೀವ್ರ ಸಂತಾಪ ಸೂಚಿಸಿದ್ದು, ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಬಿ.ಜಯಾಚಾರ್ಯ ಅವರ ನಿಧನದಿಂದ ಜನಸಂಘದ ಹಿರಿಯ ಕೊಂಡಿ ಕಳಚಿದಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

1975 ರ ಇಂದಿರಾಗಾಂಧಿ ದೇಶದ ಮೇಲೆ ಹೇರಿದ್ದ ತುರ್ತು ಪರಿಸ್ಥಿತಿ ಖಂಡಿಸಿ, ಹಲವು ಹೋರಾಟಗಳಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ 6 ತಿಂಗಳ ಕಾಲ ಕಲಬುರಗಿ ಕಾರಾಗೃಹದಲ್ಲಿ ಅವರನ್ನು ಬಂಧಿಸಿ ಇಡಲಾಗಿತ್ತು. ಮೊದಲಿನಿಂದಲೂ ಹೋರಾಟದ ಮನೋಭಾವ ಮೈಗೂಡಿಸಿಕೊಂಡಿದ್ದ ಅವರು, ಸಂಘ- ಪರಿವಾರದ ನಿಕಟವರ್ತಿಗಳಾಗಿದ್ದರು ಎಂದಿದ್ದಾರೆ.

 

ಒಂದು ಕಾಲಕ್ಕೆ ಯಾದಗಿರಿಯಲ್ಲಿ ಬಿಜೆಪಿ ಝಂಡಾ ಹಿಡಿಯಲು ಯಾರೂ ಸಿಗದ ಸ್ಥಿತಿ ಇತ್ತು. ಇಂಥ ಸಂದರ್ಭದಲ್ಲಿ ಕೇಸರಿ ಆಸ್ಮಿತೆ ಮೂಡಿಸುವ ನಿಟ್ಟಿನಲ್ಲಿ ತಮ್ಮ ಹಳೆ ಸ್ಕೂಟರ್ ಏರಿ ಸುತ್ತಲಿನ ಊರೂರು ಅಲೆದು ಬಿಜೆಪಿ ಸಂಘಟನೆಗೆ ಒತ್ತು ನೀಡಿದ್ದರು. ನೋಡಲು ಲಾಲ್ ಕೃಷ್ಣ ಅಡ್ವಾಣಿ ಅವರಂತೇ ಕಾಣುತ್ತಿದ್ದ ಆಚಾರ್ಯರು ಜೀವನದಲ್ಲಿ ಶಿಸ್ತು ಮತ್ತು ಸಮಯ ಪರಿಪಾಲನೆಗೆ ಅದ್ಯತೆ ನೀಡುದವರು. ಅಲ್ಲದೆ, ಕೊನೆಯವರೆಗೂ ತಾವು ನಂಬಿದ್ದ ಸಿದ್ದಾಂತಗಳಿಗೆ ಉಸಿರು ತುಂಬಿದ್ದರು. ಬಿಜೆಪಿ ಸ್ಟೇಟ್ ಕೌನ್ಸಿಲ್ ಸದಸ್ಯರಾಗಿ, ಕಲಬುರಗಿ, ರಾಯಚೂರು ಖಾದಿ ಗ್ರಾಮೋದ್ಯೋಗ ಮಂಡಳಿಯ ಅದ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

ಜೀವನದ ಕೊನೆ ಉಸಿರಿರುವ ವರೆಗೂ ಅವರು ಬಿಜೆಪಿ ಸಿದ್ದಾಂತಕ್ಕೆ ಕಟಿಬದ್ಧರಾಗಿದ್ದರು. ಮೃತರ ಕುಟುಂಬದವರು, ಬಂಧುಮಿತ್ರರು ಮತ್ತು ಅಭಿಮಾನಿಗಳಿಗೆ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಆ ಪರಮಾತ್ಮನು ನೀಡಲಿ ಎಂದು ಬಿಜೆಪಿ ಹಿಂದುಳಿ ವರ್ಗದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಸಪಾಲ್ ಸುವರ್ಣ ಅವರು ಪ್ರಾರ್ಥಿಸಿದ್ದಾರೆ.

 

Be the first to comment

Leave a Reply

Your email address will not be published.


*