ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನು ಆಯ್ಕೆ ಮಾಡುವಂತೆ ವಿಜಯ್ ಬಡಿಗೇರ್ ಒತ್ತಾಯ

ಮಸ್ಕಿ, ಫೆಬ್ರುವರಿ 26 : ವಿಶ್ವಕರ್ಮ ಸಮಾಜದ ಪಂಚ ಕುಲ ಕಸುಬುಗಳಾದ ಬಡಿಗಿತನ,ಕಮ್ಮಾರಿಕೆ, ಅಕ್ಕಸಾಲಿಗರು,ಕಂಚು,ಹಾಗೂ ಶಿಲ್ಪಕಲೆಗಳ ಉತ್ತೇಜನಕ್ಕಾಗಿ ಸರ್ಕಾರ ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದೆಮಾಡಿದೆ. ಆದರೆ ವಿಶ್ವಕರ್ಮ ಅಭಿವೃದ್ಧಿ ನಿಗಮ ಸುಮಾರು 8ತಿಂಗಳುಗಳಿಂದ ಅಧ್ಯಕ್ಷರಿಲ್ಲದೇ ಖಾಲಿ ನಿಗಮವಾಗಿದೆ. ಕೂಡಲೇ ಸರ್ಕಾರ ನಿಗಮದ ಅಧ್ಯಕ್ಷರನ್ನು ನೇಮಕ ಮಾಡಬೇಕೆಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಯಚೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾದ ವಿಜಯ್ ಬಡಿಗೇರ್ ಮಸ್ಕಿ ಪತ್ರಿಕೆ ಮೂಲಕ ಒತ್ತಾಯಿಸಿದ್ದಾರೆ.

 

ವಿಶ್ವಕರ್ಮ ಸಮಾಜದ ನಾಯಕರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಕೆ.ಪಿ.ನಂಜುಂಡಿ ವಿಶ್ವಕರ್ಮ ಅವರು ಸುಮಾರು 8ವರ್ಷಗಳಿಂದ ಸಮಾಜದ ಜನರನ್ನು ಒಗ್ಗೂಡಿಸಿ ಕುಲಕಸುಬುಗಳಿಗೆ ಸರ್ಕಾರದಿಂದ ಆರ್ಥಿಕ ಸಹಾಯ ನೀಡಲು ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕೆಂದು ರಾಜ್ಯಾದ್ಯಂತ ಹಲವಾರು ಹೋರಾಟಗಳನ್ನು ಮಾಡಿ ಸರ್ಕಾರಕ್ಕೆ ಒತ್ತಡ ಹೇರಿದಾಗ ಸರ್ಕಾರ ವಿಶ್ವಕರ್ಮ ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಮಾಡಿತು.ರಾಜ್ಯದಲ್ಲಿ 45ಲಕ್ಷಕ್ಕಿಂತ ಹೆಚ್ಚಿನ ವಿಶ್ವಕರ್ಮರು ಈ ನಿಗಮದಲ್ಲಿ ಸಾಲಪಡೆದು ಆರ್ಥಿಕವಾಗಿ ಮುಂದೆಬರಲು ಸರ್ಕಾರದ ಸಹಾಯ ಹಸ್ತ ಚಾಚಿದ್ದಾರೆ. ಆದರೆ ಸರ್ಕಾರ ಸುಮಾರು 8ತಿಂಗಳುಗಳಿಂದ ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನೇ ನೇಮಕ ಮಾಡಿಲ್ಲ. ಯಾಕೆ ಇಷ್ಟು ತಾರತಮ್ಯ, ನಾವುಗಳು ಸರ್ಕಾರದ ಸೌಲಭ್ಯಗಳನ್ನು ಯಾರಲ್ಲಿ ಕೇಳಬೇಕು,ನಮಗೆ ರಾಜಕೀಯ ಗೊತ್ತಿಲ್ಲ, ಶಿಕ್ಷಣವಂತರಂತೂ ಅಲ್ಲವೇ ಅಲ್ಲ ಹೀಗಾದರೆ ನಮ್ಮ ಸಮಾಜದ ಬಡವರು ಸರ್ಕಾರದ ಸೌಲಭ್ಯಗಳನ್ನು ಹೇಗೆ ಪಡೆದುಕೊಳ್ಳಬೇಕು, ನಮ್ಮಂತಹ ಸಣ್ಣಸಮಾಜಗಳನ್ನು ಸರ್ಕಾರ ಕಡೆಗಣಿಸುತ್ತಿರುವುದು ಸರಿಯಲ್ಲ,ಅದರಲ್ಲೂ ಸಮಾಜಕ್ಕೆ ಹಗಲಿರುಳು ಶ್ರಮಿಸಿದವರನ್ನು ಗುರುತಿಸ ಬೇಕು ಈಗಾಗಲೇ ರಾಜ್ಯದ ವಿವಿಧ ಭಾಗಗಳಿಂದ ನಿಗಮದ ಅಧ್ಯಕ್ಷರನ್ನು ನೇಮಿಸಿ ಕಲ್ಯಾಣ ಕರ್ನಾಟಕ ಭಾಗವನ್ನು ನಿರ್ಲಕ್ಷಿಸಲಾಗಿದೆ.

ಈ ಭಾಗದಲ್ಲಿ ಸಮಾಜಕ್ಕೆ ದುಡಿದವರನ್ನು ಗುರುತಿಸಬೇಕು ಮತ್ತು ಈ ಭಾಗದ ಸರಳ ಸಜ್ಜನಿಕೆ ವ್ಯಕ್ತಿಗಳು ಹಾಗೂ ಹಗಲಿರುಳು ಸಮಾಜದ ಬಗ್ಗೆ ಚಿಂತನೆ ಮಾಡಿ ಸಮಾಜವನ್ನು ಸಂಘಟನೆ ಮಾಡುವ ಶ್ರೀ ಲೋಹಿತ್ ವೈ ಕಲ್ಲೂರು ಅವರನ್ನು ಈ ಸರ್ಕಾರ ಕೂಡಲೇ ವಿಶ್ವಕರ್ಮ ನಿಗಮಕ್ಕೆ ಅಧ್ಯಕ್ಷರಾಗಿ ನೇಮಕ ಮಾಡಬೇಕು ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ನಮ್ಮ ಸಮಾಜದ ಜನರು ತಕ್ಕ ಉತ್ತರ ನೀಡಲಿದ್ದಾರೆ. ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಯಚೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ್ ಬಡಿಗೇರ್ ಮಸ್ಕಿ ಪತ್ರಿಕೆಯ ಮೂಲಕ ಒತ್ತಾಯಿಸಿದರು .

Be the first to comment

Leave a Reply

Your email address will not be published.


*