ಛತ್ರಪತಿ ಶಿವಾಜಿ ಮಹಾರಾಜರ ಅದ್ದೂರಿ ಮೆರವಣಿಗೆ

ಮಸ್ಕಿ, ಫೆಬ್ರುವರಿ 26 : ಭಾರತವನ್ನು ವಿಶ್ವಗುರು ವಿಶ್ವ ಮಾಡಲು ಹಿಂದೂ ಮಹಿಳೆಯರು ಹಾಗೂ ಸಂಘಟನೆಗಳ ಕಾರ್ಯಕರ್ತರು ಕಂಕಣ ಬದ್ಧರಾಗವು ಕಾಲ ಬಂದಿದೆ ಎಂದು ಹಿಂದೂ ಹೋರಾಟಗಾರ್ತಿ ಚೈತ್ರಾ ಕುಂದಾಪುರ ಕರೆ ನೀಡಿದರು.

 

ಪಟ್ಟಣದ ತೇರಿನ ಮನೆ ಹತ್ತಿರ ಭಜರಂಗ ದಳ ಹಾಗೂ ವಿಶ್ವ ಹಿಂದೂ ಪರಿಷತ್ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಜಯಂತಿ ಕಾರ್ಯ- ಕ್ರಮದಲ್ಲಿ ಮಾತನಾಡಿದ ಅವರು, ‘ಶಿವಾಜಿ ಜಯಂತಿ ಎಂದರೆ ಕೆಲ ವರಿಗೆ ಹೊಟ್ಟೆ ಉರಿ, ಶಿವಾಜಿ ಇರದಿದ್ದರೆ ಇವತ್ತು ಹಿಂದೂ ಸಮಾಜ ಮತಾಂತರ ವಾಗಿ ನಾಶ ಆಗುತ್ತಿತ್ತು’ ಎಂದರು. ಛತ್ರಪತಿ ಶಿವಾಜಿ ಮಹಾರಾಜರ ಅದ್ದೂರಿ ಮೆರವಣಿಗೆ

ಅಖಂಡ ಹಿಂದೂ ಸಮಾಜಕ್ಕೆ ತನ್ನ ಜೀವನವನ್ನು ಮುಡುಪಾಗಿಟ್ಟ ಶಿವಾಜಿ ಅವರನ್ನು ಕನ್ನಡಿಗರಲ್ಲ ಎಂಬ ಬೇಧ ಹುಟ್ಟು ಹಾಕುವವರಿಗೆ ಪಾಠ ಕಲಿಸಬೇಕು. ಶಿವಾಜಿ ಇರದಿದ್ದರೆ ಇಂದು ಹಿಂದೂ ದೇವಸ್ಥಾನಗಳು ಇರುತ್ತಿರಲಿಲ್ಲ’ ಎಂದು ಹೇಳಿದರು.

 

ಹಿಂದೂ ಸಮಾಜದ ರಕ್ಷಣೆಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ. ಮನೆ ಮಕ್ಕಳು ಯಾರೊಂದಿಗೆ ಸ್ನೇಹ ಬೆಳೆಸಿದ್ದಾರೆ ಎಂಬುದರ ಬಗ್ಗೆ ಗಮನ ಕೊಡಬೇಕು. ಲವ್ ಜಿಹಾದ್ ಹೆಸರಿನಲ್ಲಿ ಹಿಂದೂ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ, ನಡೆಯುತ್ತಿದೆ. ಈ ಬಗ್ಗೆ ಪಾಲಕರು ಎಚ್ಚರಿಕೆ ವಹಿಸಬೇಕು’ ಎಂದರು.

 

ಗಚ್ಚಿನಮಠದ ವರರುದ್ರಮುನಿ ಸ್ವಾಮಿಗಳು, ಅಮರೇಶ ಬ್ಯಾಳಿ, ಮಲ್ಲಿಕಾರ್ಜುನ ಎಚ್.ಕೆ., ಸರ್ವೇಶ್ವರ ರಾವ್, ಭಜರಂಗ ದಳದ ತಾಲ್ಲೂಕು ಸಂಯೋಜಕ ರಾಕೇಶ ಪಾಟೀಲ, ಹುಸೇನಪ್ಪ ಬಾರಕೇರ್, ರವಿಕುಮಾರ ಮಾನ್ವಿ ಇದ್ದರೂ.

ಶಿವಾಜಿ ಜಯಂತಿ ನಿಮಿತ್ತ ಪ್ರಮುಖ ಬೀದಿಗಳಲ್ಲಿ ಹಮ್ಮಿಕೊಂಡಿದ್ದ ಶಿವಾಜಿ ಮೆರವಣಿಗೆಗೆ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಚಾಲನೆ ನೀಡಿದರು. ನೂರಾರು ಯುವಕರು ಕೆಸರಿ ಬಾವುಟದೊಂದಿಗೆ ಪಾಲ್ಗೊಂಡಿದ್ದರು. ಬೀಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

 

ಮಸ್ಕಿ ಯಲ್ಲಿ ನಡೆದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಹಿಂದೂ ಹೋರಾಟಗಾರ್ತಿ ಚೈತ್ರ ಕುಂದಾಪುರ ಮಾತನಾಡಿದರು.

Be the first to comment

Leave a Reply

Your email address will not be published.


*