ಐಟಿಸಿಯಿಂದ ನೀರು, ತ್ಯಾಜ್ಯ ಮತ್ತು ಜೀವವೈವಿಧ್ಯ ನಿರ್ವಹಣೆ ಕುರಿತು ಪ್ರದರ್ಶನ

ಬೆಂಗಳೂರು: ಐಟಿಸಿ ಲಿಮಿಟೆಡ್ ತನ್ನ ಸಾಮಾಜಿಕ ಹೂಡಿಕೆಯ ಅಂಗವಾದ “ಐಟಿಸಿ ಮಿಷನ್ ಬಂಗಾರದ ಭವಿಷ್ಯದೆಡೆಗೆ” ಅಡಿಯಲ್ಲಿ ಬಯೋಮ್ ಎನ್ವಿರಾನ್ಮೆಂಟಲ್ ಟ್ರಸ್ಟ್ ಮತ್ತು ಮೈರಾಡ ಸಹಯೋಗದೊಂದಿಗೆ ಫೆಬ್ರವರಿ 24, 2023’ರಂದು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಸೊನ್ನಪ್ಪನಹಳ್ಳಿ, ಬೆಂಗಳೂರು ಉತ್ತರದಲ್ಲಿ, ಸಮುದಾಯ ಭಾಗಿತ್ವದಲ್ಲಿ “ನೀರು, ತ್ಯಾಜ್ಯ ಮತ್ತು ಜೀವವೈವಿಧ್ಯ ನಿರ್ವಹಣೆ” ಕುರಿತು ಪ್ರದರ್ಶನ ನಡೆಯಿತು.

 

ಬೆಂಗಳೂರು ಉತ್ತರ ಪ್ರದೇಶದಲ್ಲಿ, ನಗರ ಪ್ರದೇಶದಲ್ಲಿ ಸುಸ್ಢಿರ ನೀರು ನೀರು ನಿರ್ವಹಣಾ ಪದ್ಧತಿಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಉತ್ತೇಜಿಸುವ ಕಾರ್ಯಕ್ರಮದ ಭಾಗವಾಗಿ ವಾಟರ್ಮೆನ್ ತರಬೇತಿ, ಪಾಲುದಾರರ ಕಾರ್ಯಾಗಾರಗಳು, ನೀರಿನ ಬೇಡಿಕೆಯ ನಿರ್ವಹಣೆ, ಮೇಲ್ಛಾವಣಿ ಮಳೆನೀರು ಕೊಯ್ಲು, ಅಂತರ್ಜಲ ಮರುಪೂರಣಕ್ಕೆ ಇಂಗು ಬಾವಿಗಳ ನಿರ್ಮಾಣ, ತೆರೆದ ಬಾವಿ, ಕಲ್ಯಾಣಿ, ಕೆರೆಗಳ ಪುನರುಜ್ಜೀವನ ಮುಂತಾದ ವಿವಿಧ ಉಪಕ್ರಮಗಳನ್ನು ಐಟಿಸಿ ಬೆಂಬಲಿತ ಯೋಜನೆ ಮೂಲಕ ಬಯೋಮ್ ಎನ್ವಿರಾನ್ಮೆಂಟಲ್ ಟ್ರಸ್ಟ್ ಜಾರಿಗೊಳಿಸಲಾಗಿದೆ. ಈ ಉಪಕ್ರಮಗಳು ಮತ್ತು ಕಾರ್ಯಗಾರಗಳನ್ನು ಆಯ್ದ ಪ್ರೇಕ್ಷಕರು ಮತ್ತು ಪಾಲುದಾರರ ಮೇಲೆ ಕೇಂದ್ರೀಕೃತವಾಗಿ ಔಪಚಾರಿಕವಾಗಿ ನಡೆಸಲಾಗಿತ್ತು.

 

 

ಸುಸ್ಥಿರತೆ ಮತ್ತು ಜೀವನೋಪಾಯಗಳ ಕುರಿತು ಕ್ರಿಯಾಶೀಲ ಮಾಹಿತಿಯನ್ನು ಹಂಚಿಕೊಳ್ಳಲು, ಬಯೋಮ್ ಎನ್ವಿರಾನ್ಮೆಂಟಲ್ ಟ್ರಸ್ಟ್, ಮೈರಾಡಾ, ಸಾಹಸ್, ವಾಶ್, ಪ್ರಥಮ್ ಫೌಂಡೇಶನ್, ಅನುದೀಪ್ ನಂತಹ ಐಟಿಸಿ ಪಾಲುದಾರ ಎನ್ಜಿಒಗಳ ಜೊತೆ ಸರ್ಕಾರಿ ಜಲ ಜೀವನ್ ಮಿಷನ್ – ಬೆಂಗಳೂರು ನಗರ, ಜಲ ಜೀವನ್ ಮಿಷನ್ – ಬೆಂಗಳೂರು ಗ್ರಾಮಾಂತರ’ಗಳಿಂದ ಪ್ರದರ್ಶನ ಮಳಿಗೆಗಳನ್ನು ಇರಿಸಲಾಗಿತ್ತು. ಫಾಮ್ಲ್ಯಾರ್ಂಡ್ ರೈನ್ವಾಟರ್ ಹಾರ್ವೆಸ್ಟಿಂಗ್ ಸಿಸ್ಟಮ್ ಅವರಿಂದ ಮಳೆ ನೀರು ಕೊಯ್ಲಿನ ಪ್ರಾತ್ಯಕ್ಷತೆಯ ಮೊಬೈಲ್ ವ್ಯಾನ್ ಕೂಡ ಪ್ರದಶಿಸಲಾಯಿತು.

 

ಈ ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಐಟಿಸಿಯ ಪ್ರಧಾನ ವ್ಯವಸ್ಥಾಪಕರಾದ ಮನೋಜ್ ಶುಕ್ಲಾ, ಐಟಿಸಿ ಕಾರ್ಖಾನೆಯ ಭದ್ರತಾ ವ್ಯವಸ್ಥಾಪಕ ವಿಜಯ್ ಸಿಂಗ್, ಐಟಿಸಿಯ ಶ್ರ. ಹರೀಶ್ ಬಾಬು, ರಾಷ್ಟ್ರೀಯ ಮತ್ತು ರಾಜ್ಯ ಸರ್ಕಾರದ ಪ್ರಶಸ್ತಿ ವಿಜೇತ ಮತ್ತು ನಿವೃತ್ತ ಸರ್ಕಾರಿ ಶಾಲಾ ಮುಖ್ಯೋಪಾಧ್ಯಾಯರಾದ ಭದ್ರಯ್ಯ, ಕೆಎಸ್.ಆರ್.ಟಿ.ಸಿ. ಮುಖ್ಯ ವೈಜ್ಞಾನಿಕ ಅಧಿಕಾರಿ ಯು.ಟಿ ವಿಜಯ್, ಬೆಂಗಳೂರು ನಗರ ಜಿಲ್ಲೆ ಜಲ ಜೀವನ್ ಮಿಷನ್’ನ ಡಿಪಿಎಂ (ಜಿಲ್ಲಾ ಕಾರ್ಯಕ್ರಮ ನಿರ್ವಾಹಕರು) ಶ್ರೀಮತಿ ಉμÁ, ಬಯೋಮ್ ನೀರು ನಿರ್ವಹಣೆ ತಂಡದ ಮುಖ್ಯಸ್ಥೆ ಶ್ರೀಮತಿ ಶುಭಾ ರಾಮಚಂದ್ರನ್, ಹುಣಸಮಾರನಹಳ್ಳಿ ಟಿಎಂಸಿಯ ಮುಖ್ಯಾಧಿಕಾರಿ ಕಾಂತರಾಜ್, ಹುಣಸಮಾರನಹಳ್ಳಿ ಟಿಎಂಸಿಯ ಎಂಜಿನಿಯರ್ ವಿನೋದ್, ಸೊನ್ನಪ್ಪನಹಳ್ಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ವೆಂಕಟೇಗೌಡ ಭಾಗವಹಿಸಿದ್ದರು.

 

ಮನೋಜ್ ಶುಕ್ಲಾ, ಐಟಿಸಿಯ ಜನರಲ್ ಮ್ಯಾನೇಜರ್ ಮಾತನಾಡಿ ಅಂಗನವಾಡಿಗಳು ಮತ್ತು ಶಾಲೆಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸುವುದರ ಜೊತೆಗೆ ಗುಣಮಟ್ಟದ ಶಿಕ್ಷಣ, ನಿರುದ್ಯೋಗಿ ಯುವಕರಿಗೆ ವೃತ್ತಿಪರ ತರಬೇತಿ ಜೊತೆಗೆ ಉದ್ಯೋಗ ನಿಯೋಜನೆಗೆ ಬೆಂಬಲಿಸುವುದು, ಘನ ತ್ಯಾಜ್ಯ ನಿರ್ವಹಣೆ ಐಟಿಸಿಯ ಸಾಮಾಜಿಕ ಅಭಿವೃದ್ಧಿ ಉಪಕ್ರಮಗಳನ್ನು ಈ ಪ್ರದೇಶದಲ್ಲಿ ಜಾರಿಗೊಳಿಸಿರುವುದರ ಕುರಿತು ವಿವರಿಸಿದರು.

 

ಕೆಎಸ್.ಆರ್.ಟಿ.ಸಿ. ಮುಖ್ಯ ವೈಜ್ಞಾನಿಕ ಅಧಿಕಾರಿ ಯು.ಟಿ.ವಿಜಯ್ ಅವರು ಮಳೆನೀರು ಕೊಯ್ಲಿನ ವಿವಿಧ ವಿಧಾನಗಳ ಬಗ್ಗೆ ವಿವರಿಸಿದರು. ಸೊನ್ನಪ್ಪನಹಳ್ಳಿ ಶಾಲೆಯ ಪರವಾಗಿ ಮುಖ್ಯೋಪಾಧ್ಯಾಯರಾದ ವೆಂಕಟೇಗೌಡ ಮತ್ತು ಶಿಕ್ಷಕರು ಐಟಿಸಿಗೆ ಕೃತಜ್ಞತೆ ಸಲ್ಲಿಸಿದರು. ಮೂರು ಅತ್ಯುತ್ತಮ ಪ್ರಯತ್ನಗಳಿಗೆ ವಿಶೇಷ ಬಹುಮಾನ ನೀಡಲಾಯಿತು. ವಿವಿಧ ಸಂಪನ್ಮೂಲ ವ್ಯಕ್ತಿಗಳನ್ನು ಮತ್ತು ಸಂಘ ಸಂಸ್ಥೆಗಳನ್ನು ಒಟ್ಟುಗೂಡಿಸಿ ಸುಸ್ಥಿರ ಆಚರಣೆಗಳ ಪ್ರಾತ್ಯಕ್ಷತೆಯನ್ನೂ ಏರ್ಪಡಿಸಿದರು.

Be the first to comment

Leave a Reply

Your email address will not be published.


*