ಅಧಿಕಾರ ದುರ್ಬಳಿಸಿ ಅಕ್ರಮ ಆಸ್ತಿಗಳಿಕೆ ಆರೋಪ .

ಬಾಗಲಕೋಟೆ ಜಿಲ್ಲೆಯ ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಮೇಲೆ ಅಕ್ರಮ ಆಸ್ತಿ ಹೊಂದಿರುವ ಆರೋಪ ಕೇಳಿ ಬರುತ್ತಿದ್ದು ಇದೀಗ ಅಕ್ರಮವಾಗಿ ನೂರಾರು ಎಕರೆ ಜಮೀನು ಗಳಿಸಿದ್ದಾರೆ ಎಂದು ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಆರೋಪ ಮಾಡಿ ತೇರದಾಳ ನಗರದ ಪ್ರಭುಲಿಂಗೇಶ್ವರ ದೇವಸ್ಥಾನದಿಂದ ರಬಕವಿ ಬನಹಟ್ಟಿ ತಾಲ್ಲೂಕಿನ ತಹಸಿಲ್ದಾರ ಕಛೇರಿವರಿಗೆ ಪಾದಯಾತ್ರೆ ಮಾಡಿ ಸರ್ಕಾರ ಕೂಡಲೆ ಶಾಸಕರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ತಹಸಿಲ್ದಾರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈಗಾಗಲೇ ಕಾಂಗ್ರೆಸ್ ಮುಖಂಡ ರಾಜು ನಂದೆಪ್ಪನವರ (ದೇಸಾಯಿ) ಲೋಕಾಯುಕ್ತರಿಗೆ ದೂರು ನೀಡಿದ್ದು ಸರ್ಕಾರ ಯಾವುದೆ ರೀತಿಯ ಕ್ರಮ ಜರುಗಿಸದ ಇರುವ ಕಾರಣ ಇಂದು ಕಾಂಗ್ರೆಸ್ ಪಕ್ಷದದಿಂದ ಉಗ್ರವಾಗಿ ಹೋರಾಟ ಮೂಲಕ ಪಾದಯಾತ್ರೆ ಮಾಡಿ ಶಾಸಕರ ವಿರುದ್ಧ ಆಕ್ರೋಶ ಹೊರ ಹಾಕಲಾಯಿತು.

ತೇರದಾಳ ಮತಕ್ಷೇತ್ರದ ಮಾಜಿ ಶಾಸಕಿ ಮಾತನಾಡಿ ಸ್ಥಳೀಯವಾಗಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಸುಖಾಸಮ್ಮನೆ ಕೇಸುಗಳನ್ನು ದಾಖಲಿಸಿ ದೌರ್ಜನ್ಯ ಎಸಗಲಾಗತ್ತಿದೆ ಎಂದು ಆರೋಪಿಸಿದರು. ಮುಖಂಡರಾದ ರಾಜು ನಂದೆಪ್ಪನವರ (ದೇಸಾಯಿ) ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಿಯಾದ ಕೆಲ್ಸ ಆಗುತ್ತಿಲ್ಲ ಪ್ರತಿ ಕೆಲಸಕ್ಕೂ ಶಾಸಕರ ಮಧ್ಯಸ್ಥಿಕೆಯಲ್ಲೆ ನಡೆಯುತ್ತಿರುವುದು ವಿಷಾದನೀಯ ಇದರಿಂದ ಕಾಂಗ್ರೆಸ್ ಪಕ್ಷದ ಚುನಾಯಿತ ಸದಸ್ಯರ ವಾರ್ಡಗಳಲ್ಲಿ ಕೆಲಸಗಳು ವಿಳಂಬವಾಗುತಿವೆ. ಆದುದರಿಂದ ಸರ್ಕಾರ ಆದಷ್ಟು ಬೇಗ ಶಾಸಕರ ವಿರುದ್ಧ ನೀಡಿದ ದೂರನ್ನು ಪರಿಗಣಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

 

 

ಶಾಸಕರು ಬಾಗಲಕೋಟೆ,ಬೆಳಗಾವಿ, ಖಾನಾಪುರ ವ್ಯಾಪ್ತಿಯಲ್ಲಿ ಅಕ್ರಮವಾಗಿ ಆಸ್ತಿ ಹೊಂದಿದ್ದಾರೆ ಎಂದು ಆರೋಪಗಳು ಕೇಳಿ ಬರುತ್ತಿವೆ. ಸರ್ಕಾರ ಕೂಡಲೆ ಕ್ರಮ ಕೈಗೊಳ್ಳದಿದ್ದರೆ ಉಗ್ರವಾಗಿ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಇದೆ ಸಂದರ್ಭದಲ್ಲಿ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಡಾ॥ ಎ ಆರ್ ಬೆಳಗಲಿ, ಕೀಸಾನ ಕಾಂಗ್ರೆಸ್ ರಾಜ್ಯ ಸಂಚಾಲಕ ಸಿದ್ದು ಕೊಣ್ಣುರ,ಶ್ರೀಶೈಲ ದಳವಾಯಿ, ಮಲ್ಲಪ್ಪ ಸಿಂಗಾಡಿ, ಡಾ॥ ಪದ್ಮಜೀತ ನಾಡಗೌಡ, ಶಂಕರ ಸೊರಗಾಂವಿ,ಸಾಗರ ಚವಾಜ,ಪ್ರಭು ಗಸ್ತಿ,ಲಕ್ಷ್ಮಣ್ ದೇಸಾರಟ್ಟಿ, ಮಹಾಲಿಂಗ ಅಂಬಿಗೇರ,ಅರಣು ಗಾಣಿಗೇರ ಉಪಸ್ಥಿತರಿದ್ದರು.

 

 

 

Be the first to comment

Leave a Reply

Your email address will not be published.


*