ಶಹಾಪುರ ಫೆ 17:ವಿರೋದ ಪಕ್ಷದ ನಾಯಕರನ್ನೆ ಹತ್ಯೆ ಮಾಡಲು ಕರೆನೀಡಿದ ಸಚಿವರಿಗೆ ಶಾಸಕ ಸ್ಥಾನವೆ ರದ್ದು ಪಡಿಸಿ ಕ್ರೀಮನಲ್ ಮೊಕ್ಕದ್ದಮೆ ದಾಖಲಿಸಬೇಕು ಎಂದು ಕಾಂಗ್ರೆಸ್ ಯುವ ಮುಖಂಡರಾದ ಶಿವಕಾಂತ ರೈಟರ್ ಗೋಡಿಹಾಳ ಹೇಳಿದರು.ಮೈಸೂರು ಅರಸು ಟಿಪ್ಪುವಿನನ್ನು ಕೊಂದದ್ದು ನೀರಂಕುಶ ಪ್ರಭುತ್ವದ ಅರಸೊತ್ತಿಗೆಯ ಕಾಲದಲ್ಲಿ, ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜಾಸೇವಕರಾಗಿರುವ ರಾಜ್ಯ ಸರ್ಕಾರದ ಸಚಿವರೆ, ವಿರೋದ ಪಕ್ಷದ ನಾಯಕನ್ನು ಕೊಲ್ಲಬೇಕೆಂದು ಬಹಿರಂಗವಾಗಿಯೇ ಕರೆಕೊಟ್ಟ ಸಚಿವರನ್ನು ರಾಜ್ಯಪಾಲರು ತಕ್ಷಣ ಅವರನ್ನು ಸಂಪುಟದಿಂದ ಕಿತ್ತುಹಾಕಬೇಕಿತ್ತು, ಮಾನ್ಯ ಸಭಾಪತಿಗಳು ಅವರ ಶಾಸಕ ಸ್ಥಾನವನ್ನು ರದ್ದು ಪಡಿಸಬೇಕಿತ್ತು ಮತ್ತು ರಾಜ್ಯ ಪೋಲಿಸ್ ಇಲಾಖೆ ಅವರ ಮೇಲೆ ಕೊಲೆ ಪ್ರಚೋದನೆ, ಹಾಗೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಆಳುಮಾಡಲು ಪ್ರಚೋದನೆ ನೀಡಿದ್ದಾರೆಂದು ಸ್ವಯಂ ಘೋಷಿತವಾಗಿ ಪ್ರಥಮ ವರ್ಥಮಾನ ವರದಿ ದಾಖಲಿಸಿ ಕೋರ್ಟ್ ಗೆ ಸಲ್ಲಿಸಬೇಕಿತ್ತು ಇದ್ಯಾವದನ್ನು ಮಾಡದಿರುವದು ನೋಡಿದರೆ ರಾಜ್ಯದಲ್ಲಿ ಪ್ರಜಾಪ್ರಭುತ್ವ ಸರ್ಕಾರವಿದೆಯೋ ಇಲ್ಲಾ ನಿರಂಕುಶ ಪ್ರಭುತ್ವ ಸರ್ಕಾರವಿದೆಯೋ ತಿಳಿಯದಾಗಿದೆ,ಇಷ್ಟೆಲ್ಲಾ ಆದರು ಮುಖ್ಯಮಂತ್ರಿ ಗೃಹ ಇಲಾಖೆ ಮೌನ ವಹಿಸಿರುವದು ನೋಡಿದರೆ ರಾಜ್ಯ ಸರ್ಕಾರವ ಸಚಿವರ ಮೂಲಕ ವಿರೋಧ ಪಕ್ಷದ ನಾಯಕರ ಕೊಲೆಗೆ ಸುಪಾರಿ ಕೊಡುತ್ತಿದ್ದಂತಿದೆ, ಜನತೆಯ ಮಾನ-ಪ್ರಾಣ ರಕ್ಷಣೆಯ ಹೊಣೆ ಸರ್ಕಾರದ್ದಾಗಿದೆ.ಇಂತಹ ಸಚಿವರು ತಾವೇ ಖುದ್ದಾಗಿ ವಿಧಾನಸಭೆಯ ವಿರೋಧ ಪಕ್ಷದ ನಾಯಕರ ಹತ್ಯೆಗೆ ಪ್ರಚೋದಿಸಿದರೆ? ಅವರು ಸಚಿವ ಸ್ಥಾನದಲ್ಲಿ ಮುಂದುವರೆಯುವ ಯಾವ ನೈತಿಕತೆ ಇದೆ? ಇದು ಪ್ರಧಾನಿ ಮೋದಿ ಮತ್ತು ಗೃಹಸಚಿವ ಅಮಿತ ಶಾಅವರ ಗಮನಕ್ಕೆ ಬಂದಿಲ್ಲವೇ? ಬಂದರು ಮೌನ ವಹಿಸಿರುವದು ಯಾಕೆ?
ಕೊಲೆಗಡುಕ ಮನಸ್ಥಿತಿಯ ಡಾ.ಅಶ್ವಥ್ ನಾರಾಯಣ್ ಅಂತಹವರು ಸಾರ್ವಜನಿಕ ಜೀವನದಲ್ಲಿ ಇರಲಿಕ್ಕೆ ನಾಲಾಯಕರಾಗಿ ದ್ದಾರೆ ಇಂತಹವರು ಉನ್ನತ ಶಿಕ್ಷಣ ಸಚಿವರಾದರವದು ರಾಜ್ಯಕ್ಕೂ ಮತ್ತು ಸಂವಿಧಾನಕ್ಕೂ ಅಪಮಾನ,ಬಿಜೆಪಿಯ ಹೊಡಿ, ಬಡಿ ಸಂಸ್ಕೃತಿಯೇ ಅವರ ಬೌದ್ಧಿಕ ದಿವಾಳಿತನದ ಪ್ರತೀಕ. ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷವನ್ನು ಸೈದ್ಧಾಂತಿಕವಾಗಿ ಎದುರಿಸ, ಬೇಕು ಇಲ್ಲವೇ ಸಾಧನೆಯ ಆಧಾರದಲ್ಲಿ ಮೇಲೆ ರೈಟರ್ ಆಗ್ರಹಿಸಿದ್ದಾರೆ.ಎದುರಿಸಿ ಧಮ್ -ತಾಕತ್ ಪ್ರದರ್ಶಿಸವದು ಬಿಟ್ಟು ಶೂನ್ಯ ಸಾಧನೆ ಮತ್ತು ಪೊಳ್ಳು ಸಿದ್ಧಾಂತವನ್ನು ಇಟ್ಟುಕೊಂಡು ಸೈದ್ಧಾಂತಿಕವಾಗಿ ಎದುರಿಸಲಾಗದ ಕಾರಣಕ್ಕಾಗಿ ಯೇ ಮಹಾತ್ಮ ಗಾಂಧೀಜಿಯವರನ್ನು ಗೋಡೆ ಕೊಂದ. ಅದೇ ಗೋಡೆ ಸಂತಾನವೇ ವಿದ್ವಾಂಸರಾಗಿ ದ್ದ ಎಂ.ಎಂ.ಕಲಬರ್ಗಿ ಮತ್ತು ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿರುವುದು,ವಿರೋಧ ಪಕ್ಷದನಾಯಕರಿಗೆ ಇಂತಹ ಪರಸ್ಥಿತಿ ಬಂದರೆ ಜನಸಾಮಾನ್ಯರ ಗತಿಯೇನು?ಇಂತಹ ಕೊಲೆಗಡುಕ ಮನಸ್ಥಿತಿಯವರು ಅಧಿಕಾರದಲ್ಲಿದ್ದರೆ ರಾಜ್ಯದ ಯಾವುದೇ ವ್ಯಕ್ತಿ ಸುರಕ್ಷಿತನಲ್ಲ ಹೀಗಾಗಿ ಗೌರವಾನ್ವಿತ ರಾಜ್ಯಪಾಲರು ಕೂಡಲೆ ಅವರ ಸಚಿವಸ್ಥಾನವನ್ನು ರದ್ದು ಪಡಿಸಿ ಶಾಸಕ ಸ್ಥಾನದಿಂದ ಅಮಾನತ್ತು ಮಾಡಲು ಮಾನ್ಯ ಸಭಾಪತಿಯವರಿಗೆ ಆದೇಶ ಮಾಡಬೇಕು ಮತ್ತು ರಾಜ್ಯ ಗೃಹ ಇಲಾಖೆ ಕೋಲೆಗೆ ಪ್ರಚೋದನೆ ಮತ್ತು ಕೋಮುಗಲಬೇಗೆ ಪ್ರಚೋದನೆಯ ಆರೋಪದಲ್ಲಿ ಕ್ರಿಮಿನಲ್ ಕೇಸು ದಾಖಲಿಸಿ ಬಂದಿಸಬೇಕೆಂದು ಆಗ್ರಹಿಸಿದ್ದಾರೆ.
Be the first to comment