ಇಲಕಲ್ಲ:ಮಹಾತಪಸ್ವಿ,ಬಂಜಾರಾ ಸಮಾಜ ಸುಧಾರಕರಾದ ಸಂತ ಶ್ರೇಷ್ಠ ಸತ್ಯ ಶ್ರೀ ಸೇವಾಲಾಲ ಮಹಾರಾಜರ ಜಯಂತಿಯನ್ನು ಅದ್ದೂರಿಯಾಗಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಬಲಕುಂದಿ ತಾಂಡಾದ ಶಾಲೆಯಲ್ಲಿ ಆಚರಿಸಲಾಯಿತು.
ವಿದ್ಯಾರ್ಥಿಗಳು ಸಂತ ಸೇವಾಲಾಲರ ವೇಷಭೂಷಣದಲ್ಲಿ ಹಾಗೂ ವಿದ್ಯಾರ್ಥಿನಿಯರು ಸಾಂಪ್ರದಾಯಿಕ ಲಂಬಾಣಿ ವೇಷಭೂಷಣದಲ್ಲಿ ,ಸೇವಾಲಾಲರ ಚರಿತ್ರೆಯನ್ನು ಸಾರುವ ನ್ಯತ್ಯ ಮಾಡಿದರು.
ಈ ಸಂದರ್ಭದಲ್ಲಿ ಸೇವಾಲಾಲ ಮಹಾರಾಜರ ಭಾವಚಿತ್ರಕ್ಕೆ ಪೂಜೆಯನ್ನು ನೇರವೇರಿಸಿ,ಸೇವಾಲಾಲ ಮಹಾರಾಜರು ಸತ್ಯ ಧರ್ಮ ಅಹಿಂಸೆಯ ಪ್ರತಿಪಾದಕರಾಗಿದ್ದು,ಲಂಬಾಣಿ ಸಮುದಾಯವನ್ನು ಮೌಡ್ಯತೆಯಿಂದ ಬೆಳಕಿನಡೆಗೆ ತಂದ ಮಹಾಪುರುಷರಾಗಿದ್ದಾರೆ,ಅವರ ಆದರ್ಶಗಳನ್ನು ಪಾಲಿಸಿದಾಗ ಮಾತ್ರ ಜಯಂತಿ ಆಚರಣೆಗಳಿಗೆ ನೈಜ ಅರ್ಥ ಬರುತ್ತದೆ ಎಂದು ಶಾಲಾ ಮುಖ್ಯೋಪಾಧ್ಯಾಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಪರಶುರಾಮ ಪಮ್ಮಾರ ಮಾತನಾಡಿದರು.
ಸಂತಶ್ರೇಷ್ಠ ಸೇವಾಲಾಲ ಮಹಾರಾಜರ ಚರಿತ್ರೆ, ಭೋಧನೆಗಳ ಬಗ್ಗೆ ಶಿಕ್ಷಕರ ಸಂಘದ ಜಿಲ್ಲಾ ಖಜಾಂಚಿ ಮುತ್ತಣ್ಣ ಬೀಳಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಲೆಯ ಹಿರಿಯ ಶಿಕ್ಷಕರಾದ ಎ ಡಿ ಬಾಗವಾನ,ಎಂ ಎಸ್ ಅಂಗಡಿ,ಗುರುಮಾತೆಯರಾದ ಜಿ ಕೆ ಮಠ,ಆರ್ ಎಸ್ ಕೊಡಗಲಿ, ಎಂ ಎನ್ ಅರಳಿಕಟ್ಟಿ,ಎಸ್ ಎಲ್ ಜೋಗಿನ, ಎಂ ಪಿ ಚೇಗೂರ,ಪಿ ಎಸ್ ಹೊಸೂರ,ಎಸ್ ಎಂ ಮಲಗಿಹಾಳ,ಸಾಯಿರಾ ಹೆರಕಲ್,ಗೀತಾ ಕನ್ನೂರ ಉಪಸ್ಥಿತರಿದ್ದರು.
Be the first to comment