ಜೈನ ವಿವಿ ವಿರುದ್ಧ ಕ್ರಮ ಜರುಗಿಸುವಂತೆ ಡಿವಿಪಿ ಮುಖ್ಯಮಂತ್ರಿಗೆ ಮನವಿ 

ಮಸ್ಕಿ, ಫೆಬ್ರುವರಿ 15 : ಪಟ್ಟಣದ ಬಸವೇಶ್ವರ ನಗರದ ತಹಶೀಲ್ದಾರ್ ಕಛೇರಿಯಲ್ಲಿ ಜಾತಿ ನಿಂದನೆ ಮತ್ತು ದೇಶ ದ್ರೋಹ ಎಸಗಿದವರ ವಿರುದ್ಧ ಕಠಿಣ ಕ್ರಮ ಹಾಗೂ ಜಾತಿವಾದಿ ಜೈನ ವಿ.ವಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದಲಿತ ವಿದ್ಯಾರ್ಥಿ ಪರಿಷತ್ ತಾಲೂಕ ಸಮಿತಿ ವತಿಯಿಂದ ಷಣ್ಮುಖಪ್ಪ ಮಾನವಿ (ಗ್ರೇಡ್ 2) ತಹಶೀಲ್ದಾರರು ಇವರ ಮೂಲಕ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಇವರಿಗೆ ಮನವಿ ಮಾಡಿದರು.

 

ಇತ್ತೀಚೆಗೆ ಬೆಂಗಳೂರಿನ ಜೈನ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಗುಂಪೊಂದು ಸ್ಕಿಟ್ ವೊಂದರಲ್ಲಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಹಾಗೂ ದಲಿತ ಸಮುದಾಯದ ಬಗ್ಗೆ ಅಪಹಾಸ್ಯ ಮತ್ತು ಜಾತಿ ದ್ವೇಷದ ಅವಮಾನ ಮಾಡಲಾಗಿದ್ದು, ಇದು ಸ್ಪಷ್ಟವಾಗಿ ಉದ್ದೇಶಪೂರ್ವಕವಾಗಿ ದೇಶದ್ರೋಹ ಮತ್ತು ಜಾತಿ ನಿಂದನೆ ಪ್ರಕರಣವಾಗಿದೆ. ಇದು ಖಂಡನೀಯ. ಜಹೀನ ವಿಶ್ವವಿದ್ಯಾಲಯದ ಮ್ಯಾನೇಜ್ಮೆಂಟ್ ಸ್ಟಡೀಸ್ ಕೇಂದ್ರದ ಕಾಲೇಜು ತಂಡ ಜಾತಿ ವಾದವನ್ನು ಎತ್ತಿ ತೋರಿಸುವ ಮತ್ತು ಜಾತಿ ನಿಂದನೆಯ ಕೀಳು ಭಾಷೆಯನ್ನು ಬಳಸಿ ಸ್ಕಿಟ್ ಮಾಡಲಾಗಿ ಸಂವಿಧಾನ ಶಿಲ್ಪಿ ಭಾರತರತ್ನ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರನ್ನು ಮತ್ತು ದಲಿತ ಸಮುದಾಯವನ್ನು ನೇರವಾಗಿ ಗೇಲಿ ಮಾಡಿ ಜಾತಿ ನಿಂದನೆ ಮಾಡಿರುತ್ತಾರೆ. ಇದರ ದಾಖಲೆಯನ್ನು ಇಲ್ಲಿ ಲಗತ್ತಿಸಲಾಗುತ್ತದೆ. ಜೈನ ವಿಶ್ವವಿದ್ಯಾಲಯದ ಮ್ಯಾನೇಜ್ಮೆಂಟ್ ಸ್ಟಡೀಸ್ ಕೇಂದ್ರದ ಥಿಯೇಟರ್ ಗ್ರೂಪ್ , ದಿ ಡೆಲ್ರಾಯ್ಸ್ ಬಾಯ್ಸ್ ಮ್ಯಾಡ್- ಆಡ್ಸ್ ನ ಭಾಗವಾಗಿ ಪೋಸ್ಟ್ನಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಮತ್ತು ದಲಿತ ಸಮುದಾಯದ ಕುರಿತು ಹಾಸ್ಯ ಮತ್ತು ಗೇಲಿ ಮಾಡುತ್ತ ಸ್ಕಿಟ್ ನ್ನು ಪ್ರದರ್ಶಿಸಿದ್ದಾರೆ. ಇದು ಇಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

 

ಸ್ಕಿಟ್ ನಲ್ಲಿ ಕೆಳ ಜಾತಿಯ ಹಿನ್ನೆಲೆಯ ವ್ಯಕ್ತಿ ಒಬ್ಬ ಮೇಲ್ಜಾತಿಯ ಮಹಿಳೆಯೊಂದಿಗೆ ಡೇಟಿಂಗ್ ಮಾಡಲು ಪ್ರಯತ್ನಿಸಿರುವುದನ್ನು ಪ್ರದರ್ಶಿಸಿದ್ದು, ಈ ವೇಳೆ ಆತ ತಾನು ದಲಿತ ಕೇಳ ಜಾತಿಯವ ಅಥವಾ ಅಸ್ಪೃಶ್ಯ ಎಂದು ಹೇಳಿಕೊಂಡಾಗ “ಡೋಂಟ್ ಟಚ್ ಮಿ ಟಚ್ ಮಿ” ಎಂಬ ಪದ ಹಾಡನ್ನು ಗೇಲಿ ಮಾಡುತ್ತಾ ಪ್ಲೇ ಮಾಡಿ ಉದ್ದೇಶಪೂರ್ವಕವಾಗಿ ಅವಮಾನಿಸಿರುತ್ತಾರೆ.

ಇದಲ್ಲದೆ ಡಾಕ್ಟರ್ ಬಿ. ಆರ್ ಅಂಬೇಡ್ಕರ್ ಅವರನ್ನು ಬೀಯರ್ ಅಂಬೇಡ್ಕರ್ ಎಂದು ಹೇಳಿ ಅತ್ಯಂತ ಕೀಳು ಮಟ್ಟದಲ್ಲಿ ಅವಮಾನಿಸಿರುತ್ತಾರೆ. ಇದರೊಂದಿಗೆ ಕೆಲವು ಜಾತಿ ನಿಂದನಾತ್ಮಕ ನುಡಿಗಳನ್ನು ಬಳಸಿರುತ್ತಾರೆ. ಈ ದೇಶದ ಅತ್ಯುನ್ನತ ಪುರಸ್ಕೃತವಾದ ಭಾರತ ರತ್ನ ಪಡೆದ ಹಾಗೂ ಈ ದೇಶಕ್ಕೆ ಸಂವಿಧಾನವನ್ನು ಕೊಟ್ಟು ಸಂವಿಧಾನ ಶಿಲ್ಪಿ ಮತ್ತು ಈ ದೇಶದ ಸಾಕ್ಷಿ ಪ್ರಜ್ಞೆ ಡಾ. ಬಿಆರ್ ಅಂಬೇಡ್ಕರ್ ರವರನ್ನು ಅತ್ಯಂತ ತುಚ್ಛವಾಗಿ ಅವಮಾನಿಸಿರುವುದು ದೇಶದ್ರೋಹವೆಂದು ಪರಿಗಣಿಸಬೇಕು. ಸಂವಿಧಾನದಲ್ಲಿ ಅಸ್ಪೃಶ್ಯತೆಯನ್ನು ತೊಡೆದು ಹಾಕಿದ ಮೇಲು ಮತ್ತು ನಮ್ಮ ಕಾನೂನಿನಲ್ಲಿ ಅಸ್ಪೃಶ್ಯತೆ ಆಚರಿಸುವುದು ದಂಡಾರ್ಹ ಅಪರಾಧ ಎಂದು ತಿಳಿದಿದ್ದರೂ ಜೈನ ಕಾಲೇಜಿನ ಸದರಿ ವಿದ್ಯಾರ್ಥಿಗಳು ಜಾತಿನಿಂದನೆ ಮಾಡಿರುವುದು ಇಡೀ ಶೋಷಿತ ಸಮುದಾಯ ಗಳಿಗೆ ಅಪಾರ ನೋವು ಮತ್ತು ಅವಮಾನ ಮಾಡಿರುವುದು ಅಪರಾಧವಾಗಿದೆ.

 

ಆದ್ದರಿಂದ ಇದಕ್ಕೆ ಸಂಬಂಧಿಸಿದವರು ವಿರುದ್ಧ ತಕ್ಷಣವೇ ತಮ್ಮ ನೇತೃತ್ವದಲ್ಲಿ ಘನ ಸರ್ಕಾರವು ದೂರು ದಾಖಲಿಸಿ ಕಾನೂನು ಕ್ರಮ ಕೈಗೊಂಡು ಇವರನ್ನು ಬಂಧಿಸಬೇಕು. ಹಾಗೆ ಇಷ್ಟೆಲ್ಲ ಎಡವಟ್ಟು ಆಗಲು ಜೈನ ವಿಶ್ವವಿದ್ಯಾಲಯದ ಮೇಲಾಧಿಕಾರಿಗಳ ಪರೋಕ್ಷ ಬೆಂಬಲ ಇದೆ ಎಂಬುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರನ್ನು ಅವಮಾನಿಸುವ ಮೂಲಕ ದೇಶವಿರೋಧಿ ಚಟುವಟಿಕೆ ನಡೆಸುತ್ತಿರುವ ವಿದ್ಯಾರ್ಥಿ ಯುವಜನರ ಮೂಲಕ ದೇಶದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿರುವ ಈ ಜೈನ ವಿಶ್ವವಿದ್ಯಾಲಯದ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಈ ಜೈನ ವಿವಿಯಿಂದ ರಾಜ್ಯದಲ್ಲಿ ಸಾಮಾಜಿಕ ಅಸಮಾನತೆ ಬಿತ್ತುವ ಕಾರ್ಯಗಳಿಗೆ ಪರೋಕ್ಷವಾಗಿ ಸಹಮತಿ ನೀಡಿದಂತಾಗುತ್ತದೆ. ಇವರ ವಿರುದ್ಧವೂ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ದಲಿತ ವಿದ್ಯಾರ್ಥಿ ಪರಿಷತ್ ಸಮಿತಿ ಮಸ್ಕಿ ವತಿಯಿಂದ ತಹಸಿಲ್ದಾರರು ಮಸ್ಕಿ ಇವರ ಮೂಲಕ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಇವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

 

 

ಇದೇ ಸಂದರ್ಭದಲ್ಲಿ ಮೌನೇಶ್ .ಎ ತುಗ್ಗಲದಿನ್ನಿ ಡಿವಿಪಿ ತಾಲೂಕ ಸಂಚಾಲಕರು ಮಸ್ಕಿ,ಮೌನೇಶ್ ಜಾಲವಾಡಗಿ ಡಿವಿಪಿ ಜಿಲ್ಲಾ ಸಂಚಾಲಕರು ರಾಯಚೂರು, ಹುಸೇನಿ ಇರಕಲ್ ಡಿವಿಪಿ ಸಂಘಟನಾ ಕಾರ್ಯದರ್ಶಿ,ಕಾರ್ಯಕರ್ತರಾದ ಸಂತೋಷ್,ಇಸ್ಮಾಯಿಲ್, ಬಸವರಾಜ್, ಶಶಿಕುಮಾರ್, ನಿತಿನ್ ರಾಜ್, ಶರಣ ಬಸವ, ಚನ್ನ ಬಸವ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*