ಕೆಜಿಎಫ್: ತಾಲ್ಲೂಕಿನಲ್ಲಿ ಸುಮಾರು ನಾಲ್ಕು ವರ್ಷಗಳಿಂದ ನಿರಂತರವಾಗಿ ಸಮಾಜ ಸೇವೆ ಮಾಡುತ್ತೀರುವ ಭಾರತೀಯ ಜನತಾ ಪಕ್ಷದ ಪ್ರತಿಯೊಂದು ಕಾರ್ಯಕ್ರಮವನ್ನು ಮನೆ ಬಾಗಿಲಿಗೆ ತಿಳಿಸುತ್ತಿರುವ ಸ್ವಕ್ಷೇತ್ರ ಬಿಜೆಪಿ ಆಕಾಂಕ್ಷಿ ಅಭ್ಯರ್ಥಿ ಆಗಿರುವ ವಿ.ಮೋಹನ್ ಕೃಷ್ಣ ಮತ್ತು ಗ್ರಾಮಾಂತರ ಘಟಕ ಅಧ್ಯಕ್ಷ ಜಯಪ್ರಕಾಶ್ ನಾಯ್ಡು ಅವರು ವಿಜಯ ಸಂಕಲ್ಪ ಅಭಿಯಾನಕ್ಕೆ ಸುಂದರಪಾಳ್ಯ ಗ್ರಾಮದ ಪಾಲುಪಟ್ಟಲಮ್ಮ ದೇವಾಲಯದ ಆವರಣದಲ್ಲಿ ಪೂಜೆ ಸಲ್ಲಿಸಿ ನಂತರ ಸದಸ್ಯತ್ವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮೋಹನ್ ಕೃಷ್ಣ ಮಾತನಾಡಿ ನಾನು ಎಂಎಲ್ಎ ಅಥವಾ ಎಂಪಿ ಕುಟುಂಬ ದಿಂದ ಬಂದವನು ನಾನಲ್ಲ ನಾನೊಬ್ಬ ಸಾಮಾನ್ಯ ರೈತ ಕುಟುಂಬದಿಂದಲೇ ಬಂದವನು ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರು ಒಂದು ಹೊತ್ತಿನ ಊಟಕ್ಕೂ ಯಾವ ರೀತಿಯ ಕಷ್ಟ ಪಡುತ್ತಾರೆ ಎಂಬುದನ್ನು ನಾನು ಅನುಭವಿಸಿದ್ದೇನೆ ಆದ್ದರಿಂದಲೇ ನಾನು ನನ್ನ ಸ್ವಂತ ದುಡಿಮೆಯಲ್ಲಿ ನಮ್ಮ ಸ್ವಕ್ಷೇತ್ರದಲ್ಲಿ ಸುಮಾರು ಐದು ವರ್ಷಗಳಿಂದ ನಿರಂತರವಾಗಿ ಸಮಾಜ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದೇನೆ ಆದ್ದರಿಂದ ತವೆಲ್ಲರೂ ಸೇರಿ ಮುಂದಿನ ದಿನಗಳಲ್ಲಿ ನಿಮ್ಮ ಮನೆಯ ಮಗನಿಗೆ ತಮ್ಮ ಮತವನ್ನು ನೀಡಬೇಕು ಎಂದು ಸುಂದರಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿಯೊಂದು ಗ್ರಾಮಕ್ಕೂ ಭೇಟಿನೀಡಿ ಮನವಿ ಮಾಡಿದರು.
ಡಿಸಿಸಿ ಬ್ಯಾಂಕಿನ ಲೋನ್ ಗೆ ಮರಳಗಬೇಡಿ:- ಈಗಿನ ಶಾಸಕಿ ಕೇವಲ ಡಿಸಿಸಿ ಬ್ಯಾಂಕಿನ ಲೋನ್ ಗಳನ್ನು ವಿತರಣೆ ಮಾಡಲು ಸೀಮಿತರಾಗಿದ್ದರೆ,ಹೆಣ್ಣು ಮಕ್ಕಳಿಗೆ ಅರಿಶಿನ ಕುಂಕುಮದ ಜೊತೆಗೆ ನೀಡುವಂತಹ ಹಣವನ್ನು ಮತ್ತೆ ಪಡೆಯುವುದು ಸಂಪ್ರದಾಯವಲ್ಲ ಆದ್ದರಿಂದ ತಮ್ಮ ಸ್ವಾಭಿಮಾನವನ್ನು ಕೇವಲ ಲೋನ್ ಗಳಿಗೆ ಮಾರಾಟ ಮಾಡಿಕೊಳ್ಳಬೇಡಿ ಎಂದು ತಿಳಿಸಿದರು.
ಗ್ರಾಮಾಂತರ ಅಧ್ಯಕ್ಷ ಜಯಪ್ರಕಾಶ್ ನಾಯ್ಡು ಮಾತನಾಡಿ ಪ್ರಪಂಚದಲ್ಲಿ ಅತ್ಯಂತ ದೊಡ್ಡ ರಾಜಕೀಯ ಪಕ್ಷವಾದ ಭಾರತೀಯ ಜನತಾ ಪಕ್ಷದಲ್ಲಿ 8000090009 ಸಂಖ್ಯೆಗೆ ಮಿಸ್ ಕಾಲ್ ಕೊಡುವುದರ ಮೂಲಕ ತಮ್ಮ ಸದಸ್ಯತ್ವವನ್ನು ಪ್ರತಿಯೊಬ್ಬ ಕಾರ್ಯಕರ್ತನು ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮಾಂತರ ಪ್ರದಾನ ಕಾರ್ಯದರ್ಶಿ ಹೇಮರೆಡ್ಡಿ,ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ರವಿರೆಡ್ಡಿ,ಕೇಶವ ಗೌಡ,ಶ್ರೀರಾಮಪ್ಪ,ಪಾಪಯ್ಯ,ಎ ಎಂ.ಕೇಶವ , ಶ್ರೀನಿವಾಸ್, ಮುಖಂಡರಾದ ಬಾಲಾಜಿ, ಗಂಗಿರೆಡ್ಡಿ, ಕೃಷ್ಣಪ್ಪ, ಓಂ ಸುರೇಶ್,ಶಿವು, ಮೋಹನ್ ಕೃಷ್ಣ ಯುವಸೇನೆಯ ಕಾರ್ಯಕರ್ತರಾದ ಶ್ರೀನಾಥ್,ನಂದೀಶ್ ಬಾಬು, ತೇಜಸ್, ವಿಜಿ ಕುಮಾರ್, ಸಂಜು ಕುಮಾರ್, ಜಗದೀಶ್,ಸಂತೋಷ್,ಮತ್ತು ಸಾರ್ವಜನಿಕರು ಇದ್ದರು.
Be the first to comment