ಬಾಗಲಕೋಟೆ:ಇಲಕಲ್ಲ ತಾಲೂಕಿನ ಕೆಲೂರಿನಲ್ಲಿ ಫೆ.4 ರಿಂದ 7ರವರೆಗೆ ಶ್ರೀ: ಗುರುಮಂಟೇಶ್ವರ ಮಹಾಜಾತ್ರೋತ್ಸವ, ರಥೋತ್ಸವ ಜರುಗಲಿದೆ. ಜಾತ್ರಾ ಮಹೋತ್ಸವದ ನಿಮಿತ್ತ ನಾಟಕ, ಮನರಂಜನೆ, ಸನ್ಮಾನ ಕಾರ್ಯಕ್ರಮಗಳು ಜರುಗಲಿವೆ. ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಫೆ.4ರಂದು ಬೆಳಿಗ್ಗೆ 5 ಗಂಟೆಗೆ ಶ್ರೀಗುರು ಮಂಟೇಶ್ವರ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ ವಿಶೇಷ ಅಲಂಕಾರ, ಪೂಜೆ 9ಕ್ಕೆ ಗ್ರಾಮದ ಗುರು ಹಿರಿಯರೊಂದಿಗೆ, ಗ್ರಾಮದ ಮುಖ್ಯ ರಸ್ತೆಯಲ್ಲಿ ಸಕಲ ಮಂಗಳವಾದ್ಯಗಳೊಂದಿಗೆ ಶ್ರೀಗುರು ಮಂಟೇಶ್ವರರ ಕರ್ತೃಗದ್ದುಗೆಯ ನೂತನ ಪ್ರಭಾವಳಿಯ ಭವ್ಯ ಮೆರವಣಿಗೆ, ಫೆ.5ರಂದು. ಶ್ರೀಗುರು ಮಂಟೇಶ್ವರ ಕರ್ತೃಗದ್ದುಗೆಗೆ ಮಹಾ ರುದ್ರಾಭಿಷೇಕ, ಅಲಂಕಾರ, ಪೂಜೆ, 1 ಗಂಟೆಗೆ ಗ್ರಾಮದಲ್ಲಿ ಸಮಸ್ತ ವಾದ್ಯವೈಭವಗಳೊಂದಿಗೆ ಮಂಟೇದೇವರ ಹಿರೇಮಠದಿಂದ, ರಥೋತ್ಸವದ ಕಳಸ, ಜಗದ್ಗುರು ವಿಶ್ವಾರಾಧ್ಯರಮೂರ್ತಿ, ಬೆಳ್ಳಿಪಾದುಕೆಗಳೊಂದಿಗೆ ಪಲ್ಲಕ್ಕಿ ಮೆರವಣಿಗೆ, ನಂತರ ವೇದಮೂರ್ತಿ ವಿಶ್ವನಾಥ ಮಂಟಯ್ಯನವರು, ವೈದಿಕರಿಂದ ನೂತನ ವಟುಗಳಿಗೆ ಲಿಂಗದೀಕ್ಷೆ ಜರಗುವುದು.
ಸಂಜೆ 5ಕ್ಕೆ ಜರಗುವ ಭಾವೈಕ್ಯತಾ ಜಾತ್ರೆಗೆ ಮಲ್ಲಪ್ಪ ರುದ್ರಪ್ಪ ಬಡಿಗೇರ ಹಾಗೂ ವಿಶ್ವಕರ್ಮ ಸಮಾಜದ ಮಹಿಳೆಯರಿಂದ ಕುಂಭಸೇವೆ, ಇದ್ದಲಗಿ ಗ್ರಾಮಸ್ಥರಿ೦ದ ಹಗ್ಗದ ಸೇವೆ, ಹಿರೇಮ್ಯಾಗೇರಿ ಗ್ರಾಮಸ್ಥರಿಂದ ರಥದ ಕಳಸದ ಸೇವೆ, ಸಿದ್ಧನಕೊಳ್ಳ ಗ್ರಾಮಸ್ಥರಿಂದ ಗುಡಿಯ ಕಳಸದ ಸೇವೆ, ಬೆನಕನವಾರಿ ಗ್ರಾಮಸ್ಥರಿಂದ ನಂದಿಕೋಲಿನ ಸೇವೆ, ತಳ್ಳಿಕೇರಿ ಗ್ರಾಮಸ್ಥರಿಂದ ಬಾಳೆಕಂಬದ ಸೇವೆ, ಮುಸ್ಲಿಂ ಸಮಾಜದಿಂದ ಛತ್ರಿ ಚಾಮರ ಸೇವೆ, ಹೆಳವರ ಸಮಾಜದಿಂದ ಪಾಲಕಿ ಸೇವೆ, ಭೋವಿ ಸಮಾಜದಿಂದ ರಥದ ಚಾಲನೆಗೆ ಹಾರಸೇವ, ಭಜಂತ್ರಿ ಸಮಾಜದಿಂದ ಕಳಸದ ಮೆರವಣಿಗೆ ಗುಡೂರಿನ ಕರವೀರಪ್ಪ ಯರಕದ ಅವರಿಂದ ಅಲಂಕಾರದ ಸೇವೆ, ನೀಲಪ್ಪ ಕೊಪ್ಪದ ಬ೦ಧುಗಳಿಂದ ರಥಕ್ಕೆ ಹಗ್ಗದ ಜೋಡಣೆ, ಬಸಪ್ಪ, ಕುಂಚಗನೂರ, ಬಸವರಾಜ ರೇವಡಿ ಸಹೋದರರು ಹಾಗೂ ಎಂ.ಆರ್. ಮಡಿವಾಳ ಭಕ್ತರಿಂದ ಹೂವಿನಹಾರದ ಸೇವೆ, ಗ್ರಾಮ ಪಂಚಾಯತಿ ಸಿಬ್ಬಂದಿಯಿಂದ ವಿದ್ಯುತ್, ನೀರು ನಿರ್ವಹಣಾ ಸೇವೆ, ನಾಗಲಿಂಗಪ್ಪ ಬಡಿಗೇರ, ಮುತ್ತು ಕುಂಚಗನೂರ ಅವರುಗಳಿಂದ ತೇರಿನ ಅಲಂಕಾರ ಸಿದ್ದಗೊಂಡು ಮಹಾ ರಥೋತ್ಸವ ಜರಗುವುದು, ರಾತ್ರಿ 10.30ಕ್ಕೆ ಕೆಲೂರಿನ ಶ್ರೀ ಬಸವೇಶ್ವರ ಮತ್ತು ಶ್ರೀ ಮಾರುತೇಶ್ವರ ನಾಟ್ಯ ಸಂಘಗಳಿಂದ ‘ರೈತ ನಕ್ಕರೆ ಜಗವೆಲ್ಲ ಸಕ್ಕರೆ’ ಸಾಮಾಜಿಕ ನಾಟಕ ಜರುಗಲಿದೆ.
Be the first to comment