ಮಸ್ಕಿ, ಫೆಬ್ರವರಿ 02 : ಪಟ್ಟಣದ ಗಾಂಧಿನಗರದ ಗಾಂಧೀಜಿ ಪ್ರತಿಮೆ ಮುಂಭಾಗದಲ್ಲಿ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಮತ್ತು ಸಾಮಾಜಿಕ ನ್ಯಾಯ ಸಂಸ್ಥೆ ಜಿಲ್ಲಾ ಸಮಿತಿ ರಾಯಚೂರು ವತಿಯಿಂದ ಉಪವಾಸ ಸತ್ಯಾಗ್ರಹ ಮಾಡುವುದರ ಮೂಲಕ ಜಿಲ್ಲಾಧಿಕಾರಿಗಳು ರಾಯಚೂರು ಇವರಿಗೆ ತಹಶೀಲ್ದಾರ್ ಕವಿತಾ.ಆರ್ ಇವರ ಮುಖಾಂತರ
ಮಸ್ಕಿ ನಗರದ ಹಾಗೂ 20ನೇ ವಾರ್ಡಿನ ಜ್ವಲಂತ ಸಮಸ್ಯೆಗಳಾದ ಸಿಸಿ ರಸ್ತೆ, ಒಳಚರಂಡಿ, ರಸ್ತೆ ಅಗಲೀಕರಣ, ಶುದ್ಧ ಕುಡಿಯುವ ನೀರು ಸೇರಿದಂತೆ ವಿವಿಧ ಬೇಡಿಕೆಗಳನ್ನು ಶೀಘ್ರ ಈಡೇರಿಸಬೇಕೆಂದು ಮನವಿ ಸಲ್ಲಿಸಿದರು.
ಉಪವಾಸ ಸತ್ಯಾಗ್ರಹದ ಹೋರಾಟಕ್ಕೆ ಸ್ಪಂದಿಸಿ ವೇದಿಕೆಗೆ ಭೇಟಿ ನೀಡಿದ ಅಧಿಕಾರಿ,ಜನಪ್ರತಿನಿಧಿಗಳು ಸಾರ್ವಜನಿಕರ ಸಮಸ್ಯೆಗಳ ಅಹವಾಲನ್ನು ಸ್ವೀಕರಿಸಲು ಮುಂದಾದ ಸಂದರ್ಭದಲ್ಲಿ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಮತ್ತು ಸಾಮಾಜಿಕ ನ್ಯಾಯ ಸಂಸ್ಥೆಯ ಜಿಲ್ಲಾಧ್ಯಕ್ಷರಾದ ಎಸ್ ನಜೀರ್ ಅವರು
ಮಸ್ಕಿ ಪಟ್ಟಣದ ವಾರ್ಡ್ ನಂ. 20 ಗಾಂಧಿನಗರದ ಮೂಲಭೂತ ಸೌಕರ್ಯಗಳಾದ ಚರಂಡಿ, ಸಿಸಿ ರಸ್ತೆ ಸೇರಿದಂತೆ ಇನ್ನಿತರೆ ಸೌಕರ್ಯಗಳು ಇಲ್ಲಿಯ ನಾಗರಿಕರಿಗೆ ಇಲ್ಲದಂತಾಗಿದೆ. ಮಸ್ಕಿ ತಾಲೂಕು ಆದಾಗಿನಿಂದ ಇಲ್ಲಿನ ವ್ಯವಸ್ಥೆಗಳು ಹಾಗೆ ಇದ್ದು, ಇಲ್ಲಿಯವರೆಗೆ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿರುವುದಿಲ್ಲ. ಇಲ್ಲಿನ ಜನರ ಪರಿಸ್ಥಿತಿ ಹೇಳತೀರದು ಇನ್ನು ಮಳೆಗಾಲ ಬಂದಿಲ್ಲ ಆದರು ಇಲ್ಲಿನ ರಸ್ತೆಗಳು ಚರಂಡಿ ನೀರಿನಿಂದ ಕೂಡಿದ್ದು, ಚರಂಡಿಯಾವುದು, ರಸ್ತೆ ಯಾವುದೆಂದು ತಿಳಿಯುತ್ತಿಲ್ಲ. ಇದರಿಂದ ರೋಗ ರುಜಿನೆಗಳು ಹರಡುವ ಭೀತಿ ಎದುರಾಗುತ್ತಿದೆ. ಇಲ್ಲಿ ಒಬ್ಬ ರೋಗಿಗಳಿಗೆ, ಗರ್ಭಿಣಿಯರನ್ನು ವೃದ್ಧರನ್ನು ಆಸ್ಪತ್ರೆ ಕರೆದುಕೊಂಡು ಹೋಗಬೇಕಾದರೆ ಆಂಬುಲೇನ್ಸ್‌ನ್ನು ಮುಖ್ಯ (ಎನ್.ಹೆಚ್-150ಎ) ರಸ್ತೆಯಲ್ಲಿ ನಿಲ್ಲಿಸಿ ಅಲ್ಲಿಯವರೆಗೆ ಅವರನ್ನು ಹೊತ್ತುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಇಲ್ಲಿನ ರಸ್ತೆಗಳು ಸಹ ಸರಿಯಾಗಿಲ್ಲ. ಇಲ್ಲಿನ ಸ್ಮಶಾನಕ್ಕೆ ಹೋಗಲು ಒಂದು ರಸ್ತೆ ಸಹ ಸರಿಯಾಗಿಲ್ಲ. ಇವೆಲ್ಲವನ್ನು ನೋಡುತ್ತಿದ್ದರೆ, ನಾವು ಇನ್ನು ಯಾವುದೂ ಗತ ಕಾಲದಲ್ಲಿ ಇದ್ದೆವೆಂದು ಅನ್ನಿಸುತ್ತದೆ. ಎಂದು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಮತ್ತು ಸಾಮಾಜಿಕ ನ್ಯಾಯ ಸಂಸ್ಥೆಯ ಜಿಲ್ಲಾಧ್ಯಕ್ಷರಾದ ಎಸ್ ನಜೀರ್ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಿ. ದಾನಪ್ಪ ನಿಲೋಗಲ್ ಬಾಬು ಜಗಜೀವನ್ ರಾಮ್ ರಾಜ್ಯ ಪ್ರಶಸ್ತಿ ಪುರಸ್ಕೃತರು,
ರತ್ನ ಕಟ್ಟಿಮನಿ ಮಹಿಳಾ ಹೋರಾಟಗಾರ್ತಿ, ಬಾಲ ಸ್ವಾಮಿ ಜಿನ್ನಾಪೂರ ಡಿ ಎಸ್ಎಸ್ ಜಿಲ್ಲಾಧ್ಯಕ್ಷರು, ಸಿದ್ದಪ್ಪ ಹೂವಿನಬಾವಿ ಜಿಲ್ಲಾ ಉಪಾಧ್ಯಕ್ಷರು, ಬಸವಂತ ಹಿರೇ ಕಡಬುರು ಎಸ್ ಎಫ್ ಐ ತಾಲೂಕ ಅಧ್ಯಕ್ಷರು, ಲಕ್ಷ್ಮಣ್ ಬಿಎಸ್ಎಸ್ ತಾಲೂಕ ಅಧ್ಯಕ್ಷರು, ಮಹಮ್ಮದ್ ರಫಿ, ಅಜ್ಮೀರ್ ಶೇಡ್ಮಿ, ನಾಗಪ್ಪ ಸೇರಿದಂತೆ ವಾರ್ಡಿನ ನಿವಾಸಿಗಳು ಉಪಸ್ಥಿತಿ ಇದ್ದರು.
Be the first to comment