ಉದ್ಘಾಟನೆ ಮಾಡಿ ಒಂದು ವಾರ ಕಳೆದರೂ ವಸತಿ ನಿಲಯಕ್ಕೆ ಬೀಗ ಜಡಿದು ಬಣಗುಡುತ್ತಿರುವ ವಸತಿ ನಿಲಯ : ಆರೋಪ

ಮಸ್ಕಿ, ಫೆಬ್ರವರಿ 01 : ಪಟ್ಟಣದ ಬಸವೇಶ್ವರ ನಗರದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯವನ್ನು

ಸ್ಥಳೀಯ ಶಾಸಕ ಆರ್.ಬಸನಗೌಡ ತುರುವಿಹಾಳ ಉದ್ಘಾಟನೆ ಮಾಡಿ ಒಂದು ವಾರ ಕಳೆದರೂ ವಸತಿ ನಿಲಯಕ್ಕೆ ಬೀಗ ಜಡಿದು ಬಣಗುಡುತ್ತಿರುವ ದೃಶ್ಯ ತಾವೆಲ್ಲ ನೋಡಬಹುದು ಎಂದು ಕಾಂಗ್ರೆಸ್ ಮುಖಂಡರು ಪತ್ರಿಕಾ ಹೇಳಿಕೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಪಟ್ಟಣದ ಬಸವೇಶ್ವರ ನಗರದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯವನ್ನು ಸ್ಥಳೀಯ ಶಾಸಕ ಆರ್.ಬಸನಗೌಡ ತುರುವಿಹಾಳ ಉದ್ಘಾಟನೆ ಮಾಡಿ ಒಂದು ವಾರ ಕಳೆದರೂ ವಸತಿ ನಿಲಯದಲ್ಲಿ ಮಕ್ಕಳಿಲ್ಲದೆ ಬಿಕೋ ಎನ್ನಲು ಕಾರಣವೇನು.? ಅಧಿಕಾರಿಗಳು ಚಾಲನೆ ಮಾಡದೆ ಬೇಜವಾಬ್ದಾರಿತನವನ್ನು ತೋರಿದ್ದು ಯಾಕೆ ಎಂಬುದು ತಿಳಿಯದಾಗಿದೆ. ಪರಿಶಿಷ್ಟ ವರ್ಗದ ಶಾಲಾ ವಿದ್ಯಾರ್ಥಿಗಳಿಗೆ ಸರಕಾರದ ಸೌಲಭ್ಯ ಸದುಪಯೋಗ ಆಗಬೇಕು. ಸರಕಾರ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲಾ ಕಾಲೇಜು ವಸತಿ ನಿಲಯಗಳನ್ನು ಮಂಜೂರು ಮಾಡಿ ಉದ್ಘಾಟನೆ ಮಾಡುವುದು ವಿದ್ಯಾರ್ಥಿಗಳ ಭವಿಷಕ್ಕಾಗಿ ಆದರೆ ಮಸ್ಕಿ ಪಟ್ಟಣದಲ್ಲಿ ಉದ್ಘಾಟನೆ ಆಗಿ ಒಂದು ವಾರ ಕಳೆದರೂ ವಿದ್ಯಾರ್ಥಿಗಳ ಉಪಯೋಗಕ್ಕೆ ಬಾರದೇ ಬಿಕೋ ಎನ್ನುತ್ತಿರುವ ದೃಶ್ಯವನ್ನು ಮನಗಂಡ ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಬಸನಗೌಡ ಮಾರಲದಿನ್ನಿ ಜಿಲ್ಲಾ ಉಪಾಧ್ಯಕ್ಷರು ಕಾಂಗ್ರೇಸ್ ಪರಿಶಿಷ್ಟ ಪಂಗಡದ ವಿಭಾಗ ರಾಯಚೂರು ಮತ್ತು ಬಸವ ನಾಯಕ್ ಕುಣೆ ಕೆಲ್ಲೂರು ನಗರ ಬ್ಲಾಕ್ ಕಾಂಗ್ರೇಸ್ ಎಸ್ಟಿ ಮೋರ್ಚಾ ತಾಲೂಕಾ ಉಪಾಧ್ಯಕ್ಷರು ಅವರು ಇದೇ ಜನವರಿ 22 ಭಾನುವಾರದಂದು ನಮ್ಮ ನೆಚ್ಚಿನ ಶಾಸಕರಾದ ಆರ್. ಬಸನಗೌಡ ತುರುವಿಹಾಳ ರವರು ತಾಲೂಕ ಸರ್ವ ಅಧಿಕಾರಿಗಳ ಸಮ್ಮುಖದಲ್ಲಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನೇತೃತ್ವದಲ್ಲಿ ಉದ್ಘಾಟನೆಯನ್ನು ಮಾಡಿರುತ್ತಾರೆ. ಆದರೆ ಇಲ್ಲಿಯವರೆಗೆ ವಸತಿ ನಿಲಯವನ್ನು ಕಾರ್ಯಾರಂಭ ಮಾಡದೆ ಖಾಲಿ ಬಿಟ್ಟಿರುವುದು ಯಾವ ಕಾರಣಕ್ಕೆ ಎಂದು ಸಂಭಂದಪಟ್ಟ ತಾಲೂಕ ಅಧಿಕಾರಿಗಳು ಹಾಗೂ ವಸತಿ ನಿಲಯದ ನಿಲಯ ಪಾಲಕರು ತಿಳಿಸಬೇಕಾಗಿದೆ. ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ದೆ ಆದರೆ ತಾಲೂಕ ಕಛೇರಿಯ ಮುಂಭಾಗ ಧರಣಿ ಹಮ್ಮಿಕೊಳ್ಳಲಾಗುತ್ತದೆ ಎಂದು ಪತ್ರಿಕಾ ಹೇಳಿಕೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ 75 ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕಾಗಿ 2 ಕೋಟಿ ರೂಪಾಯಿ ವೆಚ್ಚದಲ್ಲಿ ವಸತಿ ನಿಲಯವನ್ನು ನಿರ್ಮಿಸಲಾಗಿದ್ದು,ಸಂಭಂದಪಟ್ಟ ಮೇಲಾಧಿಕಾರಿಗಳು ಹಾಗೂ ನಿಲಯ ಪಾಲಕರು ಯಾವ ಕಾರಣಕ್ಕಾಗಿ ವಸತಿ ನಿಲಯವನ್ನು ಕಾರ್ಯಾರಂಭ ಮಾಡಲಾಗಿಲ್ಲ ಎಂದು ತಿಳಿಸಬೇಕು ಎಂದು ಪತ್ರಿಕಾ ಹೇಳಿಕೆ ಮೂಲಕ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

ಬಸನಗೌಡ ಮಾರಲದಿನ್ನಿ ಜಿಲ್ಲಾ ಉಪಾಧ್ಯಕ್ಷರು ಕಾಂಗ್ರೇಸ್ ಪರಿಶಿಷ್ಟ ಪಂಗಡದ ವಿಭಾಗ ರಾಯಚೂರು ಮತ್ತು ಬಸವ ನಾಯಕ್ ಕುಣೆ ಕೆಲ್ಲೂರು ನಗರ ಬ್ಲಾಕ್ ಕಾಂಗ್ರೇಸ್ ಎಸ್ಟಿ ಮೋರ್ಚಾ ತಾಲೂಕಾ ಉಪಾಧ್ಯಕ್ಷರು ಮಸ್ಕಿ

 

ಹಳೆಯ ಬಾಡಿಗೆ ಕಟ್ಟಡದ ಅವಧಿ ಮುಗಿಯದ ಕಾರಣ ಇನ್ನೂ ನಾವು ನೂತನ ವಸತಿ ನಿಲಯಕ್ಕೆ ಬಂದಿರುವುದಿಲ್ಲ ಹಾಗೂ ಈ ವಿಷಯ ತಮಗೆಲ್ಲ ತಿಳಿದಿರುವ ವಿಷಯ. ಸ್ವಲ್ಪ ದಿನಗಳ ನಂತರ ಮುಂದಿನ ದಿನಮಾನಗಳಲ್ಲಿ ಸ್ಥಳಾಂತರಿಸಲಾಗುವುದು ಮಾಧ್ಯಮದವರಿಗೆ ತಿಳಿಸುತ್ತೇವೆ ಎಂದು ಪತ್ರಿಕೆಗೆ ಫೋನ್ ಕರೆಯ ಮೂಲಕ ತಿಳಿಸಿದ್ದಾರೆ.ಮಂಜುಳಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಲಿಂಗಸ್ಗೂರು.

 

 

Be the first to comment

Leave a Reply

Your email address will not be published.


*