ಚಿತ್ರಕಲಾ ಪರಿಷತ್ತಿನಲ್ಲಿ ಇಸ್ಕಾನ್ ಸಂಸ್ಥಾಪಕ ಪ್ರಭು ಪಾದರ ವರ್ಣ ಚಿತ್ರಗಳ ಪ್ರದರ್ಶನ: ಹರಿದಾಸ ಠಾಕೂರ್ ಅವರ “ಇಲ್ಲಸ್ಟ್ರೇಶನ್ಸ್ ಅಂಡ್ ಇಲ್ಯೂಮಿನೇಷನ್ಸ್” ಕೃತಿ ಬಿಡುಗಡೆ

ಬೆಂಗಳೂರು: ಇಸ್ಕಾನ್ ಸೊಸೈಟಿಯ ಸಂಸ್ಥಾಪಕ, ಸ್ವಾಮಿ ಶ್ರೀಲ ಪ್ರಭುಪಾದರ 125 ನೇ ಜನ್ಮ ವಾರ್ಷಿಕೋತ್ಸದ ಸ್ಮರಣಾರ್ಥವಾಗಿ ನಗರದ ಚಿತ್ರ ಕಲಾ ಪರಿಷತ್ ನ ಕಲಾ ಗ್ಯಾಲರಿಯಲ್ಲಿ ವರ್ಣ ಚಿತ್ರಗಳ ಪ್ರದರ್ಶನ ನಡೆಯುತ್ತಿದೆ.

ಶ್ರೀಲ ಪ್ರಭುಪಾದರ ಜೀವನ ಕುರಿತ ವರ್ಣಚಿತ್ರಗಳ ಸಂಗ್ರಹವನ್ನು ಪ್ರದರ್ಶಿಸಲಾಗುತ್ತಿದ್ದು, ಮಂಗಳವಾರದವರೆಗೆ [ಜ.31] ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ.

ಕಲಾ ಪ್ರದರ್ಶನದ ಉದ್ಘಾಟನೆಯ ನಂತರ ಹರಿದಾಸ್ ಠಾಕೂರ್ ದಾಸ್ ವಿರಚಿತ “ಇಲ್ಲಸ್ಟ್ರೇಶನ್ಸ್ ಅಂಡ್ ಇಲ್ಯೂಮಿನೇಷನ್ಸ್” ಎಂಬ ಇಂಗ್ಲಿಷ್ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಇಸ್ಕಾನ್ನ ವಾಸುದೇವ ಸ್ವಾಮಿ ಸೇರಿದಂತೆ ಹಿರಿಯ ಭಕ್ತರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹರಿದಾಸ ಪ್ರಭು ಮಾತನಾಡಿ, “ಈ ಪುಸ್ತಕ ತಮ್ಮ ಎಲ್ಲಾ ಕಲಾಕೃತಿಗಳ ಸಂಕಲನವಾಗಿದೆ. ಶ್ರೀಲ ಪ್ರಭುಪಾದರ ವ್ಯಕ್ತಿತ್ವವನ್ನು ಕ್ಯಾನ್ವಾಸ್‌ನಲ್ಲಿ ಬಣ್ಣಗಳು ಮತ್ತು ಪದಗಳೊಂದಿಗೆ ಸೆರೆಹಿಡಿಯಲು ಒಂದು ಸಣ್ಣ ಪ್ರಯತ್ನ ಮಾಡಿದ್ದೇನೆ, ಶ್ರೀಲ ಪ್ರಭುಪಾದರ ಕೃಷ್ಣ ಭಕ್ತಿ ಪ್ರಚಾರದ ವಿಶೇಷ ಕೊಡುಗೆಯ ಬಗ್ಗೆ ಜಾಗೃತಿ ಮೂಡಿಸುವ ಏಕೈಕ ಉದ್ದೇಶದಿಂದ ಮತ್ತು ಈ ವರ್ಷದ ಈ 125 ನೇ ಜನ್ಮ ವಾರ್ಷಿಕೋತ್ಸವಕ್ಕಾಗಿ ಜಗತ್ತಿಗೆ ಅವರು ನೀಡಿದ ಕೊಡುಗೆಯ ಸ್ಮರಣಾರ್ಥವಾಗಿ ಈ ಒಂದು ಚಿಕ್ಕ ಪ್ರಯತ್ನ ”. ಮಾಡಿರುವುದಾಗಿ ತಿಳಿಸಿದರು.

ಮುಂಬೈ, ದೆಹಲಿ, ಮಥುರಾ ವೃಂದಾವನದಲ್ಲಿ ಈ ಕಲಾ ಪ್ರದರ್ಶನದ ನಂತರ ಇದೀಗ ಬೆಂಗಳೂರಿನಲ್ಲಿ ಕಲಾಕೃತಿಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಹರಿದಾಸ ಪ್ರಭು ತಿಳಿಸಿದರು.

 

 

Be the first to comment

Leave a Reply

Your email address will not be published.


*