ತಿಳಗೋಳ ಗ್ರಾಮದಲ್ಲಿ ಅಂಬಿಗರ ಚೌಡಯ್ಯನವರ ಹಾಗೂ ವಿಠ್ಠಲ ಹೇರೂರವರ ವೃತ್ತ ಅನಾವರಣ

ದೇವರ ಹಿಪ್ಪರಗಿ::  ದೇವರ ಹಿಪ್ಪರಗಿ ಸಮೀಪದ ತಿಳಗೋಳ ಗ್ರಾಮದಲ್ಲಿ ಕೋಲಿ ಸಮಾಜವು ಸೋಮವಾರ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಹಾಗೂ ದಿ ವಿಠ್ಠಲ ಹೆರೂರರವರ ವೃತ್ತ ಅನಾವರಣ ಕಾರ್ಯಕ್ರಮವನ್ನು ದೇವರ ಹಿಪ್ಪರಗಿ ಶಾಸಕರ ಸಹೋದರ ಸುರೇಶಗೌಡ ಸಾದನೂರ, ಸಾಯಬಣ್ಣ ಬಾಗೇವಾಡಿ, ಅಮರೇಶ ಕಾಮನಕೇರಿ, ಜಿಲ್ಲಾ ಪಂಚಾಯತ ಸದಸ್ಯರಾದ ಸಿದ್ದು ಬುಳ್ಳಾ, ಉದ್ಘಾಟಿಸಿದರು.

ಜೆಡಿಎಸ ದೇವರಹಿಪ್ಪರಗಿ ತಾಲ್ಲೂಕಾಧ್ಯಕ್ಷ ಸಾಯಬಣ್ಣ ಬಾಗೇವಾಡಿ ಮಾತನಾಡಿ
ಅಂಬಿಗರ ಚೌಡಯ್ಯ ನವರು ತಮ್ಮ ವಚನಗಳ ಮೂಲಕ ಸಮಾನತೆ ಸೋದರತೆ ಸಾರುವ ಕೇಲಸವನು ಮಾಡಿದವರು. ನೇರ ನುಡಿಯ ಕಠೋರ ಶಬ್ದಗಳ ವಚನಕಾರರಾದ ನಿಜಶರಣರು ಮೌಢ್ಯತೆ,ಕಂದಾಚಾರಗಳ ವಿರುದ್ಧ ವಚನ ಕ್ರಾಂತಿ ಮೂಲಕ ಸಾಮಾಜಿಕ ಕ್ರಾಂತಿ ಕಾರಣರಾದವರು, ಕೋಲಿ ಸಮಾಜದ ಹೋರಾಟದ ಸಿಂಹ ದಿವಂಗತ ವಿಠ್ಠಲ ಹೆರೂರ ರವರು ನಿಜಶರಣ ಚೌಡಯ್ಯ ನವರ ಕಲಿಯುಗದ ಪ್ರತಿ ರೂಪವಾಗಿ ನೇರ ನುಡಿಗಳ ಮೂಲಕ ಕೋಲಿ ಸಮಾಜವನ್ನು ಮೌಢ್ಯತೆ ಕಂದಾಚಾರ ದಿಂದ ಹೊರತರುವದರ ಜೋತೆಗೆ ಕೋಲಿ ಸಮಾಜಕ್ಕೆ ಸಾಮಾಜಿಕ ನ್ಯಾಯ ಸಿಗಬೇಕು ಸಮಾಜ ಎಸಟಿ ಸೇರ್ಪಡೆ ಆಗಬೇಕು ಎಂದು ತಮ್ಮ ಜೀವನವನ್ನೇ ಸಮಾಜಿಕ ಸಮಾನತೆಗೆ ಮುಡಿಪಾಗಿಟ್ಟ ಮಾಹಾನ ನಾಯಕ ವಿಠ್ಠಲ ಹೆರೂರವರು ಎಂದು ಹೇಳಿದರು. ಮಹಾನ್ ದಾರ್ಶನಿಕರ, ಶ್ರೇಷ್ಠ ವ್ಯಕ್ತಿಗಳ ಜೀವನವನ್ನು, ಉಪದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನ ಮಾಡಬೇಕು.ನಾವು ಇನ್ನೊಬ್ಬರನ್ನು ಕೀಳಾಗಿ ನೋಡಿ ವಿರೋಧ ಮಾಡುವುದು ದೊಡ್ಡತನ ಅಲ್ಲ. ನಾವು ಸಕಾರಾತ್ಮಕವಾಗಿ ನೋಡಿ, ಹೇಳಿ ಜೊತೆಗೆ ಕೈಜೋಡಿಸಿ, ಜವಾಬ್ದಾರಿ ತೆಗೆದುಗೆದುಕೊಂಡಾಗ ಮಾತ್ರ ಸಾಮಾಜಿಕ ಭವಿಷ್ಯವನ್ನು ಎಲ್ಲರೂ ಸೇರಿ ನಿರ್ಮಾಣ ಮಾಡಿಕೊಳ್ಳಬಹುದು ಎಂದು ತಿಳಿಸಿದರು.

 

ಜಿಲ್ಲಾ ಪಂಚಾಯತ ಸದಸ್ಯರಾದ ಸಿದ್ದು ಬುಳ್ಳಾ ರವರು ಮಾತಾನಾಡಿ ಸಮಾಜದಲ್ಲಿನ ಡಾಂಭಿಕ ಜೀವನ, ಮೂಢನಂಬಿಕೆ ಹಾಗೂ ಕಂದಾಚಾರಗಳನ್ನು ನೇರವಾಗಿ ಖಂಡಿಸಿ ವಚನಗಳ ಮೂಲಕ ಸತ್ಯದರ್ಶನ ಮಾಡಿ­ಸಿದ ಅಂಬಿಗರ ಚೌಡಯ್ಯ ನಿಷ್ಠುರವಾದಿ ಶರಣರಾಗಿದ್ದರು’ ಶರಣರ, ಮಹನೀಯರ ಜೀವನ ಚರಿತ್ರೆಯ ಬಗ್ಗೆ ಅರಿತು, ಅಂತಹವರ ತತ್ವ ಆದರ್ಶಗಳ ಪೈಕಿ ಕೆಲವನ್ನಾದರೂ, ಬದುಕಿನಲ್ಲಿ ಅಳವಡಿಸಿಕೊಂಡರೆ, ಮನುಷ್ಯನಾದವರ ಜೀವನ ಸಾರ್ಥಕವಾಗಲಿ ಎಂದು ತಿಳಿಸಿದರು.ತಿಳಗೋಳ ಗ್ರಾಮ ನನ್ನ ರಾಜಕೀಯ ಜೀವನಕ್ಕೆ ದಾರಿ ಮಾಡಿಕೊಟ್ಟ ಗ್ರಾಮ ತಿಳಗೋಳಕ್ಕೆ ನಾನು ಸದಾಕಾಲವೂ ಸೇವೆ ಮಾಡಲು ಸಿದ್ದಾ ಹೇಳಿದರು.

ರಾಜ್ಯ ಬುಡಕಟ್ಟು ಜನಾಂಗ ಸಂರಕ್ಷಣ ಸಮಿತಿ ರಾಜ್ಯಧ್ಯಕ್ಷರು ಹಾಗೂ ಪತ್ರಕರ್ತರಾದ ಅಮರೇಶ ಕಾಮನಕೇರಿಯವರು ಮಾತಾನಾಡಿ ಅಂಬಿಗರ ಚೌಡಯ್ಯ, ಬಸವಣ್ಣ ರವರು ಸಮಕಾಲೀನರಾಗಿದ್ದವರು. ಶೋಷಿತ ಜನಾಂಗದಲ್ಲಿ ಜನಿಸಿದ ಅಂಬಿಗರ ಚೌಡಯ್ಯ ನವರು ಜ್ಞಾನ ಸಂಪಾದನೆಯಿಂದ ಶೋಷಿಣೆ ತಡೆ ಸಾಧ್ಯ ಎಂದರಿತ ಚೌಡಯ್ಯನವರು, ಮೌಡ್ಯ ವಿರುದ್ಧ ಅತ್ಯಂತ ತೀಕ್ಷ್ಮ ವಚನಗಳ ಮೂಲಕ ಸಮಾಜದಲ್ಲಿ ಅರಿವು ಮೂಡಿಸಿವರು
12 ನೇ ಶತಮಾನ ಶರಣ ಸಾಹಿತ್ಯದ ಶತಮಾನ. ಸಾಮಾನ್ಯ ಜನರು ಅರ್ಥ ಮಾಡಿಕೊಳ್ಳಬಹುದಾದ ಸರಳ ಪದಗಳಿಂದ ವಚನಗಳನ್ನು ರಚಿಸಿ, ದೇವವಾಣಿಯನ್ನು ಜನವಾಣಿಯನ್ನಾಗಿಸಿದ್ದು, ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕುಸಿದಾಗ ಸಮಾಜ ಸುಧಾರಣೆ, ಶಾಂತಿ ಸ್ಥಾಪನೆಗೆ ಶರಣರ ವಚನ ಕ್ರಾಂತಿಯಿಂದ ಸಾದ್ಯ.ಅದಕ್ಕಾಗಿ 12 ಶತಮಾನದಲ್ಲಿ ಬಸವಣ್ಣ, ಅಂಬಿಗರ ಚೌಡಯ್ಯನಂತಹ ಅನೇಕ ಮಹನೀಯರು ಅವತರಿಸಿದ್ದಾರೆ. ಮನುಕುಲದ ಕಲ್ಯಾಣಕ್ಕಾಗಿ ದುಡಿಯುವವರೇ ಮಹಾತ್ಮರು ಎಂದರು.ವಚನಗಳ ಮೂಲಕ ಸಮಾಜದ ಲೋಪದೋಷಗಳ ಕುರಿತು ತೀಕ್ಷ್ಣ ಮಾತುಗಳ ಮೂಲಕ ಜನಜಾಗೃತಿ ಮೂಡಿಸಲು ಶ್ರಮಿಸಿದರು. ಕಾಯಕ ನಿಷ್ಠೆಯನ್ನು ಎಲ್ಲ ವರ್ಗದವರು ಸಮನಾಗಿ ಗೌರವಿಸಬೇಕು ಎಂಬ ತತ್ವವನ್ನು ತಮ್ಮ ವಚನಗಳಲ್ಲಿ ಬಿಂಬಿಸಿದವರು. ಇವರ ವಚನಗಳಲ್ಲಿ ನಿಜ ಶರಣರ ಗಂಭೀರತೆಯ ಜೊತೆಗೆ ಸಮಾಜ ಸುಧಾರಣೆಯ ತೀಕ್ಷ್ಣತೆ ತುಂಬಿಕೊಂಡಿದೆ. ಹೊಗಳುವಿಕೆಯನ್ನು ಬದಿಗಿಟ್ಟು ನಿಷ್ಠುರವಾಗಿ ವಾದಿಸಿದವರು ನಿಜಶರಣ ಅಂಬಿಗರ ಚೌಡಯ್ಯನವರು,ಅದೇ ರೀತಿಯಲ್ಲಿ ಕೋಲಿ ಸಮಾಜದಲ್ಲಿ ಜನಿಸಿದ ಹೋರಾಟದ ಸಿಂಹ ವಿಠ್ಠಲ ಹೆರೂರು ರವರು ಕೋಲಿ ಸಮಾಜದಲ್ಲಿ ಸಾಮಾಜಿಕ ಕ್ರಾಂತಿಯನ್ನೇ ಮಾಡಿದವರು ಕೋಲಿ ಸಮಾಜಕ್ಕೆ ಆಗುತ್ತಿದ ಅನ್ಯಾಯದ ವಿರುದ್ಧ ಸ್ವಾಭಿಮಾನದಿಂದ ಹೋರಾಟ ಮಾಡಿದ ದಿಮಂತ ಮಾಹಾ ನಾಯಕರು ವಿಟಿ ಜಿ ಯವರು ಸಮಾಜಕ್ಕೆ ಎಸ ಟಿ ಸೇರ್ಪಡೆ ಮಾಡಬೇಕು ಎಂದು ವಿಧಾನ ಸೌಧದಲ್ಲಿ ಮೊಟ್ಟ ಮೊದಲಿಗೆ ಧ್ವನಿ ಎತ್ತಿದ ಸ್ವಾಭಿಮಾನದ ನಾಯಕರಾದ ವಿಠ್ಠಲ ಹೆರೂರ ಕನಸು ನನ್ನಸಾಗಿಸುವ ಪ್ರಯತ್ನ ಇಡೀ ಸಮಾಜ ಒಂದುಗೂಡಿ ಮಾಡಬೇಕಾಗಿದೆ.

ತಳವಾರ ::- ತಳವಾರ ಸಮಾಜಕ್ಕೆ ಸಮಾಜಿಕ ನ್ಯಾಯ ಸಿಕ್ಕಿದೆ ಅದು ಕಾಗದಕ್ಕೆ ಮಾತ್ರ ಸಿಮೀತವಾಗಬಾರದು ತಳವಾರ ಜಾತಿ ಜನಾಂಗದವರಿಗೆ ನಾಯ್ಕಡ (ಪರಿವಾರ ತಳವಾರ) ಎಂದು ಎಸ ಟಿ ಸರ್ಟಿಫಿಕೇಟ್ ನೀಡುತ್ತಿದಾರೆ, ಇದರಿಂದ ತಳವಾರ ಜನಾಂಗವು ತೊಂದರೆಗೆ ಅನುಭವಿಸುವಂತಾಗಿದೆ ತಳವಾರ ಜನಾಂಗದವರಿಗೆ ನೇರವಾಗಿ ತಳವಾರ ಎಂದು ಎಸ ಟಿ ಸರ್ಟಿಫಿಕೇಟ್ ದೊರೆಯುವಂತಾಗಬೇಕು,ಅಟಲ್ ಜಿ ಜನ ಸ್ನೇಹಿ (ನೆಮ್ಮದಿ) ಕೇಂದ್ರದಲ್ಲಿ ಆಗಿರುವ ಲೋಪದೋಷಗಳನು ಸರಿಪಡಿಸಿ ನೇರವಾಗಿ ತಳವಾರ ಎಂದು ಸರ್ಟಿಫಿಕೇಟ್ ನೀಡಬೇಕು ಈ ಬಗ್ಗೆ ಮಾನ್ಯ ದೇವರ ಹಿಪ್ಪರಗಿ ಶಾಸಕರು ಗಮನ ಹರಿಸಬೇಕು ಮತ್ತು ರಾಜ್ಯಪಾಲರಗೆ ಹಾಗೂ ಸರ್ಕಾರಕ್ಕೆ ಪತ್ರ ಬರೆಯಬೇಕು ಎಂದು ಆಗ್ರಹ ಮಾಡಿದರು

ವಿಠ್ಠಲ ಹೆರೂರ ಜಿ ಯವರ ಕನಸು ಇಡೀ ಕರ್ನಾಟಕದ ಕೋಲಿ ಸಮಾಜವನ್ನು ಎಸ ಟಿ ಸೇರಿಸುವುದಾಗಿತ್ತು.ಅವರ ಹೋರಾಟಕ್ಕೆ ಸರ್ಕಾರಗಳು ಮಣಿದು ಕೇಂದ್ರಕ್ಕೆ ಎಸ ಟಿ ಪೈಲನ್ನು ಕಳಿಸಿದವು ಆದರೆ ಲೋಪದೋಷಗಳೊಂದಿಗೆ ಕಳಿಸಿ ಪ್ರತಿ ಚುನಾವಣೆಯಲ್ಲಿ ಮತ ಪಡೆಯುವ ಅಸ್ತ್ರ ಮಾಡಿಕೊಂಡಿರುವುದು ವಿಪರ್ಯಾಸ. ಕೋಲಿ ಸಮಾಜ ಎಸ ಟಿ ಆಗಬೇಕಾದರೆ ವಿಟಿ ಜಿ ಯವರು ಹೇಳಿದಂತೆ ಟೋಕರೆ ಕೋಳಿ ಬಿಟ್ಟು ಹೊದ ಪರ್ಯಾಯ ಪದಗಳು ಎಂದು ಪೈಲ ಕೇಂದ್ರ ಸರ್ಕಾರಕ್ಕೆ ಕಳಿಸಬೇಕು ಎಸ ಟಿ ಆಗಲು ಅರ್ಹತೆ ಹೊಂದಿರುವ ಕೋಳಿ,ಕಬ್ಬಲಿಗ,ಕಬ್ಬೇರ,ಅಂಬಿಗ,ಬೆಸ್ತ,ಬಾರ್ಕಿ,ಬೋಯಿ ಪದಗಳ ಮಾತ್ರ ಕಳಿಸಬೇಕು ಅಂದಾಗ ಮಾತ್ರ ಎಸ ಟಿ ಆಗಲು ಸಾಧ್ಯ,37 ಪರ್ಯಾಯ ಪದಗಳು ಮತ್ತು ಗಂಗಮತ ಅನುವ ಕಾರಣಕ್ಕೆ ಎಸ ಟಿ ಸೇರಿಸಲು ಬರುವದಿಲ್ಲ ಎಂದು ತಿರಸ್ಕರಿಸಿದರು ಮತ್ತೆ ಮತ್ತೆ ಗಂಗಮತ 37,34 ಪದ ಎಂದು ಕಳಿಸುತ್ತಿದ್ದಾರೆ. ಕೇಂದ್ರ ಸರ್ಕಾರ 2021 ನಂತರ ಎರಡ ಸಲ ರಾಜ್ಯ ಸರ್ಕಾರಕ್ಕೆ ಮಾಹಿತಿ ಕೇಳಿದೆ ಇವರು ತಪ್ಪು ಮಾಹಿತಿ ನಿರಂತರ ನೀಡುತ್ತಿರುವದರಿಂದ ಎಸ ಟಿ ಸೇರ್ಪಡೆ ಆಗುತ್ತಿಲ್ಲ. ಕೋಲಿ ಸಮಾಜಕ್ಕೆ ಎಸ ಟಿ ಸಿಗಬಾರದು ಅನುವ ಕಾರಣಕ್ಕೆ ಕೆಲವು ಜನ ಗಂಗಮತದ 37 ಪರ್ಯಾತ ಗಂಗಮತ 34 ಪರ್ಯಾಯ ಪದಗಳು ಎಸ ಟಿ ಸೇರ್ಪಡೆ ಎಂದು ಹೇಳಿ ಎಸಟಿ ಸೇರ್ಪಡೆ ಆಗದಂತೆ ತಡೆಯುತ್ತಿದ್ದಾರೆ ಎಂದು ಗಂಭಿರವಾಗಿ ಆರೋಪಿಸಿದರು.

ಈ ಸಂದರ್ಭದಲ್ಲಿ ಆಕಾಶ ಬೂದಿಹಾಳ, ಪ್ರೇಮಾನಂದ ಮಾಡಗಿ, ಗ್ರಾಮ ಪಂಚಾಯತ ಅಧ್ಯಕ್ಷರಾದ ಸಂತೋಷ ರಾಠೋಡ, ಗ್ರಾಮ ಪಂಚಾಯತ ಉಪಧ್ಯಕ್ಷರಾದ ರಾಜ್ಯ ಬುಡಕಟ್ಟು ಜನಾಂಗ ಸಂರಕ್ಷಣ ಸಮಿತಿ ಸದಸ್ಯ ಆನಂದ ಹೊಸಗೌಡರ,ರಮೇಶ ಬಿಳಬಾವಿ, ಬೀಮರಾಯ್ ಚಿಗರಿ,ಗ್ರಾಮ ಪಂಚಾಯತ ಸದಸ್ಯರಾದ ಯಮನಪ್ಪ, ಗ್ರಾಮ ಪಂಚಾಯತ ಸದಸ್ಯರಾದ ವಿಠೊಬಾ ನಾಟಿಕಾರ,ರವಿ ಮುರಡಿ, ಗ್ರಾಮ ಪಂಚಾಯತ ಸದಸ್ಯರಾದ ಗುರು ಭೂಯ್ಯಾರ,ರವಿ ಚಿಗರಿ,ರವಿ ನಾಯ್ಕೋಡಿ,ಬಾಗು ಬಿರಾದರ, ಹನುಮಂತ ಗೆದ್ದಲಮರಿ ಹಾಗೂ ಗ್ರಾಮದ ಹಿರಿಯರು ಮತ್ತು ಯುವಕರು ಮುಖಂಡರು ಹಾಜರಿದ್ದರು

Be the first to comment

Leave a Reply

Your email address will not be published.


*