- ಕೋಲಾರ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಹಾಗೂ ಶ್ರೀನಿವಾಸಪುರ ತಾಲ್ಲೂಕು ಕಾರ್ಮಿಕರ ಘಟಕದ ವತಿಯಿಂದ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ವಿತರಣೆ ಹಾಗೂ ಕಾರ್ಮಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಶ್ರೀನಿವಾಸಪುರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿಕರ್ನಾಟಕ ರಾಜ್ಯ ಜೆಡಿಎಸ್ ಯುವ ಬ್ರಿಗೇಡ್ ನ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎನ್. ರಾಜಾರೆಡ್ಡಿಯವರು ಭಾಗವಹಿಸಿ ಮಾತನಾಡಿ, ಕಟ್ಟಡ ಕಾರ್ಮಿಕರಿಗೆ ಸರ್ಕಾರದಿಂದ ಹಲವಾರು ಸೌಲಭ್ಯಗಳಿವೆ. ಕಾರ್ಮಿಕರ ಮಕ್ಕಳ ಮದುವೆಗೆ ಧನಸಹಾಯ, ಶೈಕ್ಷಣಿಕವಾಗಿ ಮುಂದುವರೆಯಲು ಹಲವಾರು ಸೌಲಭ್ಯಗಳಿವೆ. ಆ ಸೌಲಭ್ಯಗಳನ್ನು ಕಾರ್ಮಿಕರು ಸದುಪಯೋಗ ಪಡಿಸಿಕೊಂಡು ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ಕಾರ್ಮಿಕರಿಗೆ ಮನೆಯ ಹತ್ತಿರವೇ ಉದ್ಯೋಗ ಸಿಗುವುದಿಲ್ಲ, ಅವರು ಉದ್ಯೋಗವನ್ನು ಮಾಡಲು ಊರಿನಿಂದ ಊರಿಗೆ ಹೋಗಬೇಕಾಗುತ್ತದೆ, ಹೀಗಾಗಿ ಅವರಿಗೆ ಉಚಿತ ಬಸ್ ಪಾಸ್ ನೀಡುವುದರ ಮೂಲಕ ಅನುಕೂಲವಾಗುತ್ತದೆ. ಪ್ರತಿನಿತ್ಯ ಅವರು 150 ರಿಂದ 200 ರೂಪಾಯಿಗಳು ಕೆಲಸ ಮಾಡಿ ಬರಲು ಖರ್ಚಾಗಿ ಬಿಡುತ್ತವೆ ಹೀಗಾಗಿ ಅವರಿಗೆ ಉಚಿತ ಬಸ್ ಪಾಸ್ ನೀಡವುದರಿಂದ ಹೆಚ್ಚಿನ ಸಹಾಯವಾಗುತ್ತದೆ ಎಂದರು. ಅಷ್ಟೇ ಅಲ್ಲದೆ ಕಾರ್ಮಿಕರಲ್ಲಿ ಹಲವಾರು ವಿಷಯಗಳ ಕುರಿತು ಅರಿವುಮೂಡಿಸಿದರು.
- ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯರು ಹಾಗೂ ಜಿಲ್ಲಾ ಪಂಚಾಯ್ತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಶ್ರೀನಿವಾಸ ಯಾದವ್, ಕಟ್ಟಡ ಕಾರ್ಮಿಕರ ಸಂಘದ ತಾಲ್ಲೂಕು ಅಧ್ಯಕ್ಷ ಆನಂದ್, ಉಪಾಧ್ಯಕ್ಷ ನಾರಾಯಣಪ್ಪ, ಮುಳಬಾಗಿಲು ತಾಲ್ಲೂಕು ಯುವ ಜನತಾದಳ ಅಧ್ಯಕ್ಷ ಅರುಣ್ ಕುಮಾರ್ ಸೇರಿದಂತೆ ಸ್ಥಳೀಯ ಮುಖಂಡರು ಹಾಜರಿದ್ದರು.
Be the first to comment