ಯಾದಗಿರಿ ಜಿಲ್ಲೆಯ ರೈತನ ಮನವಿಗೆ ಸ್ಪಂದಿಸಿ ವಕೀಲರನು ಹೈಕೋರ್ಟ ನಲ್ಲಿ ವಾದ ಮಾಡಲು ಸ್ವತಃ ಖರ್ಚಿನಲ್ಲಿ ವಕೀಲರನ್ನು ನೀಡಿದ ಹಿಂದುಳಿದ ವರ್ಗ ಆಯೋಗ ಸದಸ್ಯ ಅರುಣ ಕುಮಾರ ಕಲ್ಗದೆ

ಬೆಂಗಳೂರು :: ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಹಗರಟಗಿ ಗ್ರಾಮದ ರೈತ ಸಂಗಣ್ಣ ಶಿವಪ್ಪ ಚಳ್ಳಗಿ ಎಂಬುವರುಗೆ ಕರ್ನಾಟಕ ಭೂ ನ್ಯಾಯ ಮಂಡಳಿಯಿಂದ ನೋಟಿಸ ನೀಡಲಾಗಿತ್ತು ರೈತನ್ನು ಅಮರೇಶ ಕಾಮನಕೇರಿ ಯವರ ಮುಖಾಂತರ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಅರುಣ ಕುಮಾರ ಕಲ್ಗದೆ ರವರನು ಭೇಟಿಯಾಗಿ ತಮಗಾದ ಸಮಸ್ಯೆ ತಿಳಿಸಿದ್ದಾರೆ ತಕ್ಷಣ ಸ್ಪಂದಿಸಿದ ಅರುಣ ಕುಮಾರ ಕಲ್ಗದೆರವರು ರೈತನ‌ ಪರ ವಾದ ಮಾಡಲು ವಕೀಲರನ್ನು ನೇಮಿಸಿ ಕೊಟ್ಟು ನ್ಯಾಯ ಕೋಡಿಸಿದ್ದಾರೆ.

ರೈತ ಸಂಗಣ್ಣ ತಂದೆಯಾದ ಶಿವಪ್ಪ ನವರು 1978 ರಿಂದ ಹಗರಟಗಿ ಗ್ರಾಮದ ಸರ್ವೇ ನಂ25 ರಲ್ಲಿ ವ್ಯವಸಾಯ ಮಾಡಿಕೊಂಡು ಬಂದಿದ್ದಾರೆ. ಭೂ ಹಪ್ತಾ ಕೂಡ ಕಟ್ಟಿ ಕೊಂಡು ಬಂದಿದ್ದಾರೆ.1993ರಲ್ಲಿ ಇವರಿಗೆ ಸರ್ಕಾರವೇ ಇವರಿಗೆ 3 ಹೆಕ್ಟರ ಭೂಮಿಯನ್ನು ಮಂಜೂರು ಮಾಡಿದೆ. ಹಿಂದಿನ ಯಾವ ದಾಖಲೆಗಳನ್ನು ನೋಡದೆ 2017 ರಲ್ಲಿ ಕೊಡೆಕಲ್ಲ ಉಪ ತಹಶೀಲ್ದಾರರು ಅಕ್ರಮ ಭೂ ಕಬಳಿಕೆಯ ಕ್ರಿಮಿನಲ್ ಕೇಸ ದಾಖಲಿಸಿ ರೈತ ಶಿವಪ್ಪನಿಗೆ ತೊಂದರೆ ನೀಡಿದ್ದಾರೆ. ರೈತ ಶಿವಪ್ಪ ಅನಾರೋಗ್ಯ ತುತ್ತಾಗಿ 2021 ರಲ್ಲಿ ಮರಣ ಹೊಂದಿದ್ದಾರೆ.ಅವರ ಮಗ ಸಂಗಣ್ಣ ಚಳ್ಳಿಗೆಗೆ ನೋಟಿಸ ನೀಡಿದ್ದರಿಂದ ರೈತ ಸಂಗಣ್ಣ ಚಳ್ಳಗಿ ಅರುಣ ಕುಮಾರ ವರಿಗೆ ಪೋನ ಕರೆ ಮಾಡಿ ತಮ್ಮ ಸಮಸ್ಯೆ ಹೇಳಿಕೊಂಡಿದರು ಸಮಸ್ಯೆಗೆ ಸ್ಪಂದಿಸಿ ಬೆಂಗಳೂರುಗೆ ಕರೆಸಿಕೊಂಡಿ ಕಾನೂನು ನೇರವು ನೀಡಿ ಬಡ ರೈತನ ಪರ ನ್ಯಾಯ ಕೋಡಿಸಿದ್ದಾರೆ

Be the first to comment

Leave a Reply

Your email address will not be published.


*