ಅಧ್ಯಕ್ಷರನ್ನು ಯಾಮಾರಿಸಿ ಹಣ ದೋಚಿದ ಪಿಡಿಓ…! ಬಂಧನಕ್ಕೆ ಆಗ್ರಹ

ವರದಿ : ಪುರುಷೋತ್ತಮ ನಾಯಕ

ಡೊಂಗಲ್ ಬಳಸಿ ಹಣ ಎಗರಿಸಿದ ಪಿಡಿಒ.!  ಆಲ್ದಾಳ ಪಂಚಾಯಿತಿಯಲ್ಲಿ ಕಳ್ಳತನಕ್ಕಿಳಿದ ಪಂಚಾಯತ  ಅಭಿವೃದ್ಧಿ ಅಧಿಕಾರಿ


ಸುರಪುರ: ತಾಲ್ಲೂಕಿನ ಆಲ್ದಾಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಂ.ಪಂಚಾಯಿತ ಅಧ್ಯಕ್ಷರನ್ನೇ ಯಾಮಾರಿಸಿ ಹಣ ಲಪಟಾಯಿಸಿರುವ ಆರೋಪ ಕೇಳಿ ಬಂದಿದೆ.

ಗ್ರಾಮೀಣ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಸರಕಾರ ಗ್ರಾಮ ಪಂಚಾಯಿತಿಗಳ ಮೇಲೆಯೇ ಅವಲಂಭನೆಯಾಗಿದ್ದು. ವಿವಿಧ ಯೋಜನೆಗಳ ಮೂಲಕ ಲಕ್ಷ ಲಕ್ಷ ಹಣ ಸಂದಾಯ ಮಾಡುತ್ತಿದೆ. ತಮ್ಮ ಅಧಿಕಾರ ಬಳಸಿಕೊಂಡು ಅಭಿವೃದ್ಧಿ ಮಾಡಬೇಕಾದ ಅಧಿಕಾರಿಗಳು ಮಾತ್ರ, ಇಷ್ಟು ದಿನ ಜನ ಸಾಮಾನ್ಯರನ್ನು ಯಾಮಾರಿಸಿ ಹಣ ಲೂಟಿ ಮಾಡುತ್ತಿದ್ದರು. ಸಧ್ಯ ಜನ ಪ್ರತಿನಿಧಿಗಳನ್ನು ಯಾಮಾರಿಸಿ ಹಣ ಲಪಟಾಯಿಸುವ ದಂದೆಯಲ್ಲಿ ತೊಡಗಿದ್ದಾರೆನ್ನುವ ಗಂಭೀರ ಆರೋಪ ಕೇಳಿ ಬರುತ್ತಿದೆ.

ಸರಸ್ವತಿ ಎನ್ನುವ ಆಲ್ದಾಳ ಗ್ರಾಮ ಪಂಚಾಯಿತ ಅಭಿವೃದ್ಧಿ ಅಧಿಕಾರಿ. ಗ್ರಾಮ ಪಂವಾಯಿತ ಅಧ್ಯಕ್ಷರಾದ ನಾಗರತ್ನ ಶ್ರೀನಿವಾಸ ಅವರನ್ನು ನಂಬಿಸಿ ಉಪಾಯದಿಂದ ಅಧ್ಯಕ್ಷರ ಡೊಂಗಲ್ ಪಡೆದು ಸುಮಾರು ಹದಿಮೂರು ಲಕ್ಷದ ಮೂವತ್ತು ಸಾವಿರದ ಒಂದುನೂರು ರೂಗಳನ್ನು ಯಾರಿಗೂ ತಿಳಿಯದಂತೆ ಹದಿನೈದನೇ ಹಣಕಾಸು ಯೋಜನಡೆಯಲ್ಲಿ ಹಣ ದೋಚಿದ್ದಾರೆಂದು ಆರೋಪಿಸಲಾಗಿದೆ.

ಸಧ್ಯ ಹಣ ಲಪಟಾಯಿಸಿರುವ ಕುರಿತು ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರುಗಳು ಬ್ಯಾಂಕ್ ಸ್ಟೆಟಮೆಂಟ ಪಡೆದಾಗ ತಿಳಿದು ಬಂದಿದ್ದು. ಅಭಿವೃದ್ಧಿ ಅಧಿಕಾರಿಯನ್ನು ಸೇವೆಯಿಂದ ಅಮಾನತ್ತುಗೊಳಿಸಿ. ಸರಕಾರದ ಹಣ ವಸೂಲಿ ಮಾಡುವಂತೆ ಗ್ರಾಂ.ಪಂ. ಅಧ್ಯಕ್ಷೆ ಮತ್ತು ಸದಸ್ಯರುಗಳು ಒತ್ತಾಯಿಸಿದ್ದಾರೆ.

ಹಣ ಲಪಾಟಿಸಿ ಗೈರಾದ ಅಧಿಕಾರಿ:* ಕಳೆದ ಆ. ೧ ರಿಂದ ಗ್ರಾಮ ಪಂಚಾಯಿತ ಕಚೇರಿಯತ್ತ ಅಭಿವೃದ್ಧಿ ಅಧಿಕಾರಿ ಸುಳದಿಲ್ಲ. ಸಾರ್ವಜನಿಕರ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ. ಕೆಲಸಗಳ ನಿಮಿತ್ತ ಸಾರ್ವಜನಿಕರು ಫೋನ ಮೂಲಕ ಸಂಪರ್ಕಿಸಿದಾಗ ಸಂಪರ್ಕಕ್ಕೂ ಸಿಕ್ಕಿಲ್ಲ. ದೇಶಾದ್ಯಂತ 75 ನೇ ಸ್ವಾತಂತ್ರ್ಯಅಮೃತ ಮಹೋತ್ಸವನ್ನು ಸಂಭ್ರಮದಿಂದ ಆಚಿರಿಸುತ್ತಿರುವ ಸಂದರ್ಭದಲ್ಲಿ. ತಮ್ಮ ಗ್ರಾಂ. ಪಂಚಾಯಿತ ವ್ಯಾಪ್ತಿಯಲ್ಲಿ ಆಚರಸುವಂತೆ ಸರಕಾರದ ಆದೇಶಿಸಿದ್ದರು ಸಹ ಆ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಗೈರಾಗಿದ್ದರು.


ಸಾರ್ವಜನಿಕರ ಹಣ ಲೂಟಿ ಮಾಡಿ ನಾಪತ್ತೆಯಾಗಿರುವ, ಅಭಿವೃದ್ಧಿ ಅಧಿಕಾರಿಯನ್ನು ಸೇವೆಯಿಂದ ವಜಾಮಾಡಬೇಕು ಹಾಗು ಬಂಧಿಸಿ ಹದಿಮೂರು ಲಕ್ಷ ಹಣ ವಸೂಲಿ ಮಾಡಬೇಕು ಅಲ್ಲಿವರೆಗೂ ನಾವು ನಿರಂತರ ಹೋರಾಟ ಮಾಡುತ್ತೆವೆ.

ರಮೇಶ ದೋರೆ ಆಲ್ದಾಳ.
ಗ್ರಾಮದ ಮುಖಂಡರು.


ಡೊಂಗಲ್ ದುರುಪಯೋಗ ದೂರು ದಾಖಲು: ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನಮ್ಮ ಅವರನ್ನು ಯಾಮಾರಿಸಿ ಅಧ್ಯಕ್ಷರ ಡೊಂಗಲ ಬಳಸಿ. ಆ. 4 ರಂದು ಬ್ಯಾಂಕಿನಿಂದ ಹಣ ವರ್ಗಾವಣೆ ಮಾಡಿಕೊಂಡಿರುವ ಕುರಿತು. ಆಲ್ದಾಳ ಗ್ರಾಂ. ಪಂಚಾಯಿತ ಅಧ್ಯಕ್ಷರು ನಗರ ಠಾಣೆಯಲ್ಲಿ. ಆ. 17 ರಂದು ದೂರು ದಾಖಲಿಸಿದ್ದಾರೆ. ಇಲ್ಲಿಯವರೆಗೂ ಆರೋಪಿ ಅಧಿಕಾರಿ ವಿರುದ್ಧ ಯಾವುದೇ ಕ್ರಮ ಆಗಿಲ್ಲವೆಂದು ಅವರು ಆರೋಪಿಸಿದ್ದಾರೆ.

ಸೇವೆಯಿಂದ ವಜಾಕ್ಕೆ ಆಗ್ರಹಿಸಿ ನಿರಂತರ ಧರಣಿ ಸತ್ಯಾಗ್ರಹ:* ಗ್ರಾಂ. ಪಂ ಅಧ್ಯಕ್ಷರನ್ನು ಯಾಮಾರಿಸಿ ಹಣ ಲಪಟಾಯಿಸಿರುವ ಅಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಿ, ಬಂಧಿಸಿ ಸರಾಕರದ ದುಡ್ಡನ್ನು ಮರಳಿ ಪಡೆಯುವಂತೆ ಒತ್ತಾಯಿಸಿ. ಗ್ರಾಂ. ಪಂ ಅಧ್ಯಕ್ಷರಾದ ನಾಗರತ್ನಮ್ಮ ಅವರ ನೇತೃತ್ವದಲ್ಲಿ ಸರ್ವ ಸದಸ್ಯರುಗಳು, ನಗರದ ತಾಲ್ಲೂಕು ಪಂಚಾಯಿತಿ ಕಾರ್ಯಲದ ಮುಂದೆ ನಿರಂತರ ಧರಣಿ ಸತ್ಯಾಗ್ರಹವನ್ನು ನಡೆಸುತ್ತಿದ್ದಾರೆ.

 

Be the first to comment

Leave a Reply

Your email address will not be published.


*