ಮೈಟ್ರಕ್ ನಂತರ ಬಾಲಕಿಯರ ವಸತಿ ನಿಲಯದ ಕಾಮಗಾರಿಯ ಭೂಮಿ ಪೂಜೆ…!

ವರದಿ: ಶರಣಪ್ಪ ಹೇಳವರ

ಜಿಲ್ಲಾ ಸುದ್ದಿಗಳು 

ಇಲಕಲ:

CHETAN KENDULI

ನಗರದಲ್ಲಿ ನೂತನವಾಗಿ ಹಿಂದುಳಿದ ವರ್ಗಗಳ ಕಾಲ್ಯಾಣ ಇಲಾಖೆಯ ಡಿ.ದೇವರಾಜ್ ಅರಸು ಸರಕಾರಿ ಮೈಟ್ರಕ್ ನಂತರ ಬಾಲಕಿಯರ ವಸತಿ ನಿಲಯದ (ಅಂದಾಜು ಮೊತ್ತ 245.24 ಲಕ್ಷ ರೂಪಾಯಿಗಳು) ಕಾಮಗಾರಿಯ ಭೂಮಿ ಪೂಜೆಯನ್ನು ಹುನಗುಂದ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ದೊಡ್ಡನಗೌಡ ಜಿ ಪಾಟೀಲ್ ಅವರು ನೇರವೆರಿಸಿದರು.

ಈ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷರಾದ ಶ್ರೀ ಮಂಜುನಾಥ ಶೆಟ್ಟರ್, ಉಪಾಧ್ಯಕ್ಷರಾದ ಶ್ರೀ ಗುರುದತ್ತಾತ್ರೇಯ ಗುಳೇದ, ಮಾಜಿ ಅಧ್ಯಕ್ಷರಾದ ಶ್ರೀಮತಿ ಶೋಭಾ ಆಮದಿಹಾಳ ನಗರಸಭೆಯ ಹಿರಿಯ ಸದಸ್ಯರಾದ ಶ್ರೀ ಲಕ್ಷ್ಮಣ ಗುರಂ ಹಾಗೂ ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ

ಜಿ .ಎನ್. ಖ್ಯಾಡಿ ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಅಧಿಕಾರಿ ನಟರಾಜ್ (ಎಇಇ) ಹಾಗೂ ಗುತ್ತಿಗೆದಾರರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*