ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯೊಂದಿಗೆ ಗಣೇಶ್ ಹಬ್ಬ ಆಚರಣೆ ಮಾಡಲು ಭಟ್ಕಳ್ ತಾಲೂಕ ಆಡಳಿತ ಮನವಿ

ವರದಿ- ಕುಮಾರ ನಾಯಕ್ ಭಟ್ಕಳ್ , ಉಪಸಂಪಾದಕರು

 

ಭಟ್ಕಳ

ಗಣೇಶ ಹಬ್ಬದ ನಿಮಿತ್ತ ಭಟ್ಕಳ ತಾಲೂಕಿನಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಸಾರ್ವಜನಿಕ ಗಣೇಶ ಮಂಡಳಿಗಳೊAದಿಗೆ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಭಟ್ಕಳ ತಾಲೂಕೂ ಆಡಳಿತ ಸೌಧದ ತಹಸೀಲ್ದಾರ ಕಚೇರಿಯಲ್ಲಿ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.

ಸಭೆಯಲ್ಲಿ ಸರಕಾರದ ಮಾರ್ಗಸೂಚಿಯನ್ನು ನಗರ ಠಾಣೆ ವ್ರತ್ತ ನಿರೀಕ್ಷಕ ದಿವಾಕರ್ ಪಿ.ಎಮ್. ವಿವರಿಸಿದರು.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಾಗಿ ನಿಯಮ ಪಾಲಿಸುವಂತೆ ಸುತ್ತೋಲೆ ಹೊರಡಿಸಿದೆ.
ಗಣೇಶ ಹಬ್ಬದಲ್ಲಿ ಸಾರ್ವಜನಿಕ ಗಣೇಶೋತ್ಸವದ ಆಚರಣೆಗೆ ಪರವಾನಿಗೆಯನ್ನು ಎಲ್ಲಾ ಇಲಾಖೆಗಳ ಸಮನ್ವಯದಿಂದ ನೀಡುವಂತೆ ಮತ್ತು ಏಕ ಗವಾಕ್ಷಿ ಯೋಜನೆಯಲ್ಲಿ ಅನುಮತಿ ನೀಡುವಂತೆ ರಾಜ್ಯ ಸರ್ಕಾರ ಸುತ್ತೋಲೆಯನ್ನು ಹೊರಡಿಸಿದೆ.
ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಲು ಸೂಕ್ತವಾಗಿರುವ ಸ್ಥಳ, ಪೆಂಡಾಲ್, ವಿದ್ಯುತ್ ಸಂಪರ್ಕ ಇನ್ನು ಮುಂತಾದವುಗಳ ಪರವಾನಿಗೆಯನ್ನು ಕಂದಾಯ, ಲೋಕೋಪಯೋಗಿ ಇಲಾಖೆ ಅಗ್ನಿಶಾಮಕ ದಳ ಹಾಗೂ ಪೋಲೀಸ್ ಇಲಾಖೆಗಳಿಂದ ಸಂಯೋಜಿತವಾಗಿ ಅಗತ್ಯವಿರುವ ಏಕ ಗವಾಕ್ಷಿ ಅಡಿಯಲ್ಲಿ ಪಡೆದುಕೊಳ್ಳಲು ಸೂಚಿಸಲಾಗಿದೆ. ಪರವಾನಿಗೆ ಪತ್ರವನ್ನು ನೀಡುವ ಮುನ್ನ ಆಯೋಜಕರಿಂದ ಕಾಲಕಾಲಕ್ಕೆ ಮಾತ್ರ ನ್ಯಾಯಾಲಯದ ನಿರ್ದೇಶನಗಳನ್ನು ಹಾಗೂ ಸಂಬAಧಪಟ್ಟ ಇಲಾಖೆಗಳಿಂದ ನೀಡಿರುವ ಸೂಚನೆಗಳನ್ನು ಪಾಲಿಸುವ ಬಗ್ಗೆ ಮುಚ್ಚಳಿಕೆಯನ್ನು ಪಡೆಯಬೇಕು.

ಪರಿಸರ ಮಾಲಿನ್ಯ ಉಂಟಾಗದ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಬೇಕು.ಅಗತ್ಯವಿರುವ ಕಡೆಗಳಲ್ಲಿ ಸಿ.ಸಿ. ಕ್ಯಾಮರಾ ಅಳಡವಡಿಸಬೇಕು.ವಿಶೇಷವಾಗಿ ಹೈ- ಟೆನ್ಶನ್ ತಂತಿಗಳು ಹಾದು ಹೋಗಿರುವ ಕಡೆಗಳಲ್ಲಿ ಯಾವುದೇ ಕಾರಣಕ್ಕೂ ಗಣೇಶಮೂರ್ತಿ ಸ್ಥಾಪಿಸಲು ಅನುಮತಿ ಇಲ್ಲ. ಕಾರ್ಯಕ್ರಮದ ಆಯೋಜಕರು ಮುಂಚಿತವಾಗಿ ನಿಗದಿತ ಸಮಯದ ಒಳಗಾಗಿ ಅರ್ಜಿಯನ್ನು ಸಲ್ಲಿಸಬೇಕು. ಎಲ್ಲಾ ಸಂಘ- ಸಂಸ್ಥೆಗಳ ಮುಖ್ಯಸ್ಥರನ್ನು ಒಳಗೊಂಡು ಸಭೆ ನಡೆಸಿ, ಮುನ್ನೆಚ್ಚರಿಕಾ ಕ್ರಮಕೈಗೊಳ್ಳಬೇಕೆಂದು ತಿಳಿಸಿದರು.

ಇನ್ನು ಸ್ಥಳೀಯವಾಗಿ ಡಿ.ಜೆ. ಬಳಕೆಗೆ ಸಭೆಯಲ್ಲಿ ಗಣೇಶೋತ್ಸವ ಸಮಿತಿ ಅವರು ಅಧಿಕಾರಿಗಳಲ್ಲಿ ಕೇಳಿದ್ದು ಇದಕ್ಕೆ ಡಿವೈಎಸ್ಪಿ ಕೆ.ಯು.ಬೆಳ್ಳಿಯಪ್ಪ ಅವರು ಸರಕಾರದಿಂದ ಸದ್ಯಕ್ಕೆ ಡಿಜೆ ಬಳಕೆ ಪರವಾನಿಗೆ ಇಲ್ಲವಾಗಿದ್ದು ಮುಂದಿನ ದಿನದಲ್ಲಿ ಈ ಕುರಿತು ಆದೇಶ ಬಂದಲ್ಲಿ ಸಮಿತಿ ಅವರಿಗೆ ತಿಳಿಸಲಾಗುವುದು ಎಂದರು.

ಇದೇ ವೇಳೆ ಧ್ವನಿವರ್ಧಕದ(ಮೈಕ್) ಅಳವಡಿಕೆಗೆ ಸಭೆಯ ಬಳಿಕ ಅರ್ಜಿ ಪಡೆದು ಚಲನ ತುಂಬುದರ ಮೂಲಕ ಪರವಾನಗಿ ಪಡೆಯಬಹುದು ಎಂದು ಸಿಪಿಐ ದಿವಾಕರ ಅವರು ತಿಳಿಸಿದರು.

ಇನ್ನು ಸಮಿತಿಯ ಪ್ರಮುಖರಾದ ಶಂಕರ ಶೆಟ್ಟಿ, ಶ್ರೀಧರ ನಾಯ್ಕ ಆಸರಕೇರಿ ಹಾಗೂ ಕ್ರಷ್ಣ ನಾಯ್ಕ ಆಸರಕೇರಿ ಅವರು ಕೆಲ ಸಲಹೆಗಳನ್ನು ತಾಲೂಕಾಢಳಿತಕ್ಕೆ ನೀಡಿದ್ದು, ಹಬ್ಬದ ದಿನ ಹಾಗೂ ವಿಸರ್ಜನೆಯ ವೇಳೆ ಟ್ರಾಫಿಕ್ ನಿಯಂತ್ರಣ ಮತ್ತು ಕಸ ವಿಲೇವಾರಿಯನ್ನು ಪುರಸಭೆಯು ಮುತುವರ್ಜಿಯಿಂದ ಮಾಡುವಂತೆ ತಿಳಿಸಿದರು.

ಈ ವರ್ಷ ವಿಶೇಷವಾಗಿ ಗಣೇಶೋತ್ಸವ ಸಮಿತಿಯವರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಮೂರು ವಿಭಾಗವಾದ ಸುಂದರ ಪರಿಸರ ಸ್ನೇಹಿ ಗಣಪ, ಸುಂದರ ಅಲಂಕ್ರತಗೊAಡ ಗಣೇಶ ಹಾಗೂ ಸಮಿತಿಯಿಂದ ಭಕ್ತರಿಗೆ ದರ್ಶನಕ್ಕೆ ಮಾಡಲಾದ ವ್ಯವಸ್ಥೆಯನ್ನು ಗಮನಿಸಿ ತಾಲೂಕಾಢಳಿತದಿಂದ ಬಹುಮಾನವನ್ನು ನೀಡುವುದಾಗಿ ಸಿಪಿಐ ದಿವಾಕರ ಘೋಷಣೆ ಮಾಡಿದರು.

ನಂತರ ಮಾತನಾಡಿದ ಡಿವೈಎಸ್ಪಿ ಕೆ.ಯು. ಬೆಳ್ಳಿಯಪ್ಪ ಅವರು ‘ಗಣಪತಿ ವಿಸರ್ಜನೆಯ ವೇಳೆ ನಿಗದಿ ಮಾಡಿದ ಸಮಯಕ್ಕೆ ಮೆರವಣಿಗೆ ಆರಂಭಿಸಿದ್ದಲ್ಲಿ ಪೋಲೀಸ್ ಇಲಾಖೆಗೆ ಬಂದೋಬಸ್ತಗೆ ಅನೂಕೂಲವಾಗಲಿದೆ. ಇನ್ನು ಮೆರವಣಿಗೆಯಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ಹೆಚ್ಚು ಒತ್ತು ನೀಡಿ ಅನಾವಶ್ಯಕ ಗದ್ದಲವಿಲದ್ದೇ ನಿಮ್ಮ ಸಮಿತಿಯಿಂದಲೇ ಸ್ವಯಂಸೇವಕರನ್ನು ನೇಮಿಸಿಕೊಂಡಲ್ಲಿ ಇಲಾಖೆಗೆ ಸಹಕಾರಿಯಾಗಲಿದೆ. ಇನ್ನು ಕೆಲ ಪ್ರದೇಶದಲ್ಲಿ ಸಮಿತಿ ಅವರು ಸಿಸಿ ಟಿವಿ ಅಳವಡಿಸಬೇಕಾಗಿದ್ದು ಈ ಕುರಿತು ಸಮಿತಿ ಅವರಿಗೆ ಸೂಚನೆ ನೀಡಲಿದ್ದೇವೆ ಎಂದರು.

ನAತರ ಅಧ್ಯಕ್ಷತೆ ವಹಿಸಿದ್ದ ಸಹಾಯಕ ಆಯುಕ್ತೆ ಮಮತಾ ದೇವಿ ಜಿ.ಎಸ್. ಅವರು ಮಾತನಾಡಿದ್ದು ‘ಎರಡು ವರ್ಷ ಕೋವಿಡ ಹಿನ್ನೆಲೆ ಸರಕಾರದ ಕಟ್ಟುನಿಟ್ಟಿನ ಮಾರ್ಗಸೂಚಿಯಂತೆ ಹಬ್ಬವನ್ನು ಸಮಿತಿ ಅವರು ಆಚರಿಸಿದ್ದರು. ಆದರೆ ಈ ಬಾರಿ ವಿಜ್ರಂಭಣೆಯ ಆಚರಣೆಗೆ ಸರಕಾರದಿಂದ ಅಡೆತಡೆಯಿಲ್ಲವಾಗಿದೆ. ಮುಖ್ಯವಾಗಿ ಶಾಂತಿಯುತ, ಸುವ್ಯವಸ್ಥಿತವಾಗಿ ಹಬ್ಬವನ್ನು ಸಮಿತಿ ಅವರು ಆಚರಿಸಿ ಸಹಕರಿಸಬೇಕು. ಬರುವಂತಹ ಭಕ್ತರಿಗೆ ಸೂಕ್ತ ದರ್ಶನಕ್ಕೆ ನೀಡುವಂತೆಯೂ ತಿಳಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ ಡಾ. ಸುಮಂತ ಬಿ.ಇ., ಗ್ರಾಮೀಣ ಠಾಣಾ ಸಿಪಿಐ ಮಹಾಬಲೇಶ್ವರ ನಾಯ್ಕ, ಭಟ್ಕಳ ಪುರಸಭೆ ಮುಖ್ಯಾಧಿಕಾರಿ ಸುರೇಶ, ಜಾಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ರಾಮಚಂದ್ರ ವರ್ಣೇಕರ್, ತಾಲೂಕಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಮನೆ ಸೇರಿದಂತೆ ತಾಲೂಕಿನ ನಾನಾ ಭಾಗದ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*