ಕೆಲೂರ:ಶ್ರೀ ಗುರು ಮಂಟೇಶ್ವರ ಅಮೃತ ಸರೋವರದಲ್ಲಿ ಧ್ವಜಾರೋಹನ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಗ್ರಾಮೀಣ ಭಾಗದಲ್ಲಿ ಅಭೂತಪೂರ್ವ ರೀತಿ ಆಚರಿಸಲು ಹಳ್ಳಿ-ಹಳ್ಳಿಗಳಲ್ಲೂ ಹರ್‌ ಘರ್‌ ತಿರಂಗಾ ಸಹಿತ ಹಲವು ಕಾರ್ಯಕ್ರಮಗಳನ್ನು ರೂಪಿಸಿರುವ ಗ್ರಾಮೀಣಾಭಿವೃದ್ಧಿ ಇಲಾಖೆಯು ಕೆರೆಗಳ ಬಳಿ ಧ್ವಜಾರೋಹಣ ನೆರವೇರಿಸುವ ವಿನೂತನ ಕಾರ್ಯಕ್ರಮ ಹಾಕಿಕೊಂಡಿದೆ.

ಬಾಗಲಕೋಟೆ:ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಇಲಕಲ್ಲ ತಾಲೂಕಿನ ಕೆಲೂರ ಗ್ರಾಮದ ಶ್ರೀ ಗುರು ಮಂಟೇಶ್ವರ ಕೆರೆಯಬಳಿ ಸ್ವಾತಂತ್ರ್ಯ ದಿನವಾದ ಇಂದು ನಿವೃತ್ತ ಶಿಕ್ಷಕರಾದ ಎಸ್.ಎಮ್.ಬೆಲ್ಲದರವರು ಧ್ವಜಾರೋಹಣ ನೆರವೇರಿಸದರು.

ಧ್ವಜಾರೋಹನ ನೆರವೇರಿಸಿ ಮಾತನಾಡಿದ ಅವರು ಇಂದು ನಾವು ಆಚರಿಸುತ್ತಿರುವ ಅಮೃತ ಮಹೋತ್ಸವ ಇಡಿ ದೇಶವೆ ಸಂಭ್ರಮಿಸುತ್ತಿದೆ.ಗ್ರಾಮ ಪಂಚಾಯತಿ ಆಡಳಿತವು ನಮ್ಮ ಗ್ರಾಮದ ಕೆರೆಯನ್ನು ಅಮೃತ ಸರೋವರ ಕೆರೆಯನ್ನಾಗಿ ನಿರ್ಮಾಣ ಮಾಡುತ್ತಿರುವುದು ನಮ್ಮೆಲ್ಲರಿಗೂ ಖುಷಿ ತಂದಿದೆ ಎಂದರು.

ಮಿಷನ್ ಅಮೃತ ಸರೋವರ ಯೋಜನೆಯು ಗ್ರಾಮೀಣ ಜನರಿಗೆ ಉದ್ಯೋಗ ಕಲ್ಪಿಸುವ ಹಾಗೂ ಆರ್ಥಿಕವಾಗಿ ಸ್ವಾವಲಂಬಿಯಾಗುವಂತೆ ಯೋಜನೆ ಸಿದ್ಧಪಡಿಸಿ, ಗ್ರಾಮೀಣ ಸಮುದಾಯದಲ್ಲಿ ಸಮರ್ಪಕವಾಗಿ ನೀರಿನ ಸಂರಕ್ಷಣೆ ಹಾಗೂ ಸದ್ಬಳಕೆ ಮಾಡಿಕೊಳ್ಳುವ ಕುರಿತು ಗ್ರಾಮೀಣ ಪ್ರದೇಶದ ಜನರಲ್ಲಿ ಅರಿವು ಹಾಗೂ ಜಾಗೃತಿ ಮೂಡಿಸುವುದಾಗಿದೆ.1ಕೋಟಿ ರೂಪಾಯಿ ವೆಚ್ಚದಲ್ಲಿ ನಮ್ಮೂರ ಅಮೃತ ಸರೋವರ ನಿರ್ಮಾಣ ಮಾಡಲಾಗುತ್ತಿದೆ ಈ ಯೋಜನೆಗೆ ಅಧ್ಯಕ್ಷರಾದಿಯಾಗಿ ಎಲ್ಲ ಸದಸ್ಯರು ಉತ್ಸಾಹದಿಂದ ಕೆಲಸಮಾಡುತ್ತಿದ್ದಾರೆ ಎಂದು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಪಿ.ಬಿ.ಮುಳ್ಳೂರ ಮಾಹಿತಿ ನಿಡಿದರು.

 

ಅಮೃತ ಗ್ರಾಮಪಂಚಾಯತ ಯೋಜನೆಗೆ ಕೆಲೂರ ಗ್ರಾಮ ಪಂಚಾಯತ ಆಯ್ಕೆ

ಗ್ರಾಮ ಪಂಚಾಯತಿಯ ಅಧ್ಯಕ್ಷರು ಹಾಗೂ ಎಲ್ಲ ಸದಸ್ಯರ ಸಹಕಾರ ಹಾಗೂ ಉತ್ಸಾಹ ಮತ್ತು ಪಿಡಿಓರವರ ಕಾರ್ಯದಕ್ಷತೆಯಿಂದ ಕೆಲೂರ ಗ್ರಾಮ ಪಂಚಾಯತಿಯು ಅಮೃತ ಯೋಜನೆಯಲ್ಲಿ ಆಯ್ಕೆಯಾಗಿದೆ. ಆಯ್ಕೆಯಾಗಿರುವ ಗ್ರಾಮ ಪಂಚಾಯಿತಿಗಳಲ್ಲಿ ಬೀದಿ ದೀಪಗಳು/ಸೋಲಾರ್‌ ಬೀದಿ ದೀಪಗಳು, ಪ್ರತಿ ಮನೆಗೆ ಕುಡಿಯುವ ನೀರಿನ ನಳ ಸಂಪರ್ಕ, ಶೇ. 100 ರಷ್ಟು ಘನತ್ಯಾಜ್ಯ ವಿಂಗಡಣೆ ಹಾಗೂ ವಿಲೇವಾರಿ, ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ವಿಸರ್ಜಿಸುವುದು, ಗ್ರಾ.ಪಂ. ಕಟ್ಟಡಗಳಲ್ಲಿ ಸೌರ ವಿದ್ಯುತ್‌ ಅಳವಡಿಕೆ, ಅಮೃತ ಉದ್ಯಾನವನ, ಗ್ರಾ.ಪಂ. ಗ್ರಂಥಾಲಯದ ಡಿಜಿಟಲೀಕರಣ, ಶಾಲೆ/ಅಂಗನವಾಡಿಗಳಿಗೆ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಶಾಲೆಗಳಲ್ಲಿ ಆಟದ ಮೈದಾನ ಮತ್ತು ಆವರಣ ಗೋಡೆಗಳನ್ನು ನಿರ್ಮಾಣ, ಕೆರೆಗಳು ಮತ್ತು ಕಲ್ಯಾಣಿಗಳ ಪುನಶ್ಚೇತನಗೊಳಿಸಲಾಗುವುದು, ಜತೆಗೆ ಗ್ರಾಮಗಳ ಇತರ ಮೂಲಭೂತ ಸೌಕರ್ಯ ಅಭಿವೃದ್ಧಿಗೊಳಿಸಲಾಗುವುದು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಹಾಲಿಂಗೇಶ ನಾಡಗೌಡರ, ಸದಸ್ಯರಾದ ರಮೇಶ ಕೊಪ್ಪದ,ಉಮೇಶ ಹೂಗಾರ, ಹನಮಂತ ವಡ್ಡರ,ಬಸವರಾಜ ಮಾದರ,ಶ್ರೀಮತಿ ರೇಣುಕಾ ಕುಂಚಗನೂರ,ಗಿರಿಜಾ ಅಧಿಕಾರಿ, ಭೀಮವ್ವ ತೋಟಗೇರ,ನೀಲವ್ವ ಕಬ್ಬರಗಿ, ಬಿಬಿಜಾನ ಸಿಮಿಕೇರಿ ರಾಜ್ಯೋತ್ಸವ ಪ್ರಶಸ್ತಿ ವಿಜೆತರಾದ ಸಂಗಪ್ಪ ಹೂಗಾರ,ಕಲ್ಲನಗೌಡ ನಾಡಗೌಡರ,ಹನಮಂತ ವಡ್ಡರ,ಬಸಪ್ಪ ಕೋಟಿ, ಕರಿಯಪ್ಪ ತೋಟಗೇರ,ಗೌಡಪ್ಪ ಕೊಪ್ಪದ, ಬಸಪ್ಪ ಕುಮಚಗನೂರ,ವಿರೇಶ ಕಮತರ,ಬಾಬು ಸಿಮಿಕೇರಿ,ಶ್ರೀ ಗುರು ಮಂಟೇಶ್ವರ ಪ್ರೌಢ ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು,ಗ್ರಾಮ ಪಂಚಾಯತ ಸಿಬ್ಬಂದಿ ಹಾಗೂ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*