ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ಇಳಕಲ್ ತಾಲೂಕಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ,ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ,ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘ ಹಾಗೂ ತಾಲ್ಲೂಕಿನ ಸರ್ವ ನೌಕರ ವೃಂದ ಸಂಘಗಳ ಸಹಯೋಗದೊಂದಿಗೆ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ “ಸ್ವಾತಂತ್ರ್ಯ ನಡಿಗೆ” ಕಾರ್ಯಕ್ರಮ ಜರುಗಿತು.
ಸ್ವಾತಂತ್ರ್ಯ ನಡಿಗೆ ಜಾಥಾಕ್ಕೆ ಇಲಕಲ್ಲ ಶ್ರೀ ಮಠದ ಮ.ನಿ.ಪ್ರ ಗುರುಮಹಾಂತ ಶ್ರೀಗಳು ಚಾಲನೆ ನೀಡಿದರು.ಚಾಲನೆ ನೀಡಿ ಮಾತನಾಡಿದ ಗುರುಮಹಾಂತ ಶ್ರೀಗಳು ಇಳಕಲ್ ತಾಲ್ಲೂಕಿನ ನೌಕರರು, ಶಿಕ್ಷಕರು ಮಾದರಿಯಾದ ಕಾರ್ಯವನ್ನು ಮಾಡುತ್ತಿದ್ದು,ದೇಶದ ಗಡಿ ಕಾಯುವ ಹೆಮ್ಮೆಯ ಯೋಧರ ಹಾಗೆ ದೇಶದ ಒಳಗಿನ ಸಮಾಜದ ಸ್ವಾಸ್ಥ್ಯ ಕಾಪಾಡುವ ಇಂತಹ ಯೋಧರ ಕಾರ್ಯ ಮೆಚ್ಚುವಂತದ್ದು ಎಂದರು ಹಾಗೂ ಸ್ವಾತಂತ್ರ್ಯಕ್ಕಾಗಿ ದುಡಿದ ಮಹನೀಯರನ್ನು ಸ್ಮರಿಸಿ,ಶ್ರೀಗಳು ಸ್ವಾತಂತ್ರ್ಯ ನಡಿಗೆಯಲ್ಲಿ ಹೆಜ್ಜೆ ಹಾಕಿದರು.
ಇಲಕಲ್ಲದ ಕಂಠಿ ಸರ್ಕಲ್ ದಿಂದ ಆರಂಭವಾದ ಸ್ವಾತಂತ್ರ್ಯ ನಡಿಗೆ ಬಸ್ ನಿಲ್ದಾಣ, ಪ್ರವಾಸಿ ಮಂದಿರ,ಬಸವೇಶ್ವರ ಸರ್ಕಲ್ ಗೆ ಆಗಮಿಸಿ ಮರಳಿ ಅದೇ ಮಾರ್ಗವಾಗಿ ಕಂಠಿ ಸರ್ಕಲ್ ಗೆ ಆಗಮಿಸಿತು.
ಸ್ವಾತಂತ್ರ್ಯ ನಡಿಗೆಯ ನೇತೃತ್ವವನ್ನು ಪಿ ಎಸ್ ಪಮ್ಮಾರ,ಎಸ್ ಕೆ ಬಂಡರಗಲ್,ಎಂ ಎಸ್ ಬೀಳಗಿ, ಜಿ ಎಸ್ ಅಡವಿ ವಹಿಸಿಕೊಂಡಿದ್ದರು.ಸ್ವಾತಂತ್ರ್ಯ ನಡಿಗೆಯಲ್ಲಿ ತಾಲ್ಲೂಕಿನ ಸರಕಾರಿ ನೌಕರರು, ಶಿಕ್ಷಕರು ಹಾಗೂ ವಿಶೇಷವಾಗಿ ಮಹಿಳಾ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
Be the first to comment