ಸಿರವಾರ : ರಾಯಚೂರು ಜಿಲ್ಲೆಯ ನೂತನ ತಾಲ್ಲೂಕ ಕೇಂದ್ರವಾದ ಸಿರವಾರ ಪಟ್ಟಣದ ಪಟ್ಟಣ ಪಂಚಾಯತ ಮುಖ್ಯ ಅಧಿಕಾರಿ ವರ್ಗವಾಗಿ ಬಂದಿರುವ ಶ್ರೀ ತಿಮ್ಮಪ್ಪ ಜಗಲಿ ಯವರಿಗೆ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವಿಣ ಶೆಟ್ಟಿ ಬಣ್ಣದ ತಾಲ್ಲೂಕ ಅಧ್ಯಕ್ಷರಾದ ರಾಘವೇಂದ್ರ ಖಾಜಿಗೌಡರ ಮತ್ತು ಪದಾಧಿಕಾರಿಗಳು ಸನ್ಮಾನಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಕ ರ ವೇ ತಾಲ್ಲೂಕ ಅಧ್ಯಕ್ಷ ರಾಘವೇಂದ್ರ ಖಾಜಿಗೌಡರರು ರಾಯಚೂರು ಜಿಲ್ಲೆಯ ಪುರಾತನ ಊರುಗಳಲ್ಲಿ ಒಂದಾದ ಸಿರವಾರ ಪಟ್ಟಣವು ಹಲವು ವೈವಿಧ್ಯತೆಯನ್ನು ಹೊಂದಿದೆ ಅದರ ಜೊತೆಗೆ ಆಧುನಿಕತೆ ಬೇಳದಂತೆ ಸಮಸ್ಯೆಗಳ ದೊಡ್ಡ ಸವಾಲುಗಳು ಬೆಳದು ನಿಂತಿವೆ ಎಲ್ಲ ಸಮಸ್ಯಗಳಿಗೂ ಪರಿಹಾರವೇ ದಕ್ಷತೆಯ ಆಡಳಿತ ನಮ್ಮ ಪಟ್ಟಣವನ್ನು ಸಮಸ್ಯೆ ರಹಿತ ಮತ್ತು ಪಟ್ಟಣದ ಜನ ಸ್ನೇಹಿ ಆಡಳಿತ ನೀಡುವ ಹಾಗೂ ಜಿಲ್ಲೆಯಲ್ಲೆ ಮಾದರಿ ಪಟ್ಟಣ ಮಾಡುವ ಜವಾಬ್ದಾರಿ ಮುಖ್ಯ ಅಧಿಕಾರಗಳದ್ದು ಮತ್ತು ಸಿಬ್ಬಂದಿ ವರ್ಗದಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಿರವಾರ ಪಟ್ಟಣದ ಮುಖಂಡರು ಹಾಗೂ ಕ ರ ವೇ ಪದಾಧಿಕಾರಿಗಳು ಹಾಜರಿದ್ದರು.
Be the first to comment