ಕೆಲೂರ:ಮಕ್ಕಳ ಸಮಸ್ಯೆ ಆಲಿಸಲು ವಿಶೇಷ ಗ್ರಾಮ ಸಭೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:ಕೆಲೂರ ಗ್ರಾಮದ ಶ್ರೀ ಗುರು ಮಂಟೇಶ್ವರ ಪ್ತೌಢ ಶಾಲೆಯ ಸಭಾಂಗಣದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತಾದ ವಿಶೇಷ ಗ್ರಾಮ ಸಭೆ ಹಮ್ಮಿಕೊಳ್ಳಲಾಯಿತು.

CHETAN KENDULI

ಕೆಲೂರ ಗ್ರಾಮ ಪಂಚಾಯಿತಿ ಹಮ್ಮಿಕೊಂಡಿದ್ದ ಈ ಸಭೆಗೆ ಅಧ್ಯಕ್ಷರಾದ ಮಹಾಲಿಂಗೇಶ ನಾಡಗೌಡರ ಚಾಲನೆ ನೀಡಿದರು.ನಂತರ ಮಾತನಾಡಿದ ಪಂಚಾಯತ ಅಭಿವೃದ್ಧಿ ಅದಿಕಾರಿ ಪಿ.ಬಿ.ಮುಳ್ಳೂರ ಬಾಲ್ಯದಲ್ಲಿ ಮಕ್ಕಳು ತಮ್ಮ ಹಕ್ಕುಗಳ ಕುರಿತಾದ ಜ್ಞಾನದಿಂದ ವಂಚಿತರಾದರೆ, ಭವಿಷ್ಯದಲ್ಲಿ ಅವರಿಗೆ ಲಭಿಸಬಹುದಾದ ಪ್ರಯೋಜನಗಳಿಂದ ವಂಚಿತರಾಗಬೇಕಾಗುತ್ತದೆ. ಹಾಗಾಗಿ, ಮನೆಯಲ್ಲಿರುವ ಹಿರಿಯರು ಮತ್ತು ಸಮಾಜದ ಪ್ರತಿಯೊಬ್ಬರೂ ಈ ನಿಟ್ಟಿನಲ್ಲಿ ತಮ್ಮ ಪಾಲಿನ ಹೊಣೆಗಾರಿಕೆ ಅರಿತು ಕಾರ್ಯನಿರ್ವಹಿಸಬೇಕಿದೆ. ಆ ಮೂಲಕ ಮಕ್ಕಳ ವರ್ತಮಾನ ಮತ್ತು ಭವಿಷ್ಯ ರಕ್ಷಿಸುವ ಕೆಲಸ ಮಾಡಬೇಕಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ಉಮೇಶ ಹೂಗಾರ,ಹನಮಂತ ವಡ್ಡರ,ಮಾಸಪ್ಪ ಕಬ್ಬರಗಿ,ವಿರೇಶ ಕಮತರ,ಬಾಬು ಸಿಮಿಕೇರಿ, ಬಸವರಾಜ ಮಾದರ,ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಎಸ್.ಬಿ.ದಾಸರ, ಅಂಗನವಾಡಿ ಮೇಲ್ವಿಚಾರಕಿ ಟಿ.ಎಸ್.ಕೊಡತಿ ಹಾಗೂ ಕಾರ್ಯಕರ್ತರು,ಆಶಾ ಕಾರ್ಯಕರ್ತರು, ಗ್ರಾಮ ಪಂಚಾಯತ ಸಿಬ್ಬಂದಿ, ಪ್ರಾಥಮಿಕ ಶಾಲಾ ಶಿಕ್ಷಕರಾದ ಸಣಕಲ್ಲ, ಮುಖ್ಯಗುರುಗಳಾದ ದಾಸರ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಶಿಕ್ಷಕರಾದ ಎಸ್.ಬಿ. ಯಾವಗಲ್ಲಮಠ ನಿರೂಪಿಸಿದರು, ಬಿ.ಹೆಚ್.ನಾಲತವಾಡ ಸ್ವಾಗತಿಸಿದರು, ಎಸ್.ಬಿ.ಹೆಳವರ ವಂದಿಸಿದರು.

Be the first to comment

Leave a Reply

Your email address will not be published.


*