ಬಾಲ್ಯ ವಿವಾಹ ನಿಷೇಧ ಕಾಯ್ದೆ:ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:ತಾಲೂಕು ಕಾನೂನು ಸೇವಾ ಸಮಿತಿ ಹುನಗುಂದ,ವಕೀಲರ ಸಂಘ ಹುನಗುಂದ,ತಾಲೂಕ ಆಡಳಿತ ಇಲಕಲ್ಲ ಮತ್ತು ಶ್ರೀ ಗುರು ಮಂಟೇಶ್ವರ ಪ್ರೌಢ ಶಾಲೆ, ಕೆಲೂರ ಇವರುಗಳ ಸಂಯುಕ್ತ ಆಶ್ರಯದಲ್ಲಿ ” ಮಕ್ಕಳ ಸ್ನೇಹಿ ಗ್ರಾಮ ಪಂಚಾಯತಿ ಅಭಿಯಾನ ” ಅಂಗವಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಶ್ರೀ ಗುರು ಮಂಟೇಶ್ವರ ಪ್ರೌಢ ಶಾಲಾ ಸಭಾಂಗನದಲ್ಲಿ ನಡೆಯಿತು.

CHETAN KENDULI

‘ಬಡನತ, ಸಿರಿನತ ಏನೇ ಇರಲಿ ಬಾಲ್ಯ ವಿವಾಹ ಎಂಬ ಅನಿಷ್ಠಪದ್ಧತಿ ಆಚರಣೆ ನಿಲ್ಲಬೇಕು. ಕಾನೂನು ಪ್ರಕಾರ ಹೆಣ್ಣಿಗೆ 18 ವರ್ಷ, ಗಂಡಿಗೆ 21 ವರ್ಷ ವಯಸ್ಸು ಪೂರ್ಣಗೊಂಡ ಬಳಿಕವೇ ಕಾನೂನು ಪ್ರಕಾರ ಮದುವೆ ಮಾಡಬೇಕು. ಬಾಲ್ಯ ವಿವಾಹ ನಿಷೇಧ ಕಾಯಿದೆಯಡಿ ಶಿಕ್ಷೆಯಿದೆ. ಶಿಕ್ಷೆ ಅನುಭವಿಸುವುದು ಬೇಡ. ಕಾನೂನು ಪಾಲನೆಯನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ನೆಮ್ಮದಿಯಿಂದ ಜೀವಿಸಬೇಕು,’ಎಂದು ಕಾರ್ಯಕ್ರಮದ ಉಪನ್ಯಾಸಕರಾಗಿ ಆಗಮಿಸಿದ ವಕೀಲರಾದ ಬಿ.ಎ.ಶಿವಣಗಿ ನುಡಿದರು.

ಕಾನೂನಿನ ಬಗ್ಗೆ ಸ್ವಲ್ಪ ಅರಿವಿದ್ದರೂ ಸಹ ಅಪರಾಧ ಪ್ರಕರಣಗಳು ಕಡಿಮೆಯಾಗಿಲ್ಲ. ಮಹಿಳೆ ಯರ ಆತ್ಮಹತ್ಯೆಗಳು ಎಗ್ಗಿಲ್ಲದೆ ನಡೆ ಯುತ್ತಿವೆ. ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ಹಾಗೂ ಸಾರ್ವಜನಿಕರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದರು.

ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ ಎಸ್.ಬಿ.ದಾಸರ ಇವರು ಮಾತನಾಡಿ ಬಾಲ್ಯವಿವಾಹ ಗ್ರಾಮೀಣ ಪ್ರದೇಶದಲ್ಲಿ ಕಾಡುತ್ತಿರುವ ಜಲ್ವಂತ ಸಮಸ್ಯೆಯಾಗಿದ್ದು ಇದರಿಂದ ಮಹಿಳೆಯರು ಬಹುಬೇಗ ಮುಪ್ಪಾವಸ್ಥೆ ಅನುಭವಿಸುತ್ತಾರೆ ಎಂದರು ಈ ಕುರಿತು ಜಾಗೃತಿ ಅತ್ಯವಶ್ಯಕ ಎಂದರು.

ಗ್ರಾಮ ಪಂಚಾಯತ್ ಅಧ್ಯಕ್ಷ ಮಹಾಲಿಂಗೇಶ ನಾಡಗೌಡರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತಾ ನಮ್ಮ ಗ್ರಾಮದಲ್ಲಿ ಬಾಲ್ಯವಿವಾಹ ನಡೆಯಬಾರದು, ಈ ನಿಟ್ಟಿನಲ್ಲಿ ಅರಿವು ಕಾರ್ಯಕ್ರಮ ಹಮ್ಮಿಕೊಂಡಿರುವುದು ಒಂದು ಉತ್ತಮ ಬೆಳವಣಿಗೆ ಎಂದರು. ನಾವು ನೀವೆಲ್ಲರೂ ಸಮಾಜಮುಖಿಯಾಗಿ ಕೆಲಸಮಾಡಿ ಬಾಲ್ಯವಿವಾಹ ತಡೆಗಟ್ಟುವಲ್ಲಿ ಇಲಾಖೆಯೊಂದಿಗೆ ಕೈಜೋಡಿಸೋಣ ಎಂದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ವಕೀಲರಾದ ಶ್ರೀ ಎಸ್.ಕೆ ಸಾರಂಗಮಠ, ಎಸ್.ಪಿ.ಹೂಲಗೇರಿ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಿ.ಬಿ.ಮುಳ್ಳೂರ ಗ್ರಾಮ ಪಂಚಾಯತ ಸದಸ್ಯರಾದ ಉಮೇಶ ಹೂಗಾರ,ಹನಮಂತ ವಡ್ಡರ,ಮಾಸಪ್ಪ ಕಬ್ಬರಗಿ,ವಿರೇಶ ಕಮತರ,ಬಾಬು ಸಿಮಿಕೇರಿ,ಬಸವರಾಜ ಮಾದರ,ಅಂಗನವಾಡಿ ಮೇಲ್ವಿಚಾರಕರು,ಕಾರ್ಯಕರ್ತರು,ಆಶಾ ಕಾರ್ಯಕರ್ತರು,ಗ್ರಾಮ ಪಂಚಾಯತ ಸಿಬ್ಬಂದಿ, ಪ್ರಾಥಮಿಕ ಶಾಲಾ ಶಿಕ್ಷಕರಾದ ಸಣಕಲ್ಲ, ಮುಖ್ಯಗುರುಗಳಾದ ದಾಸರ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಶಿಕ್ಷಕರಾದ ಎಸ್.ಬಿ. ಯಾವಗಲ್ಲಮಠ ನಿರೂಪಿಸಿದರು, ಬಿ.ಹೆಚ್.ನಾಲತವಾಡ ಸ್ವಾಗತಿಸಿದರು, ಎಸ್.ಬಿ.ಹೆಳವರ ವಂದಿಸಿದರು.

Be the first to comment

Leave a Reply

Your email address will not be published.


*