ದೇವದುರ್ಗ:- ತಾಲೂಕಿನ ಗಬ್ಬೂರು ಗ್ರಾಮ ಪಂಚಾಯಿತಿಯಲ್ಲಿ ರಾಜಾರೋಷವಾಗಿ ಸಾರ್ವಜನಿಕ ಸ್ಥಳವಾದ ಗ್ರಾಮ ಪಂಚಾಯಿತಿಯಲ್ಲಿ ಪಂಚಾಯತಿಯ ಅಧ್ಯಕ್ಷೀಯ ಮಗನ ಹುಟ್ಟುಹಬ್ಬವನ್ನು ಆಚರಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಸರ್ವ ಸದಸ್ಯರುಗಳು ಹಾಗೂ ಪಂಚಾಯಿತಿ ಸಿಬ್ಬಂದಿಗಳು. ಸಾರ್ವಜನಿಕ ಸ್ಥಳವಾದ ಪಂಚಾಯಿತಿಯಲ್ಲಿ ಸಾರ್ವಜನಿಕರ ಆಸ್ತಿಯಾಗಿದ್ದು ಅದನ್ನು ಸ್ವತಹ ಅಧಿಕಾರಿಗಳೇ ದುರುಪಯೋಗ ಪಡಿಸಿಕೊಳ್ಳುವುದು ಎಷ್ಟರಮಟ್ಟಿಗೆ ಸರಿ. ಎಂಬುದು ಸಾರ್ವಜನಿಕರಿಗೆ ಅನುಮಾನಾಸ್ಪದವಾಗಿದೆ. ಅವರಿಂದು ಗಬ್ಬೂರಿನ ಗ್ರಾಮ ಪಂಚಾಯತ್ ಗ್ರಾಮ ಪಂಚಾಯತ್ ಅಧ್ಯಕ್ಷರ ಮಗನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಎಂದು ಸಾರ್ವಜನಿಕರು ಮತ್ತು ಸದಸ್ಯರು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗಿದ್ದು ಅಧ್ಯಕ್ಷರ ಮಗನ ಹುಟ್ಟುಹಬ್ಬವನ್ನು ಆಚರಿಸಿದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಶಿವಕುಮಾರ್ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ .
ಗ್ರಾಮ ಪಂಚಾಯತಸದಸ್ಯನ ಹುಟ್ಟುಹಬ್ಬ ಇತ್ತು. ಅದೇ ರೀತಿ ಅಧ್ಯಕ್ಷರ ಮಗನ ಹುಟ್ಟುಹಬ್ಬ ಇದೆ ಹಾಗಾಗಿ ಹುಟ್ಟುಹಬ್ಬ ಮಾಡಿದ್ದೇವೆ ಎಂದು ಉಡಾಫೆ ಮಾತನಾಡಿತ್ತಾರೆ.
ಗಂಗಪ್ಪ ಸಿಂಗ್ರಿ ವಕೀಲರು ದೇವದುರ್ಗ
ಸ್ಪಷ್ಟವಾಗಿ ಕಾನೂನು ಉಲ್ಲಂಘಸಿ, ಸರಕಾರದ ಆದೇಶದಂತೆ ಚುನಾಯಿತ ಸದಸ್ಯರ ಪರವಾಗಿ ಕುಟುಂಬದ ಸದಸ್ಯರು ಪ್ರಭಾವ ಬೀರಿ ಪಂಚಾಯತ ಸಭಾಂಗಣವನ್ನು ದುರುಪಯೋಗಪಡಿಸಿಕೊಂಡಿದ್ದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ ಇದನ್ನು ನಾನು ಖಂಡಿಸಿ PDO ರ ಅಮಾನತ್ತಿಗೆ ಹಾಗೂ ಅಧಿಕಾರ ದುರುಪಯೋಗಪಡಿಸಿಕೊಂಡ ಅಧ್ಯಕ್ಷರ ಸದಸ್ಯತ್ವವನ್ನು ರದ್ದುಪಡಿಸಿ ವಜಾಮಾಡಲು ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಮನವಿ ಪತ್ರವನ್ನು ಸಲ್ಲಿಸಿದ್ದೇನೆ. ಎಂದು
ಗಂಗಪ್ಪ ಸಿಂಗ್ರಿ ವಕೀಲರು ತಿಳಿಸಿದ್ದಾರೆ.
ಆಲಂ ಗಬ್ಬೂರು
ಸರ್ಕಾರದ ಕಛೇರಿಯಲ್ಲಿ ಅಧ್ಯಕ್ಷರ ಪುತ್ರನ ದರ್ಬಾರು ಎನ್ನುವುದಕ್ಕೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಫೋಟೋ ಗಳು ಸಾಕ್ಷಿ. ಪಿಡಿಓ ರವರ ಅಮಾನತು ಮತ್ತು ಗ್ರಾಮ ಪಂಚಾಯತ ಸದಸ್ಯರ ಸದಸ್ಯತ್ವ ರದ್ದು ಮಾಡಬೇಕು ಜಿಲ್ಲಾಧಿಕಾರಿಗಳು
ಆಲಂ ಗಬ್ಬೂರು, ಜಿಲ್ಲಾಧ್ಯಕ್ಷರು ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸೇವಾ ಸಮಿತಿ ರಾಯಚೂರು
Be the first to comment