ಟಾಟಾ ಕಂಪನಿಯಿಂದ ನೂತನ BSVI ಇಂಜನ್ ಆಲ್ಟ್ರೋಜ್ ಕಾರು ಬಿಡುಗಡೆ

ವರದಿ: ಮಂಜುಳಾ ರೆಡ್ಡಿ ಬೆಂಗಳೂರು ನಗರ


ಉದ್ಯೋಗ- ಉದ್ಯಮ


 

ಸುರಕ್ಷತೆ, ವಿನ್ಯಾಸ, ತಂತ್ರಜ್ಞಾನ ಹಾಗು ಚಾಲನಾ ಅನುಭವದಲ್ಲಿ ತನ್ನ ಸ್ವರ್ಣಮಾನದಂಡದೊಂದಿಗೆ ವರ್ಗವನ್ನು ಮರುವಿವರಿಸುವುದಕ್ಕಾಗಿ ಪರಿಚಯಿಸಲ್ಪಟ್ಟ ಹೊಸ ಪ್ರೀಮಿಯಮ್ ಹ್ಯಾಚ್-ಆಲ್ಟ್ರೋಜ್

ಪ್ರಮುಖಾಂಶಗಳು:
• GNCAP 5 -ನಕ್ಷತ್ರ ಶ್ರೇಯಾಂಕದ ಆಲ್ಟ್ರೋಜ್(ತನ್ನ ವರ್ಗದಲ್ಲಿ ಭಾರತದ ಅತ್ಯಂತ ಸುರಕ್ಷಿತ ಕಾರು) ಪ್ರೀಮಿಯಮ್ ಹ್ಯಾಚ್ ವರ್ಗವನ್ನು ಪ್ರವೇಶಿಸಿದೆ.
• ಆಲ್ಟ್ರೋಜ್, ಉದ್ಯಮದ 1ನೆ ಸಂಪೂರ್ಣ BSVI ಸಿದ್ಧವಾದ ಡೀಸಲ್ ಹ್ಯಾಚ್‍ಬ್ಯಾಕ್ ಆಗಿದೆ.

ಬೆಂಗಳೂರು, ಜನವರಿ 25, 2020: ಪ್ರೀಮಿಯಮ್ ಹ್ಯಾಚ್‍ಬ್ಯಾಕ್‍ನಲ್ಲಿ ತನ್ನ ಪ್ರವೇಶದ ಗುರುತಿಗಾಗಿ ಟಾಟಾ ಮೋಟರ್ಸ್ ಇಂದು ಆಲ್ಟ್ರೋಜ್‍ಅನ್ನು ಬಿಡುಗಡೆ ಮಾಡಿತು. ಟಾಟಾ ಮೋಟರ್ಸ್‍ನ ಎಲ್ಲಾ ಅಧಿಕೃತ ಡೀಲರ್‍ಶಿಪ್‍ಗಳಲ್ಲೂ ಐದು ಟ್ರಿಮ್ ಮಟ್ಟಗಳಲ್ಲಿ ಆಲ್ಟ್ರೋಜ್ ಲಭ್ಯವಾಗಲಿದ್ದು ಪರಿಚಯ ದರವಾಗಿ ಪೆಟ್ರೋಲ್ ಆವೃತ್ತಿಯ ಬೆಲೆ ರೂ. 5.29 ಲಕ್ಷಗಳು ಹಾಗು ಡೀಸಲ್ ಆವೃತ್ತಿಯ ಬೆಲೆ ರೂ. 6.99 ಲಕ್ಷ ರೂಪಾಯಿ ಆಗಿರುತ್ತದೆ.

ಆಲ್ಟ್ರೋಜ್, ಹೊಸ ಆಲ್ಫಾ ರಚನೆಯ ಮೇಲೆ ಅಭಿವೃದ್ಧಿಪಡಿಸಲಾಗಿರುವ ಮೊದಲನೆಯ ಹಾಗು ಇಂಪ್ಯಾಕ್ಟ್ 2.0 ವಿನ್ಯಾಸ ಭಾಷೆ ತೋರಿಸುವ ಎರಡನೇ ವಾಹನವಾಗಿದೆ. ತನ್ನ ವಿಶಿಷ್ಟ ವಿನ್ಯಾಸ, ಉದ್ಯಮ-ಮೊದಲನೆಯದಾದ ಅಂಶಗಳು ಮತ್ತು ಅತ್ಯಂತ ಇತ್ತೀಚಿನ ಜಾಗತಿಕ GNCAP 5 -ನಕ್ಷತ್ರ ಶ್ರೇಯಾಂಕದ ಸಾಧನೆಯೊಂದಿಗೆ ಅದು ಸುರಕ್ಷತೆ, ವಿನ್ಯಾಸ, ಚಾಲನಾ ಕ್ರಿಯೆಗಳು, ತಂತ್ರಜ್ಞಾನ ಹಾಗು ಗ್ರಾಹಕ ಸಂತುಷ್ಟತೆಯಲ್ಲಿ ಸ್ವರ್ಣ ಮಾನದಂಡವನ್ನು ಸ್ಥಾಪಿಸಿದೆ. ಗ್ರಾಹಕರನ್ನು ಸಂತೋಷಗೊಳಿಸಲು ಸಜ್ಜಾಗಿರುವ ಆಲ್ಟ್ರೋಜ್ 6 ವಿವಿಧ ಕಾರ್ಖಾನೆ ಸಜ್ಜುಗೊಂಡ ವೈಯಕ್ತೀಕೃತ ಆಯ್ಕೆಗಳಲ್ಲಿ ಬರುತ್ತದೆ.

ಟಾಟಾ ಮೋಟರ್ಸ್‍ನ ಪ್ಯಾಸೆಂಜರ್ ವಾಹನ ವ್ಯಾಪಾರ ಘಟಕದ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಶ್ರೀ ವಿವೇಕ್ ಶ್ರೀವಾತ್ಸ ಅವರ ಪ್ರಕಾರ “ನಮ್ಮ ಪ್ರೀಮಿಯಮ್ ಹ್ಯಾಚ್‍ಬ್ಯಾಕ್ ಆಲ್ಟ್ರೋಜ್‍ನ ಬಿಡುಗಡೆಯನ್ನು ಘೋಷಿಸುತ್ತಿರುವುದಕ್ಕೆ ನಮಗೆ ಬಹಳ ಆನಂದವಾಗುತ್ತಿದೆ. ಆಲ್ಟ್ರೋಜ್, 5-ನಕ್ಷತ್ರಗಳ GNCAP 5 ಶ್ರೇಯಾಂಕವನ್ನು ಪಡೆದ ಟಾಟಾ ಮೋಟರ್ಸ್‍ನ ಹಾಗು ಭಾರತದ ಎರಡನೇ ಕಾರ್ ಆಗಿರುವುದು ನಮಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಇದೊಂದು ಮೈಲಿಗಲ್ಲಿನ ಉತ್ಪನ್ನವಾಗಿದ್ದು, ಸುರಕ್ಷತೆ, ವಿನ್ಯಾಸ, ಚಾಲನಾ ಕ್ರಿಯೆಗಳು, ತಂತ್ರಜ್ಞಾನ ಹಾಗು ಗ್ರಾಹಕ ಸಂತುಷ್ಟತೆಯಲ್ಲಿ ಸ್ವರ್ಣ ಮಾನದಂಡದ ನಿಜವಾದ ಪ್ರತಿನಿಧಿಯಾಗಿದೆ. ಈ ಉತ್ಪನ್ನವು ನಮ್ಮ ಗ್ರಾಹಕರಿಗೆ ಅತ್ಯುತ್ತಮ ಚಾಲನಾ ಅನುಭವವನ್ನು ಮಾತ್ರ ನೀಡುವುದಲ್ಲದೆ, ನಾವು ಪ್ರೀಮಿಯಮ್ ಹ್ಯಾಚ್‍ಬ್ಯಾಕ್ ವರ್ಗಕ್ಕೆ ಕಾಲಿರಿಸುತ್ತಿದ್ದಂತೆ ಅದಕ್ಕೆ ಹೊಸ ಮಾನದಂಡಗಳನ್ನೂ ಸ್ಥಾಪಿಸಲಿದೆ ಎಂಬ ವಿಶ್ವಾಸ ನಮಗಿದೆ.” ಎಂದರು.

ಸುರಕ್ಷತೆಯ ಸ್ವರ್ಣ ಮಾನದಂಡ
ತನ್ನ 5-ನಕ್ಷತ್ರಗಳ ಉಓಅಂP ಶ್ರೇಯಾಂಕದೊಂದಿಗೆ ಆಲ್ಟ್ರೋಜ್ ಸುರಕ್ಷತೆಯಲ್ಲಿ ಸ್ವರ್ಣ ಮಾನದಂಡವನ್ನು ಸ್ಥಾಪಿಸಿದೆ. ಈ ಕಾರು, ಅಡ್ವಾನ್ಸ್ಡ್ ಆಲ್ಫಾ ಆರ್ಕಿಟೆಕ್ಚರ್, ಎಬಿಎಸ್, ಇಬಿಡಿ, ಹಾಗು ಸಿಎಸ್‍ಸಿಗಳನ್ನು ಸಾಮಾನ್ಯ ಮತ್ತು ಡ್ಯುಯಲ್ ಏರ್‍ಬ್ಯಾಗ್‍ಗಳಂತಹ ತನ್ನ ವರ್ಗದಲ್ಲೇ ಅತ್ಯುತ್ತಮವಾದ ಸುರಕ್ಷತಾ ಅಂಶಗಳೊಡನೆ ಬರುತ್ತದೆ. ಈ ಶಕ್ತಿ ಹೀರಿಕೊಳ್ಳುವ ಆಲ್ಫಾ ಆರ್ಕಿಟೆಕ್ಚರ್ ನ ಜೊತೆಗೆ ಸಮಗ್ರ ಸುರಕ್ಷತಾ ವ್ಯವಸ್ಥೆಯು ಟಾಟಾ ಆಲ್ಟ್ರೋಜ್‍ನ ಪ್ರಯಾಣಿಕರು ವಿಶ್ವದರ್ಜೆ ಸುರಕ್ಷತೆಯನ್ನು ಪಡೆದುಕೊಳ್ಳುವುದನ್ನು ಖಾತರಿಪಡಿಸುತ್ತದೆ.

ವಿನ್ಯಾಸದಲ್ಲಿ ಸ್ವರ್ಣ ಮಾನದಂಡ
ಇಂಪ್ಯಾಕ್ಟ್ 2.0 ವಿನ್ಯಾಸ ತತ್ವದ ಮೇಲೆ ಆಧಾರಿತವಾಗಿರುವ ಆಲ್ಟ್ರೋಜ್‍ನ ಭವಿಷ್ಯಮುಖಿ ವಿನ್ಯಾಸವು ಆಧುನಿಕ, ಚುರುಕಾದ ಮತ್ತು ಅಭಿರುಚಿ ಇರುವ ಒಳಾಂಗಣಗಳನ್ನು ಹೊಂದಿದೆ. 90 ಡಿಗ್ರಿಗಳ ಬಾಗಿಲು ಪ್ರಯಾಣಿಕರಿಗೆ ಒಳಗೆ ಬರಲು ಮತ್ತು ಹೊರಗೆ ಹೋಗಲು ಸಾಕಷ್ಟು ಸ್ಥಳಾವಕಾಶ ಇರುವುದನ್ನು ಖಾತರಿಪಡಿಸುತ್ತದೆ. ಲೇಸರ್ ಕಟ್ ಅಲಾಯ್ ವ್ಹೀಲ್‍ಗಳು ಮತ್ತು ಒಳಾಂಗಣದಲ್ಲಿರುವ ಪ್ರೀಮಿಯಮ್ ಬ್ಲ್ಯಾಕ್ ಪಿಯಾನೋ ಫಿನಿಶ್ ಸರಿಸಾಟಿಯಿಲ್ಲದ ರಸ್ತೆ ಅಸ್ತಿತ್ವ ಪ್ರದರ್ಶಿಸಿ ಗ್ರಾಹಕರು ಸ್ಟೈಲ್ ಆಗಿ ಪ್ರವೇಶಿಸುವುದಕ್ಕೆ ಅನುವು ಮಾಡಿಕೊಡುತ್ತದೆ.

ತಂತ್ರಜ್ಞಾನದ ಸ್ವರ್ಣ ಮಾನದಂಡ
17.78 ಸೆಂ.ಮೀ ಟಚ್‍ಸ್ಕ್ರೀನ್ ಹರ್ಮನ್ ಇನ್ಫೋಟೇನ್ಮೆಂಟ್ ಮತ್ತು ವರ್ಗಮುಂಚೂಣಿ ಧ್ವನಿಗ್ರಹಣದೊಂದಿಗೆ ಸಜ್ಜಾಗಿರುವ ಆಲ್ಟ್ರೋಜ್, ಧ್ವನಿ ಆದೇಶ ಗುರುತಿಸುವಿಕೆ(ವಾಯ್ಸ್ ಕಮಾಂಡ್ ರೆಕಗ್ನಿಶನ್) ಆ್ಯಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ಟರ್ನ್ ಬೈ ಟರ್ನ್ ಅಂಶಗಳನ್ನು ಹೊಂದಿ ತಡೆರಹಿತ ಅನುಭವ ಒದಗಿಸುತ್ತದೆ.

ಚಾಲನಾ ಕ್ರಿಯೆಗಳಲ್ಲಿ ಸ್ವರ್ಣ ಮಾನದಂಡ
ಫೈನ್ ಟ್ಯೂನ್ ಮಾಡಿದ ಸಸ್ಪೆನ್ಶನ್ ಜೊತೆಗೆ ಪೆಟ್ರೋಲ್ ಮತ್ತು ಡೀಸಲ್ ಇಂಜಿನ್‍ಗಳಿರುವ ಆಲ್ಟ್ರೋಜ್ ಗ್ರಾಹಕರಿಗೆ ನಿಜವಾಗಿಯೂ ಒಂದು ಚುರುಕಾದ ಚಾಲನಾ ಅನುಭವ ನೀಡುತ್ತದೆ. ಮಲ್ಟಿ ಡ್ರೈವ್ ಮೋಡ್ ಇರುವ ಕ್ರೂಸ್ ನಿಯಂತ್ರಣ ಅಂಶವು ನಗರದಲ್ಲೇ ಆಗಲಿ ಮತ್ತು ಹೆದ್ದಾರಿಗಳಲ್ಲೇ ಆಗಲಿ ಆರಾಮದಾಯಕವಾದ ಚಾಲನೆಯನ್ನು ಖಾತರಿಪಡಿಸುತ್ತದೆ.

ಗ್ರಾಹಕ ಸಂತುಷ್ಟತೆಯಲ್ಲಿ ಸ್ವರ್ಣ ಮಾನದಂಡ
ಮಟ್ಟಸವಾದ ಹಿಂಬದಿ ಫ್ಲೋರ್, ಹಿಂಬದಿಯ ಎಸಿ ವೆಂಟ್‍ಗಳು, ಕ್ಯಾಬಿನ್ ಸ್ಥಳ ಮತ್ತು 24 ಯುಟಿಲಿಟಿ ಸ್ಥಳಾವಕಾಶಗಳು ಚಾಲನಾ ಅನುಭವವು ಆರಾಮದಾಯಕವಾಗಿರುವುದನ್ನೂ ಸುಲಭವಾಗಿರುವುದನ್ನೂ ಖಾತರಿಪಡಿಸುತ್ತದೆ. ಧರಿಸಬಲ್ಲ ಕೀ ಫಾಬ್ ಇರುವ ವಿಶಾಲವಾದ ಒಳಾಂಗಣಗಳು ಗ್ರಾಹಕರಿಗೆ ತೊಂದರೆಯಿಲ್ಲದ ಅನುಭವ ನೀಡುತ್ತವೆ.

ಹೊಸ ಶ್ರೇಣಿಯ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಅಥವಾ ಟೆಸ್ಟ್ ಡ್ರೈವ್ ಬುಕ್ ಮಾಡಲು, ಗ್ರಾಹಕರು https://twitter.com/TataMotors_Cars ಗೆ ಭೇಟಿ ನೀಡಬಹುದು ಅಥವಾ ಸಮೂಹ ಮಾಧ್ಯಮಗಳಾದ and Facebook -https://www.facebook.com/officialtatamotorscars



ನಿಮ್ಮ ಆರ್ಥಿಕ ಸಹಾಯ ದಿಂದ ಮಾತ್ರ ಮಾಧ್ಯಮವನ್ನು ಪಾರದರ್ಶಕವಾಗಿ  ಮುನ್ನಡೆಸಲು ಸಾಧ್ಯ

ಮಾಧ್ಯಮ ಮುನ್ನೆಡೆಯಲ್ಲು ನಿವು 100,500,1000,2500,5000,10000,50000,1 ಲಕ್ಷ.  ದೇಣಿಗೆ ಸಹಾಯ ನೀಡಬಹುದು
ಗೂಗಲ್ ಪೇ ಪೋನ ಪೇ ಮೂಲಕ ಕೂಡ ನೀಡಬಹುದು 9008329745
ಅಂಬಿಗ ನ್ಯೂಸ್ ಟಿವಿ ಗೆ ಸಹಾಯ ನೀಡಲು ಈ ಕೇಳಗಿನ ಕೋಡ ಬಳಸಿ ಆನ್ ಲೈನ್ ದೇಣಿಗೆ ನೀಡಬಹುದು

Amaresh kamanakeri
A/c 62053220183 IFC-SBIN0020354 ಪೋನ ನಂ 9008329745

Be the first to comment

Leave a Reply

Your email address will not be published.


*