ಹೊನ್ನಾವರ:
ತಾಲೂಕಿನ ಕಡಗೇರಿಯ ಸಂಗೀತಾ ನಾಯ್ಕ ಧಾರವಾಡ ವಿಶ್ವವಿದ್ಯಾಲಯದ ಎಂ.ಎ. ಸಂಗೀತ ವಿಷಯದಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಸಾಧನೆಗೆ ಅಸಾಧ್ಯವಾದದು ಯಾವುದು ಇಲ್ಲ. ಆದರೆ ಸಾಧಿಸುವ ಛಲಬೇಕು ಎನ್ನುವುದಕ್ಕೆ ನೈಜ ಉದಾಹರಣೆಯಾಗಿ ಸಂಗೀತಾ ಹೊರಹೊಮ್ಮಿದ್ದಾಳೆ.
ತಾಲೂಕಿನ ಹಡಿನಬಾಳ ಗ್ರಾ.ಪಂ. ವ್ಯಾಪ್ತಿಯ ಕಡಗೇರಿ ಲಕ್ಷಣ ನಾಯ್ಕ ಹಾಗೂ ಜಯಾ ನಾಯ್ಕರವರ 3ನೇ ಪುತ್ರಿಯಾದ ಸಂಗೀತಾ, ಚಿನ್ನದ ಪದಕ ಪಡೆಯುವ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದಾಳೆ. ಚಿಕ್ಕಂದಿನಿಂದಲೂ ತಂದೆ ಮತ್ತು ಅಜ್ಜನೊಂದಿಗೆ ಭಜನೆ ಹಾಗೂ ಜನಪದ ಗೀತೆಯನ್ನು ಹಾಡುತ್ತಾ ಶಾಲೆಯ ಮೆಟ್ಟಿಲನ್ನು ಏರಿದವಳು. ತನ್ನ ಪ್ರಾಥಮಿಕ ವಿದ್ಯಾಭ್ಯಾಸ ನಡೆಸುತ್ತಿದ್ದಾಗ ಶಾಲಾ ಮುಖ್ಯೋಪಾಧ್ಯಾಯರು ಇವಳ ಸಂಗೀತದ ಆಸಕ್ತಿ ಹಾಗೂ ಅಡಗಿರುವ ಪ್ರತಿಭೆಯನ್ನು ಗುರುತಿಸಿ ತಂದೆಯ ಬಳಿ ಸಂಗೀತವನ್ನು ಕಲಿಸುವಂತೆ ಸಲಹೆ ನೀಡಿದರು. ಆಗ ಎಸ್‌ಡಿಎಂಸಿ ಅಧ್ಯಕ್ಷರಾಗಿದ್ದ ಲಕ್ಷಣ ನಾಯ್ಕ ತನ್ನ ಮಗಳ ಆಸಕ್ತಿ ಗಮನಿಸಿ ಗುರುಗಳ ಸಲಹೆಗೆ ಒಪ್ಪಿ ಹಡಿನಬಾಳ ಶಿವಾನಂದ ಭಟ್ ಇವರ ರಾಗಶ್ರೀ ಸಂಗೀತ ಶಾಲೆಗೆ ಶಿಕ್ಷಣ ಪಡೆಯಲು ಕಲಿಸಿದರು.
ಗುರುವಿನಿಂದ ಕಲಿತ ಸಂಗೀತ ಶಿಕ್ಷಣವನ್ನು ಪ್ರತಿನಿತ್ಯ ಪರಿಶ್ರಮದಿಂದ ಅಭ್ಯಾಸ ಮಾಡಿ 7ನೇ ತರಗತಿಯಲ್ಲಿರುವಾಗ ಜೂನಿಯರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಎಲ್ಲರ ಅಚ್ಚರಿಗೆ ಕಾರಣಳಾದಳು. ಇವರ ಸಾಧನೆಗೆ ಮನೆಯವರು ಇನ್ನಷ್ಟು ಪ್ರೋತ್ಸಾಹ ನೀಡಿದರು.
Be the first to comment