ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ಬಲಕುಂದಿ ತಾಂಡಾದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 2022-23 ನೇ ಸಾಲಿನ ಶಾಲಾ ಸಂಸತ್ತು ಚುನಾವಣೆಯು ಜರುಗಿತು.ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲಿ ಶಾಲಾ ಸಂಸತ್ತು ಚುನಾವಣೆ ನಡೆಸಲಾಯಿತು.
ಮೊದಲು ಮತದಾರರ ಪಟ್ಟಿ ತಯಾರಿಸುವುದು,ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸುವುದು,ನಾಮಪತ್ರ ಹಿಂತೆಗೆದುಕೊಳ್ಳುವ ಪ್ರಕ್ರಿಯೆ, ಅಂತಿಮ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುವುದು,ಮಕ್ಕಳಿಂದ ಪ್ರಚಾರ ಕಾರ್ಯ,ನಂತರ ಚುನಾವಣಾ ಸಿಬ್ಬಂದಿ ನೇಮಕ ಮಾಡಿ ವ್ಯವಸ್ಥಿತವಾಗಿ ಚುನಾವಣೆ ನಡೆಸಲಾಯಿತು.
ಚುನಾವಣೆಯಲ್ಲಿ ಒಟ್ಟು 17 ವಿದ್ಯಾರ್ಥಿ/ನಿಯರು ಸ್ಪರ್ಧಿಸಿದ್ದರು ಅದರಲ್ಲಿ 08 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಬೇಕಿದ್ದು,ಕುಮಾರಿ ಅಕ್ಷತಾ ಸುರೇಶ ಬಡಿಗೇರ ವಿದ್ಯಾರ್ಥಿನಿಯು ಅತ್ಯಧಿಕ ಮತಗಳನ್ನು ಪಡೆದು ಆಯ್ಕೆಯಾದಳು ಹಾಗೂ ರಂಜಿತ್ ಸುರೇಶ ರಾಠೋಡ, ಗಣೇಶ ಅಶೋಕ ರಾಠೋಡ, ಗೌತಮಿ ಹರಿಶ್ಚಂದ್ರ ಬಡಿಗೇರ,ಅರುಣ ಶೇಕಪ್ಪ ರಾಠೋಡ,ಪ್ರೀತಂ ನೀಲಪ್ಪ ರಾಠೋಡ,ಕಿಶೋರ ಶರಣಪ್ಪ ರಾಠೋಡ,ಸುಪ್ರೀತಾ ದೊಡ್ಡಪ್ಪ ರಾಠೋಡ ಕ್ರಮವಾಗಿ ಆಯ್ಕೆ ಆಗಿದ್ದಾರೆ ಎಂದು ಚುನಾವಣಾಧಿಕಾರಿಗಳು ಹಾಗೂ ಶಾಲೆಯ ಮುಖ್ಯಗುರುಗಳಾದ ಎಸ್ ಎಚ್ ಹುಲ್ಲಿಕೇರಿ ತಿಳಿಸಿದರು.
ಶಾಲಾ ಸಂಸತ್ತು ಚುನಾವಣಾ ಪ್ರಕ್ರಿಯೆ ವೀಕ್ಷಕರಾಗಿ ಇಳಕಲ್ ಪಶ್ಚಿಮ ವಲಯದ ಸಿ ಆರ್ ಪಿ ಗಳಾದ ಶ್ರೀಮತಿ ಆಶಾರಾಣಿ ಎಸ್ ಭಾಗವಹಿಸಿದ್ದರು. ಚುನಾವಣಾ ಪ್ರಕ್ರಿಯೆಯಲ್ಲಿ ಶಿಕ್ಚಕಿಯರಾದ ಶ್ರೀಮತಿ ಜಿ ಕೆ ಮಠ,ಆರ್ ಎಸ್ ಕೊಡಗಲಿ,ಎಂ ಎನ್ ಅರಳಿಕಟ್ಟಿ,ಎಸ್ ಎಲ್ ಜೋಗಿನ,ಎಂ ಪಿ ಚೇಗೂರ,ಪಿ ಎಸ್ ಹೊಸೂರ, ಎಸ್ ಎಂ ಮಲಗಿಹಾಳ,ಸಾಯಿರಾ ಹೆರಕಲ್ ಹಾಗೂ ಶಿಕ್ಷಕರಾದ ಶ್ರೀ ಎ ಡಿ ಬಾಗವಾನ,ಶ್ರೀ ಪಿ ಎಸ್ ಪಮ್ಮಾರ, ಶ್ರೀ ಎಂ ಎಸ್ ಬೀಳಗಿ ಭಾಗವಹಿಸಿದ್ದರು.
Be the first to comment