ನಂದವಾಡಗಿ ಶಾಲೆಯಲ್ಲಿ ಶಾಲಾ ಸಂಸತ್ತು ರಚನೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:2022-23 ನೇ ಸಾಲಿನ ಶಾಲಾ ಸಂಸತ್ತನ್ನು KGS ನಂದವಾಡಗಿ ಶಾಲೆಯಲ್ಲಿ ರಚನೆ ಮಾಡಲಾಯಿತು.ವಿದ್ಯಾರ್ಥಿಗಳಿಗೆ ಚುನಾವಣೆ ಬಗ್ಗೆ ಅರಿವು ಮೂಡಿಸಿ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯ ಮಾದರಿಯಲ್ಲಿಯೇ ಚುನಾವಣೆ ಮಾಡಲಾಯಿತು. ಮುಖ್ಯಚುನಾವಣಾಧಿಕಾರಿಯವರಿಗೆ ಅಭ್ಯರ್ಥಿಗಳಿಂದ ನಾಮಪತ್ರ ಕೊಡುವುದು, ಹಿಂತೆಗೆತ,ಅಭ್ಯರ್ಥಿಗಳಿಗೆ ಚಿಹ್ನೆ ನೀಡುವುದು, ಮತಗಟ್ಟೆ ರಚನೆ,ಅಣಕು ಮತದಾನ,ಮತದಾರರ ಪಟ್ಟಿ,ಪೋಲಿಂಗ ಅಧಿಕಾರಿಗಳ ನೇಮಕ,ರಕ್ಷಣಾ ಸಿಬ್ಬಂಧಿ ನೇಮಕ, ಅಭ್ಯರ್ಥಿಗಳಿಂದ ಪ್ರಚಾರ,ಮತ ಹಾಕುವ ಕೌಂಟರ್, ಮತಪೆಟ್ಟಿಗೆ,ಮತಪತ್ರ ಹೀಗೆ ಹಲವಾರು ನಿಯಮಗಳೊಂದಿಗೆ ವ್ಯವಸ್ಥಿತವಾಗಿ ಚುನಾವಣೆ ಮಾಡಲಾಯಿತು.

ಈ ಒಂದು ಶಾಲಾ ಸಂಸತ್ತಿನ ಚುನಾವಣೆಯಲ್ಲಿ ಒಟ್ಟು 17 ಅಭ್ಯರ್ಥಿಗಳು ಭಾಗವಹಿಸಿದ್ದರು.ಇದರಲ್ಲಿ ಒಟ್ಟು 8 ವಿಧ್ಯಾರ್ಥಿನಿಯರು ಗೆಲುವು ಸಾಧಿಸಿದರು. ಅಜೀಮಾ ಗುಡಿಹಾಳ ವಿದ್ಯಾರ್ಥಿನಿ ಅತ್ಯಧಿಕ ಮತವನ್ನು ತೆಗೆದುಕೊಂಡರು.ಐಶ್ವರ್ಯ ಬಳುಲದ, ನಿಂಗಮ್ಮ ಈಟಿ,ರಾಧಿಕಾ ಪಂತಗಾರ,ಚೌಡಮ್ಮ ಕಟಗಿ,ವಿದ್ಯಾಶ್ರೀ ಚಿನ್ನಾಪೂರ,ರೇಷ್ಮಾ ಭಾವಿಕಟ್ಟಿ, ಫಕೀರವ್ವ ಗುರಿಕಾರ ವಿದ್ಯಾರ್ಥಿನಿಯರು ವಿಜಯಶಾಲಿ ಅಭ್ಯರ್ಥಿಗಳು.

ಈ ಒಂದು ಶಾಲಾ ಸಂಸತ್ತು ಚುನಾವಣೆಯಲ್ಲಿ ಚುನಾವಣಾಧಿಕಾರಿಯಾಗಿ ಶ್ರೀ ಪ್ರಭಯ್ಯ ಲೂತಿಮಠ, ಪಿ ಆರ್ ಓ ಆಗಿ ಶ್ರೀಮತಿ ಜ್ಯೋತಿ,ಶ್ರೀಮತಿ ವಿ ಬಿ ಕುಂಬಾರ,ಪೋಲಿಂಗ ಅಧಿಕಾರಿಯಾಗಿ ಶ್ರೀ ಎಸ್ ವಿ ಬಳುಲದ,ಶ್ರೀಮತಿ ಜಿ, ಆರ್ ನದಾಫ್,ಶ್ರೀ ವಿಶ್ವನಾಥ ತೋಟಿ ಹಾಗೂ ಬಸವರಾಜ ಬಲಕುಂದಿ ಚುನಾವಣೆಯ ಕರ್ತವ್ಯವನ್ನು ನಿರ್ವಹಿಸಿದರು.ಮತದಾರರಾಗಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

Be the first to comment

Leave a Reply

Your email address will not be published.


*