ಕಲಬುರಗಿ ಜೀಲ್ಲೆಯಲ್ಲಿ ಜನಿಸಿ ಕವಿತೆಯ ಮೂಲಕ ಬಂಡಾಯದ ಬಾಟು ಹಾರಿಸಿ ನಮ್ಮ ಬಾಳಿನಲ್ಲಿಯ ಕತ್ತಲೆಯನ್ನು ಹೊಗಲಾಡಿಸಿ ಜ್ಞಾನದ ಬೆಳಕು ನೀಡಿದ ನಿವೇ ನಮ್ಮ ನಿಜವಾದ ಗುರುದೇವ ನಿನಗೆ ನಮ್ಮ ಕೋಟಿ ಕೋಟಿ ನಮನಗಳು ಮತ್ತೆ ಹುಟ್ಟಿ ಬನ್ನಿ ಡಾ.ಚನ್ನಣ್ಣ ವಾಲೀಕಾರ ಅಮರೇಶ ಕಾಮನಕೇರಿ ಅಂಬಿಗ ನ್ಯೂಸ್
ಕಲಬುರಗಿ::ಡಾ. ಚೆನ್ನಣ್ಣ ವಾಲೀಕರ್ ಖ್ಯಾತ ಬಂಡಾಯ ಸಾಹಿತಿಗಳು ಹಾಗೂ ನಿವೃತ್ತ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಇಂದು ರಾತ್ರಿ 10 ಗಂಟೆಗೆ ವಿಧಿವಶರಾಗಿದ್ದಾರೆ ನಾಳೆ ದಿ . 25 . 12 . 2019 ರಂದು ಕಲಬುರ್ಗಿ ನಗರದ ಸೇಡಂ ರಸ್ತೆಯಲ್ಲಿ ಬರುವ | ಹಿಂದಿ ಪ್ರಚಾರ ಸಭಾಂಗಣದಲ್ಲಿ ಬೆಳಗ್ಗೆ 11 ಗಂಟೆಯಿಂದ 12 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಇಡಲಾಗುತ್ತದೆ ನಂತರ ಅವರ ಹುಟ್ಟುರಾದ ಚಿತ್ತಾಪುರ ತಾಲೂಕಿನ ಶಂಕ್ರವಾಡಿ ಗ್ರಾಮದಲ್ಲಿ 3 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ . ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ
ಕವಿ ನೇಡೆದು ಬಂದ ಹಾದಿ
ಡಾ,ಚನ್ನಣ್ಣ ವಾಲೀಕಾರ ಇತಿಹಾಸ.
ಡಾ.ಚೆನ್ನಣ್ಣ ವಾಲೀಕಾರರು ಕವಿ, ವಿಮರ್ಶಕ, ಸಂಶೋಧಕ, ವಿದ್ವಾಂಸ, ಅಧ್ಯಾಪಕ, ಪ್ರವಾಚಕ, ಪ್ರಾಧ್ಯಾಪಕರಾಗಿದ್ದು, ಪ್ರಸ್ತುತ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಇದುವರೆವಿಗೂ ಸುಮಾರು ಐವತ್ತಕ್ಕೂ ಹೆಚ್ಚು ಕೃತಿ ಪ್ರಕಟಿಸಿದ್ದಾರೆ.ಚೆನ್ನಣ್ಣ ವಾಲೀಕಾರ ಇವರು ಬರೆದ 1030 ಪುಟಗಳ ಬೃಹತ್ ಪ್ರಾಯೋಗಿಕ ಕಾವ್ಯ ‘ವ್ಯೋಮಾವ್ಯೋಮ’. ಮೊದಲ ಪುಟದಿಂದ ಕೊನೆಯ ಪುಟದವರೆಗೆ ಒಂದೇ ವಾಕ್ಯ, ಎಲ್ಲೂ ಪೂರ್ಣವಿರಾಮ, ಅಲ್ಪವಿರಾಮ, ಪ್ರಶ್ನಾರ್ಥಕ ಇತ್ಯಾದಿ ಬಳಸದಿರುವುದು ಇದರ ವಿಶೇಷ ಪ್ರಯೋಗ. ಬಂಡಾಯ ಸಂಘಟನೆಯಲ್ಲಿ ಚೆನ್ನಣ್ಣ ಸಂಪೂರ್ಣವಾಗಿ ತೊಡಗಿಸಿಕೊಂಡವರು. ಅನೇಕ ಸಲ ಸಂಘಟನೆಯ ರಾಜ್ಯ ಸಂಚಾಲಕನಾಗಿ ಅದರ ಮುಂಚೂಣಿ ನಾಯಕನಾಗಿ ಕೆಲಸ ಮಾಡಿದ್ದಾರೆ.
ಚೆನ್ನಣ್ಣ ವಾಲೀಕಾರರು
ಜನನ
ಚೆನ್ನಣ್ಣ ವಾಲೀಕಾರರು
೧೯೫೦
ಶಂಕರವಾಡ ಗ್ರಾಮ, ಕರ್ನಾಟಕ, ಭಾರತ
ವೃತ್ತಿ
ಕವಿ, ಸಂಶೋಧಕ, ಸಾಹಿತ್ಯ ವಿಮರ್ಶಕ, ಚಿಂತಕ
ರಾಷ್ಟ್ರೀಯತೆ
ಭಾರತೀಯ
ವಿದ್ಯಾಭ್ಯಾಸ
MA, Ph.D
ಪ್ರಮುಖ ಪ್ರಶಸ್ತಿ(ಗಳು)
ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಮಂಗಳೂರು ಸಾಹಿತ್ಯ ಬಳಗ ಪ್ರಶಸ್ತಿ, ಗುಲಬರ್ಗಾ ವಿ.ವಿ.ದ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ ಮುಂತಾದುವು.
ಜನ್ಮಸ್ಥಳ
ಡಾ.ಚೆನ್ನಣ್ಣ ವಾಲೀಕಾರರು ಗುಲಬರ್ಗಾ ಜಿಲ್ಲೆಯ ಚಿತ್ತಾಪುರ ತಾಲ್ಲೂಕು ಶಂಕರವಾಡ ಗ್ರಾಮದಲ್ಲಿ ಹುಟ್ಟಿದರು.ತಂದೆ ಧೂಳಪ್ಪ ವಾಲೀಕಾರ, ತಾಯಿ ಸಾಬಮ್ಮ. ಇವರು ಕುಸ್ತಿ, ಹಾಡುಗಾರಿಕೆ, ಬಯಲಾಟದ ಒಕ್ಕಲು ಮನೆತನದವರು. ಪ್ರೌಢಶಿಕ್ಷಣದವರೆಗೆ ಶಹಬಾದದಲ್ಲಿ, ಗುಲ್ಬರ್ಗಾ ಶರಣ ಬಸವೇಶ್ವರ ಕಲಾ ಕಾಲೇಜಿನಲ್ಲಿ ಬಿ.ಎ. ಪದವಿ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಸ್ನಾತಕೋತ್ತರ ಶಿಕ್ಷಣ ಮತ್ತು ‘ಹೈದರಾಬಾದ್ ಕರ್ನಾಟಕದ ಗ್ರಾಮದೇವತೆಗಳ ಜಾನಪದೀಯ ಅಧ್ಯಯನ’ ಪ್ರಬಂಧ ಮಂಡಿಸಿ ಗಳಿಸಿದ್ದು ಪಿಎಚ್.ಡಿ ಪದವಿ. ಪದವಿಯ ನಂತರ ಉದ್ಯೋಗಕ್ಕೆ ಸೇರಿದ್ದು ಪ್ರೌಢಶಾಲಾ ಶಿಕ್ಷಕರಾಗಿ ೧೯೬೫-೬೯ರವರೆಗೆ ;
ರಾಯಚೂರಿನ ಕಾಲೇಜು ಉಪನ್ಯಾಸಕರಾಗಿ ೧೯೭೧-೭೮ರವರೆಗೆ,
ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ೧೯೮೭-೨೦೦೩ರವರೆಗೆ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಹುದ್ದೆಗಳು
ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾಗ ನಿಭಾಯಿಸಿದ ಜವಾಬ್ದಾರಿಗಳು ಹಲವಾರು.ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾಗಿ,
ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ,
ಸೆನೆಟ್ ಸದಸ್ಯರಾಗಿ,
ಸಿಂಡಿಕೇಟ್ ಸದಸ್ಯರಾಗಿ,
ವಿದ್ಯಾರ್ಥಿ ಕಲ್ಯಾಣಾಕಾರಿಯಾಗಿ,
ರಾಷ್ಟ್ರೀಯ ಸೇವಾ ಸಮನ್ವಯಾಕಾರಿಯಾಗಿ,
ವಸತಿ ನಿಲಯದ ಅಕ್ಷಕರಾಗಿ,
ಪ್ರಸಾರಾಂಗದ ನಿರ್ದೇಶಕರಾಗಿ. ಹೀಗೆ ನಿರ್ವಹಿಸಿದ್ದು ಹಲವಾರು ಜವಾಬ್ದಾರಿಗಳು
ಕವನ ಸಂಕಲನಗಳು ಸಂಪಾದಿಸಿ
ಮರದ ಮೇಲಿನ ಗಾಳಿ
ಕರಿತೆಲಿ ಮಾನವನ ಜೀಪದ
ಹಾಡಕ್ಕಿ ಹಾಗು ಇತರ ಪದಗಳು
ಬಂಡೆದ್ದ ದಲಿತರ ಬೀದಿ ಹಾಡುಗಳು
ಧಿಕ್ಕಾರದ ಹಾಡುಗಳು
ಪ್ಯಾಂಥರ್ ಪದ್ಯಗಳು
ಕವನಗಳು
ಕವನ ಸಂಕಲನಗಳು ಸಂಪಾದಿಸಿ
ಮರದ ಮೇಲಿನ ಗಾಳಿ
ಕರಿತೆಲಿ ಮಾನವನ ಜೀಪದ
ಹಾಡಕ್ಕಿ ಹಾಗು ಇತರ ಪದಗಳು
ಬಂಡೆದ್ದ ದಲಿತರ ಬೀದಿ ಹಾಡುಗಳು
ಧಿಕ್ಕಾರದ ಹಾಡುಗಳು
ಪ್ಯಾಂಥರ್ ಪದ್ಯಗಳು
ಮಹಾಕಾವ್ಯ ಸಂಪಾದಿಸಿ
‘ವ್ಯೋಮಾವ್ಯೋಮ’- ಮಾನಸ ಮಹಾಸಾಗರದ ಪರಮಹಂಸಗಳ ಭೂವ್ಯೋಮದ ಬೃಹದ್‌ಗಾನ.
ಮಹಾಪ್ರಬಂಧ ಸಂಪಾದಿಸಿ
‘ಹೈದರಾಬಾದ್ ಕರ್ನಾಟಕದ ಗ್ರಾಮದೇವತೆಗಳ ಜಾನಪದೀಯ ಅಧ್ಯಯನ’
ಕಥಾಸಂಕಲನ ಸಂಪಾದಿಸಿ
ಕಪ್ಪು ಕಥೆಗಳು,
ಕುತ್ತದಲ್ಲಿ ಕುದ್ದವರ ಕಥೆಗಳು,
ಹೆಪ್ಪುಗಟ್ಟಿದ ಸಮುದ್ರ
ನಾಟಕಗಳು ಸಂಪಾದಿಸಿ
ಟೊಂಕದ ಕೆಳಗಿನ ಜನ,
ಅಗ್ನಿರಾಜ,
ತಲೆ ಹಾಕುವವರು,
ಕೂಸಿನ ಕಂಡಿರಾ,
ಅವಿವೇಕಿ ರಾಜನ ಕಥೆ,
ಜೋಗತಿ.
ಕಾದಂಬರಿ ಸಂಪಾದಿಸಿ
ಒಂದು ಹೆಣ್ಣಿನ ಒಳಜಗತ್ತು,
ಕೋಟೆಬಾಗಿಲು,
ಹುಲಿಗೆಮ್ಮ,
ಗ್ರಾಮಭಾರತ,
ಬೆಳ್ಯ
ಪ್ರಶಸ್ತಿಗಳು
ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ,
ಮಂಗಳೂರು ಸಾಹಿತ್ಯ ಬಳಗ ಪ್ರಶಸ್ತಿ,
ಗುಲಬರ್ಗಾ ವಿ.ವಿ.ದ ರಾಜ್ಯೋತ್ಸವ ಪ್ರಶಸ್ತಿ,
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,
ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ ಮುಂತಾದುವು
Be the first to comment