ಹೆದ್ದಾರಿ ತಡೆ ಸ್ಥಳಕ್ಕೆ ಶಾಸಕರಾದ ಹರತಾಳು ಹಾಲಪ್ಪ ಭೇಟಿ

ವರದಿ ಓಂಕಾರ ಎಸ್ ವಿ ತಾಳಗುಪ್ಪ*

ಜಿಲ್ಲಾ ಸುದ್ದಿಗಳು 

ಸಾಗರ 

77 ಕೋಟಿ ವೆಚ್ಚದಲ್ಲಿ (ಅಂದರೆ 1 ಕಿ.ಮೀ. 9 ಕೋಟಿ 65 ಲಕ್ಷ ರೂಪಾಯಿಗಳು) ಸಾಗರದ ತ್ಯಾಗಾರ್ಥಿ ವೃತ್ತದಿಂದ ಎಲ್.ಬಿ.ಕಾಲೇಜಿನವರೆಗೆ 8.4 ಕಿ.ಮೀ ದೂರವನ್ನು ಅಗಲೀಕರಣ ಮಾಡುತ್ತಿರುವುದು ತಮ್ಮೆಲ್ಲರ ಗಮನದಲ್ಲಿ ಇರುವುದು ಸರಿಯಷ್ಟೆ. ಇದಕ್ಕಾಗಿ ನೂರು ವರ್ಷಕ್ಕೂ ಮಿಗಿಲಾದ 488 ಮರಗಳ ಕಡಿತಲೆಯನ್ನು ಈಗಾಗಲೇ ತ್ಯಾಗರ್ತಿ ವೃತ್ತದಿಂದ ಪ್ರಾರಂಭಿಸಲಾಗಿದೆ. ಅರಣ್ಯ ಇಲಾಖೆಯವರು ನಡೆಸಿದ ಸಾರ್ವಜನಿಕ ಅಹವಾಲು ಸಭೆಯಲ್ಲಿ ಮರಗಳ ಕಡಿತಲೆ ಮಾಡುವುದು ಬೇಡ, ಮರಗಳನ್ನು ಉಳಿಸಿಕೊಂಡೇ ಅಭಿವೃದ್ಧಿ ಮಾಡಬೇಕು ಎಂಬ ಆಗ್ರಹವನ್ನು ಮಂಡಿಸಲಾಗಿತ್ತು.ನಂತರದಲ್ಲಿ ಸಾಗರದ ಸನ್ಮಾನ್ಯ ಶಾಸಕರನ್ನು ಭೇಟಿ ಮಾಡಿ ಮರಗಳ ಕಡಿತಲೆ ಮಾಡದೆ, ರಸ್ತೆ ನಿರ್ಮಿಸಿ ಎಂಬ ಮನವಿಯನ್ನೂ ನೀಡಲಾಗಿತ್ತು. ಹೆದ್ದಾರಿ ಮಧ್ಯದಲ್ಲಿ ನಿರ್ಮಿಸುವ ವಿಭಜಕ ಅಥವಾ ಮೀಡಿಯನ್ ಅಗಲವನ್ನು ಐದು ಅಡಿಯಿಂದ ಒಂದು ಅಡಿಗೆ ಇಳಿಸಿದರೆ ಸಾಕಷ್ಟು ಮರಗಳ ಹನನವನ್ನು ತಪ್ಪಿಸಬಹುದು ಎಂಬ ಸಲಹೆಯನ್ನು ನೀಡಲಾಗಿತ್ತು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಶಾಸಕರು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳನ್ನು ಕರೆಸುತ್ತೇನೆ ಎಂಬ ಭರವಸೆಯನ್ನೂ ನೀಡಿದ್ದರು. ಸಾರ್ವಜನಿಕರ ಹಾಗೂ ಹೆದ್ಧಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆ ನಡೆಸಿಯೇ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದೂ ಶಾಸಕರು ಭರವಸೆ ನೀಡಿದ್ದೂ,

CHETAN KENDULI

ದುರದೃಷ್ಟವೆಂದರೆ, ಸಾರ್ವಜನಿಕರ ಅಭಿಪ್ರಾಯಗಳನ್ನು ಚರ್ಚಿಸುವುದಕ್ಕಿಂತಲೂ ಮೊದಲೆ ಮರಗಳ ಕಡಿತಲೆಯನ್ನು ಪ್ರಾರಂಭಿಸಲಾಗಿದೆ. ಸಾಗರಿಗರಿಗೆ ಶುದ್ಧ ಗಾಳಿಯ ನೀಡುವುದರ ಜೊತೆಗೆ ಅನೇಕ ತರಹದ ನೈಸರ್ಗಿಕ ಸೇವೆಗಳನ್ನು ನೀಡುತ್ತಿರುವ ಪಾರಂಪಾರಿಕ ಮರಗಳನ್ನು ಅಭಿವೃದ್ಧಿಯ ಹೆಸರಿನಲ್ಲಿ ಕಡಿಯುವುದು ಸಾಮಾಜಿಕ ನ್ಯಾಯವಲ್ಲ. ಸರ್ವೋಚ್ಛ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿಗಳು ಪಶ್ವಿಮ ಬಂಗಾಳದಲ್ಲಿ ರೈಲ್ವೇ ಮೇಲ್ಸೇತುವೆ ನಿರ್ಮಿಸುವಾಗ ಕಡಿಯಲು ಹೊರಟಿದ್ದ ಮರಗಳನ್ನು ಕಡಿಯಬಾರದು. ಪಾರಂಪಾರಿಕ ಮರಗಳು ಮಾನವನಿಗೆ ನೀಡುವ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಈ ಹಂತದಲ್ಲಿ ಈಗ ನಮ್ಮ ಮುಂದಿರುವ ದಾರಿಯೆಂದರೆ, ಶಾಂತಿಯುತವಾಗಿ ನಮ್ಮ ಪ್ರತಿಭಟನೆಯನ್ನು ಮಾಡುವುದು. ದಿನಾಂಕ:22/01/2022ರ ಶನಿವಾರ ಮಧ್ಯಾಹ್ನ 2 ಗಂಟೆಗೆ ಸಾಗರದ ಐ.ಬಿ.ಯೆದುರು ಹೆದ್ದಾರಿ ತಡೆಯನ್ನು ಮಾಡುವುದರ ಮೂಲಕ (ಕೋವಿಡ್ ನಿಯಮಗಳನ್ನು ಪಾಲಿಸಿ) ನಮ್ಮ ಪ್ರತಿರೋಧವನ್ನು ತೋರಬೇಕಾಗಿದೆ. ದಯವಿಟ್ಟು ಸಾರ್ವಜನಿಕರು ಹೆಚ್ಚು ಸಂಖ್ಯೆಯಲ್ಲಿ ಬಂದು ಮಾತು ಬಾರದ ಮೂಕ ಮರಗಳನ್ನು ಉಳಿಸಲು ನೆರವಾಗಬೇಕೆಂದು ಕೋರಲಾಗಿತ್ತು.ಪರಿಸರಾಸಕ್ತರುವಿವಿಧ ಸಂಘ ಸಂಸ್ಥೆಗಳು ಪರಿಸರ ಸಂಘಟನೆಗಳು ಪತ್ರಕರ್ತರುಮಹಿಳಾ ಸಂಘಟನೆಗಳುರಂಗ ಕಲಾವಿದರು ಹೀಗೆ ಪಕ್ಷಾತೀತವಾಗಿ, ಧರ್ಮಾತೀತವಾಗಿ ಮತ್ತು ಜಾತ್ಯಾತೀತವಾಗಿ ಸಂಘಟಿಸಿದ ಈ ಪ್ರತಿಭಟನೆಯನ್ನು ಖುದ್ದು ಭಾಗವಹಿಸಿದ್ದು ಸ್ಥಳಕ್ಕೆ ಸಾಗರ ವಿಧಾನಸಭಾ ಶಾಸಕರಾದ ಶ್ರೀ ಹರತಾಳು ಹಾಲಪ್ಪ ಸಂಬಂಧ ಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಮೊಬೈಲ್ ಸಂಭಾಷಣೆ ನೆಡೆಸಿ ಪ್ರತಿಭಟನಾ ಮನವೊಲಿಸಿದರು

Be the first to comment

Leave a Reply

Your email address will not be published.


*