ಆಟೋದಲ್ಲಿ ಸಿಕ್ಕ ಐಪ್ಯಾಡ್ ಅನ್ನು ಪೋಲಿಸರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೇರೆದ:: ಎಂ. ಮುನಾವರ್ ಬೇಗ

ವರದಿ: ಮಂಜುಳಾ ರೆಡ್ಡಿ ಬೆಂಗಳೂರು ನಗರ


      ಕ್ರೈಂ-ಪೋಕಸ್


    ಬೆಂಗಳೂರು::ಆಟೋರಿಕ್ಷಾದಲ್ಲಿ ಬಿಟ್ಟುಹೋಗಿದ್ದ ಐಪ್ಯಾಡ್‌ನ್ನು ಪ್ರಮಾಣಿಕವಾಗಿ ಪೊಲೀಸ್ – ಆಯುಕ್ತರ ಕಛೇರಿಗೆ ನೀಡಿರುವ ಬಗ್ಗೆ ಕರ್ನಾಟಕ ವಿಧಾನಸಭೆಯ ಸಚಿವಾಲಯದ ನೌಕರರಾದ ಶ್ರೀ ಎಂ . ಮುನಾವರ್ ಬೇಗ್ ರವರು ಸ್ವಂತ ಕೆಲಸದ ನಿಮಿತ್ತ ಆಟೋ ರಿಕ್ಷಾ ದಲ್ಲಿ ದಿನಾಂಕ : 24 / 10 / 2019 ರಂದು ಮದ್ಯಾಹ್ನ ಶಾಸಕರ ಭವನದಿಂದ ಆಟೋ ರಿಕ್ಷಾದಲ್ಲಿ ಪ್ರಯಾಣಿಸುವಾಗ ಆಟೋದಲ್ಲಿ ಅಪಲ್ ಕಂಪನಿಯ ಐಪ್ಯಾಡ್ ಇರುವುದು ಕಂಡು ಬಂದಿರುತ್ತದೆ .

ನಂತರ ಸದರಿ ಆಟೋ ಚಾಲಕರನ್ನು ವಿಚಾರಿಸಲಾಗಿ ಯಾರೋ ಪ್ರಯಾಣಿಕರು ಬಿಟ್ಟುಹೋಗಿರುತ್ತಾರೆ ಎಂದು ತಿಳಿಸಿರುತ್ತಾರೆ ಸದರಿ ಆಟೋ ಚಾಲಕರಿಗೆ ವಯಸ್ಸಾಗಿದ್ದರಿಂದ ಐಪ್ಯಾಡ್‌ನ್ನು ಶ್ರೀ ಎಂ . ಮುನಾವರ್ ಬೇಗ್ ರವರು ಮೊದಲು ವಿಧಾನಸೌದ ಪೋಲೀಸ್ ಠಾಣೆಗೆ ತೆಗೆದುಕೊಂಡು ಹೋಗಿರುತ್ತಾರೆ , ಠಾಣಾಧಿಕಾರಿಯ ನಿದೇರ್ಶನದ ಮೇರೆಗೆ ಪೊಲೀಸ್ ಆಯುಕ್ತರ ಕಛೇರಿಯ ಪಿ . ಆರ್ . ಓ ವಿಭಾಗಕ್ಕೆ ತಂದು ಒಪ್ಪಿಸಿರುತ್ತಾರೆ , ಈ ವಿಚಾರವನ್ನು ಪಿ . ಆರ್ . ಓ ಕಛೇರಿಯ ಅಧಿಕಾರಿ ಮತ್ತು ಸಿಬ್ಬಂದಿಯವರು ಪೊಲೀಸ್ ನಿಯಂತ್ರಣ ಕೋಣೆಯ ಮುಖಾಂತರ ಬೆಂಗಳೂರು ನಗರದ ಎಲ್ಲಾ ಪೊಲೀಸ್ ಠಾಣೆಗಳಿಗೆ ವೈರ್‌ಲೇಸ್ ಮುಖಾಂತರ ಮಾಹಿತಿ ರವಾನಿಸಲಾಗಿರುತ್ತದೆ . ತದನಂತರ ಡಯಲ್ 100 ಸಿಬ್ಬಂದಿಯವರು ನಮ್ಮ ಕಛೇರಿಯನ್ನು ಸಂಪರ್ಕಿಸಿ ಐಪ್ಯಾಡ್ ಕಳೆದು ಕೊಂಡ ವ್ಯಕ್ತಿಯ ವಿವರವನ್ನು ನೀಡಿರುತ್ತಾರೆ .

ಸದರಿಯ ವ್ಯಕ್ತಿಯ ವಿವರವನ್ನು ಪರಿಶೀಲಿಸಿಲಾಗಿ ಐಪ್ಯಾಡ್‌ನ ವಾರಸುದಾರರು ಪತ್ತೆಯಾಗಿರುತ್ತಾರೆ . ತದನಂತರ ಈ ಅಪಲ್ ಕಂಪನಿಯ ಐಪ್ಯಾಡ್ ನ್ನು ಮಾನ್ಯ ಪೊಲೀಸ್ ಆಯುಕ್ತರು , ಬೆಂಗಳೂರು ನಗರ ರವರು ವಾರಸುದಾರರಿಗೆ ಒಪ್ಪಿಸಿರುತ್ತಾರೆ . ಕರ್ನಾಟಕ ವಿಧಾನಸಭೆಯ ಸಚಿವಾಲಯದ ನೌಕರರಾದ ಶ್ರೀ ಎಂ . ಮುನಾವರ್ ಬೇಗ್ ರವರ ಪ್ರಮಾಣಿಕತೆಯನ್ನು ಶ್ಲಾಘಿಸಿ , ಮಾನ್ಯ ಪೊಲೀಸ್ ಆಯುಕ್ತರು , ಬೆಂಗಳೂರು ನಗರ ರವರು ಪ್ರಶಂಸನಾ ಪತ್ರವನ್ನು ನೀಡಿರುತ್ತಾರೆ .

ಕರ್ನಾಟಕ ವಿಧಾನಸಭೆಯ ಸಚಿವಾಲಯದ ನೌಕರ ಶ್ರೀ ಎಂ . ಮುನಾವರ್ ಬೇಗ್ ಮೊ . ಸಂಖ್ಯೆ : 9739684298

ಅಂಬಿಗ ನ್ಯೂಸ್ ಟಿವಿಗೆ ಸಹಾಯದ ಮನವಿ

ನಿಮ್ಮ ಆರ್ಥಿಕ ಸಹಾಯ ದಿಂದ ಮಾತ್ರ ಮಾಧ್ಯಮವನ್ನು ಪಾರದರ್ಶಕವಾಗಿ ಯಾರ ಮುಲಾಜಿಗು ಬೀಳದೆ ಮುನ್ನಡೆಸಲು ಸಾಧ್ಯ

ಮಾಧ್ಯಮ ಮುನ್ನೆಡೆಯಲ್ಲು ನಿವು 100,500,1000,2500,5000,10000 ದೇಣಿಗೆ ಸಹಾಯ ನೀಡಬಹುದು
ಅಂಬಿಗ ನ್ಯೂಸ್ ಟಿವಿ ಗೆ ಸಹಾಯ ನೀಡಲು ಈ  ಬ್ಯಾಂಕ್ ಹಾಗೂ  ಕೆಳಗಿನ ಕೋಡ ಬಳಸಿ ಪೇಟಿಯಂ  ಮಾಡಬಹುದು.ಈ 9008329745 ಪೋನ ನಂಬರ್ ಬಳಸಿ ಗೂಗಲ್  ಪೇ ಕೂಡ ಮಾಡಬಹುದು ಮತ್ತು ಎಲ್ಲ ರೀತಿಯ ಆನ್ ಲೈನ್ ದೇಣಿಗೆ ನೀಡಬಹುದು

Amaresh kamanakeri
A/c 62053220183 IFC-SBIN0020354 ಪೋನ ನಂ 9008329745

 

Be the first to comment

Leave a Reply

Your email address will not be published.


*