ಜಿಲ್ಲಾ ಸುದ್ದಿಗಳು
ಬಾಗಲಕೋಟೆ: ವಿಜಯಪುರ ಮತ್ತು ಬಾಗಲಕೋಟೆ ಸ್ಥಳೀಯ ಸಂಸ್ಥೆ ವಿಧಾನ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಬಾಗಲಕೋಟೆ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲ ಆಯುಧ ಲೈಸನ್ಸ್‍ದಾರರು ತಮ್ಮ ಎಲ್ಲ ಶಸ್ತ್ರಾಸ್ತ್ರಗಳಾದ ಎಸ್.ಬಿ.ಬಿ.ಎಲ್, ಡಿ.ಬಿ.ಬಿ.ಎಲ್ ಬಂದೂಕು, ರೈಫಲ್, ರಿವಾಲ್ವಾರ್ ಹಾಗೂ ಪಿಸ್ತೂಲುಗಳನ್ನು ಹೊಂದಲು ಕೊಟ್ಟ ಲೈಸನ್ಸ್‍ಗಳನ್ನು ನವೆಂಬರ 9 ರಿಂದ ಡಿಸೆಂಬರ 16 ಅವಧಿಗೆ ಸ್ಥಗಿತಗೊಳಿಸಲಾಗುದ್ದು, ಎಲ್ಲ ಶಸ್ತ್ರಾಸ್ತ್ರ ಹೊಂದಿದವರು ತಕ್ಷಣವೇ ಸಮೀಪದ ಪೊಲೀಸ್ ಠಾಣೆಯಲ್ಲಿ ಜಮೆ ಮಾಡುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅವರು ಆದೇಶ ಹೊರಡಿಸಿದ್ದಾರೆ.
ಪೊಲೀಸ್ ಇಲಾಖೆಯು ತಮ್ಮಲ್ಲಿ ತಂದಿರಿಸಿದ ಶಸ್ತ್ರಾಸ್ತ್ರಗಳನ್ನು ಸುರಕ್ಷಿತವಾಗಿ ಅಭಿರಕ್ಷೆಯಲ್ಲಿಡುವುದಕ್ಕೆ ಸೂಕ್ತ ವ್ಯವಸ್ಥೆ ಮಾಡತಕ್ಕದ್ದು. ಶಸ್ತ್ರಾಸ್ತ್ರಗಳನ್ನು ತಂದಿರುವ ಲೈಸನ್ಸ್‍ದಾರರಿಗೆ ಸೂಕ್ತ ರಶೀದಿಯನ್ನು ಕೊಡತಕ್ಕದ್ದು. ನಿಗದಿತ ಅವಧಿಯಲ್ಲಿ ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ಜನೆ ಮಾಡದಿದ್ದಲ್ಲಿ ಕಾರಾಗೃಹ ಶಿಕ್ಷೆ ಮತ್ತು ಜುಲ್ಮಾನೆಯ ದಂಡನೆಗಳಿಗೆ ಒಳಪಡುವ ನಿಯಮಗಳನ್ನು ಸಂಬಂಧಿಸಿದ ಲೈಸನ್ಸದಾರರು ಗಮನಿಸಬೇಕು. ಡಿಸೆಂಬರ 17ರ ರಂದು ಮರಳಿ ಜಮಾ ಮಾಡಿದ ಶಸ್ತ್ರಾಸ್ತ್ರಗಳನ್ನು ನೀಡಲಾಗುವುದೆಂದು ಆದೇಶದಲ್ಲಿ ತಿಳಿಸಿದ್ದಾರೆ.
Be the first to comment