ಆಡಳಿತ ಅಧಿಕಾರಿಯ ಮೂಲಕ ಐತಿಹಾಸಿಕ ಬೆಂಗಾಳಿ ಉತ್ಸವ: ಡಾ.ಡಿ.ಎಸ ಅಶ್ವತ್ ಬೆಂಗಳೂರುನಲ್ಲಿ ಸುದ್ದಗೋಷ್ಠಿ

ವರದಿ: ಮಂಜುಳಾ ರೆಡ್ಡಿ ಬೆಂಗಳೂರು ನಗರ


   ದೇಶದ ಸುದ್ದಿಗಳು


ಬೆಂಗಳೂರು:ದಶರಾ ಹಬ್ಬದ ಪ್ರಯುಕ್ತ ಬೆಂಗಾಲಿ ಸಾಂಸ್ಕೃತಿಕ, ಸಂಪ್ರದಾಯಕ ಪರಂಪರೆಯ ದುರ್ಗಾದೇವಿ ಪೂಜೆ ಪೂಜಿಸಲಾಗುತ್ತದೆ ಎಂದು ಬೆಂಗಾಲಿ ಆಡಳಿತ ಐಎಎಸ್ ಅಧಿಕಾರಿ ಡಾ.ಡಿ.ಎಸ್. ಅಶ್ವತ್ ಅವರು ಇಂದು ತಿಳಿಸಿದರು.

ದಿ ಬೆಂಗಾಲಿ ಆಶೊಸಿಯೇಷನ್ ವತಿಯಿಂದ ಬಹುಳ ವಿಜೃಂಭಣೆಯಿಂದ ಅಕ್ಡೊಬರ್ 3 ರಿಂದ 6 ರ ವರೆಗು ಪೂಜೆಗಳನ್ನು ನಿರ್ವಹಿಸಲಾಗುತ್ತದೆ .
ದ್ವಾದಶಿ ,ತ್ರಯೋದಶಿ , ಚತುರ್ದಶಿ , ಪಂಚಮಿ ಹೀಗೆ ಆರು ದಿನಗಳ ಕಾಲ ಈ ಕಾರ್ಯಕ್ರಮ ನಡೆಯುತ್ತದೆ , ಅಂಗಡಿ ಮಳಿಗೆಗಳು ಮತ್ತು ಫುಡ್ ಕೊರ್ಟ್ ಗಳು ಅನುಮತಿ ನೀಡಲಾಗಿದೆ ಎಂದು ತಿಳಿಸಿದರು , ಸೌಚಾಲಯ ಸೌಲಭ್ಯ ಕೂಡ ಒದಗಿಸಲಾಗಿದೆ ಎಂದು ತಿಳಿಸಿದರು ಸುಮಾರು 5ಲಕ್ಷ ಜನ ಸೇರುವ ಸಾದ್ಯತೆ ಇದೆ ಎಂದರು.
ಈ ಕಾರ್ಯಕ್ರಮ ಉದ್ಘಾಟನೆಗೆ ಮುಖ್ಯ ಮಂತ್ರಿ ಯಡ್ಯೂರಪ್ಪನವರು ಆಗಮಿಸಲಿದ್ದರೆ , ಅಕ್ಟೋಬರ್ 2 ರಂದು ಬೆಳಿಗ್ಗೆ 10.ಗಂಟೆಗೆ
ಅಲಸೂರು ಕೆರೆ ಅಂಗಳದಲ್ಲಿ ನಿರ್ವಹಿಸಲಾಗುತ್ತದೆ , ಬೆಂಗಾಳ ಹಾಗೂ ರಾಜ್ಯದ ಪ್ರಮುಖರನ್ನು ಆಹ್ವಾನಿತ್ತೆವೆ ಎಂದು ಡಾ.ಅಶ್ವತ್ ನವರು ತಿಳಿಸಿದರು.

 

ದುರ್ಗಾದೇವಿಯ ಉತ್ಸವದ ಮಹತ್ವ ಅದುನು ಸಹಕಾರ ಗೋಳಿಸುತ್ತಿರುವ ಬೆಂಗಾಳಿ ಸಂಸ್ಥೆ

ವಿವರ

ಹಿಂದೂ ಕ್ಯಾಲೆಂಡರ್‎ನ ಅಶ್ವಿನಿ ಮಾಸದಲ್ಲಿ ಬರುವ ದುರ್ಗಾ ಪೂಜೆಯನ್ನು ಬಹು ಸಂಭ್ರಮದಿಂದಲೇ ದೇಶಾದ್ಯಂತ ಆಚರಿಸುತ್ತಾರೆ. ಹತ್ತು ದಿನಗಳ ಈ ದೀರ್ಘ ಹಬ್ಬವು ತನ್ನದೇ ಐತಿಹಾಸಿಕ ಮಹತ್ವದಿಂದ ಪ್ರಸಿದ್ಧತೆಯನ್ನು ಪಡೆದುಕೊಂಡಿದ್ದು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯ ಎಂಬುದರ ಸಂಕೇತವಾಗಿ ವಿಜಯ ದಶಮಿಯೆಂದೇ ಜನಜನಿತವಾಗಿದೆ.

ದೇವಿ ದುರ್ಗಾ ಮಾತೆಯು ಮಹಿಷಾಸುರನನ್ನು ವಧಿಸಿದ ಈ ಶುಭ ಸಂದರ್ಭವೇ ನವರಾತ್ರಿಯಾಗಿ ಅನಾದಿ ಕಾಲದಿಂದಲೂ ಆಚರಣೆಯಲ್ಲಿದೆ. ಈ ದಿನಗಳಂದು ದೇವಿಗೆ ಒಂಬತ್ತು ಬಗೆಯ ಅಲಂಕಾರಗಳನ್ನು ಮಾಡಿ ಪೂಜಿಸುತ್ತಾರೆ. ಹತ್ತನೇ ದಿನವೇ ‘ವಿಜಯ ದಶಮಿ’ಯಾಗಿದೆ. ದೇವಿಯನ್ನು ಹಿಂದೂ ಶಾಸ್ತ್ರದಲ್ಲಿ ವಿಭಿನ್ನವಾಗಿ ವ್ಯಾಖ್ಯಾನಿಸಲಾಗಿದೆ. ಅಷ್ಟಕ್ಕೂ ದುರ್ಗಾ ಪೂಜೆ ಆರಂಭವಾಗಿದ್ದು ಯಾವಾಗ?

ಮೂರು ಕಣ್ಣುಗಳು, ಹತ್ತು ಭುಜಗಳು, ದೈವೀ ಸಂಭೂತ ಆಯುಧಗಳು, ಅಂತೆಯೇ ಅಭಯ ಮುದ್ರದ ಸಂಕೇತವಾಗಿ ದೇವಿಯು ಸಿಂಹದ ಮೇಲೆ ಕುಳಿತಿರುವುದು, ಹೀಗೆ ಭಯವೇ ಇಲ್ಲದ ದೇವಿಯ ವರ್ಚಸ್ಸಿನಿಂದಾಗಿ ದೇವತೆಗಳಿಗೆ ಮಹಿಷಾಸುರನನ್ನು ವಧಿಸಲು ಸಾಧ್ಯವಾಯಿತು.

ತನ್ನ ಮೃತ್ಯು ಹೆಣ್ಣಿನಿಂದಲೇ ಸಂಭವಿಸಬೇಕೆಂಬ ವರವನ್ನು ಪಡೆದಿದ್ದ ಮಹಿಷಾಸುರ ದೇವತೆಗಳನ್ನು ಹಿಂಸಿಸುತ್ತಿದ್ದ. ದೇವಿ ದುರ್ಗೆಯು ಮಹಿಷಾಸುರನ ವಧೆಗಾಗಿಯೇ ಅವತಾರವನ್ನು ಎತ್ತಿ ಪ್ರತಿಯೊಂದು ದೇವತೆಗಳಿಂದ ಒಂದೊಂದು ಶಕ್ತಿಯನ್ನು ಪಡೆದುಕೊಂಡು ಅಸುರನನ್ನು ವಧಿಸಲು ಮುಂದಡಿ ಇಡುತ್ತಾಳೆ. ಇಷ್ಟಾರ್ಥ ಸಿದ್ಧಿಗಾಗಿ-‘ಬ್ರಹ್ಮಚಾರಿಣಿ ದೇವಿ’ಯನ್ನು ಪೂಜಿಸಿ

ರಾಮನು ಕೂಡ ರಾವಣನನ್ನು ವಧಿಸುವುದಕ್ಕೆ ಮುನ್ನ ಶಕ್ತಿಯ ಆಶೀರ್ವಾದವನ್ನು ಪಡೆದಿದ್ದರು ಎಂಬ ಮಾತೂ ಇದೆ. 108 ದೀಪಗಳು ಮತ್ತು 108 ನೀಲಿ ಕಮಲಗಳನ್ನು ದೇವಿಗೆ ಅರ್ಪಿಸಿ ಆಕೆಯನ್ನು ಪೂಜಿಸಿದ ಪ್ರಥಮ ವ್ಯಕ್ತಿ ರಾಮ ಎಂಬುದು ಇತಿಹಾಸದಲ್ಲಿ ಮೂಡಿ ಬಂದಿದೆ.

ದುರ್ಗಾ ಪೂಜೆಯ ಇತಿಹಾಸ ತೆರೆದುಕೊಳ್ಳುವುದು ಬಂಗಾಳದಲ್ಲಿ 16ನೇ ಶತಮಾನದಲ್ಲಾಗಿದೆ. ಮಧ್ಯಯುಗದ ಅವಧಿಯಲ್ಲಿ ಇದು ದುರ್ಗಾ ಪೂಜೆಯು ಆಚರಣೆಗೆ ಒಳಪಟ್ಟರೂ ತನ್ನ ಪ್ರಸಿದ್ಧತೆಯನ್ನು ಪೂಜೆಯು ಪಡೆದುಕೊಂಡಿರುವುದು 16ನೇ ಶತಮನಾದಲ್ಲಾಗಿದೆ.

ದುರ್ಗಾದೇವಿ ಪೂಜಾ ಮಹತ್ವ

ಇದನ್ನು ಪ್ರಥಮವಾಗಿ ಆಚರಣೆಗೆ ಯಾರು ತಂದರು ಎಂಬುದಕ್ಕೆ ಇತಿಹಾಸಕಾರರು ಬೇರೆ ಬೇರೆ ದಾಖಲೆಗಳನ್ನು ಒದಗಿಸುತ್ತಾರೆ. ತಹೇರಾಪುರದ ರಾಜ ಎಂಬುದಾಗಿ ಕೆಲವರು ಹೇಳಿದರೆ, ನಾದಿಯಾದ ಬಹಾಬಾನಂದ ಮಜುಮ್‎ದಾರ್ ಎಂಬುದಾಗಿ ಇನ್ನು ಕೆಲವರು ತಿಳಿಸುತ್ತಾರೆ. ದುರ್ಗಾ ಮಾತೆಯ ಒಂಬತ್ತು ಅವತಾರದ ವೈಶಿಷ್ಟ್ಯ

 

ಮಾಲ್ಡಾದ ಭೂಮಾಲಿಕರು ದೇವಿಯನ್ನು ಪೂಜಿಸುವ ಕ್ರಮವನ್ನು ಮೊದಲು ಆಚರಣೆಗೆ ತಂದರು ಎಂಬುದಾಗಿ ಕೂಡ ತಿಳಿಸುತ್ತಾರೆ. 1832 ರಲ್ಲಿ ರಾಜ ಹರಿನಾಥನು ದುರ್ಗಾ ಪೂಜೆಯನ್ನ ಮೊದಲು ಆರಂಭಿಸಿದವನು ಎಂಬ ಅಂಶ ಕೂಡ ಬೆಳಕಿಗೆ ಬಂದಿದ್ದು ಬಂಗಾಳಿ ಸಂಸ್ಕೃತಿಗೆ ನಾಂದಿ ಹಾಡಿದವನು ಈತನೇ ಆಗಿದ್ದಾನೆ ಎಂಬ ದಾಖಲೆ ಕೂಡ ಇದೆ. ದೇಶದಲ್ಲಿ ಬ್ರಿಟೀಷರ ಆಮನದೊಂದಿಗೆ ದೇಶದ ಇತರ ಭಾಗಗಳಲ್ಲಿ ಕೂಡ ಹಬ್ಬವು ಆಚರಣೆಯನ್ನು ಪಡೆದುಕೊಂಡಿತು. ನವರಾತ್ರಿ ವಿಶೇಷ: ನವದುರ್ಗೆಯರಿಗೆ ‘ನವ ನೈವೇದ್ಯ’

ಮೊದಲಿಗೆ ದುರ್ಗಾ ಪೂಜೆಯ ಸಮಯದಲ್ಲಿ ಬ್ರಿಟೀಷರನ್ನು ಆಹ್ವಾನಿಸಲಾಗುತ್ತಿತ್ತು ನಂತರ ಇದನ್ನು ನಿಲ್ಲಿಸಲಾಯಿತು. 1910 ರಲ್ಲಿ ಬ್ರಿಟೀಷರು ತಮ್ಮ ಮುಖ್ಯ ಕಾರ್ಯಾಲವನ್ನು ಕಲ್ಕತ್ತಾದಿಂದ ದೆಹಲಿಗೆ ವರ್ಗಾಯಿಸಿಕೊಂಡರು. ಈ ಸಂದರ್ಭದಲ್ಲಿ ಹೆಚ್ಚಿನ ಜನರು ಮತ್ತು ಬಂಗಾಳಿ ಅಧಿಕಾರಿಗಳು ಅವರನ್ನು ಸೇರಿಕೊಂಡರು ಮತ್ತು ದೆಹಲಿಯಲ್ಲಿ ಪ್ರಥಮ ದುರ್ಗಾ ಪೂಜೆಯನ್ನು ಆರಂಭಿಸಿದರು. ನವರಾತ್ರಿ ವಿಶೇಷ: ಒಂಬತ್ತು ವಿಶಿಷ್ಟ ದಿನಗಳ ಮಹತ್ವ

ಮಂಗಳ ಕಲಶದ ಸಂಪ್ರದಾಯವನ್ನು ಮೊದಲು ಇವರು ಆಚರಣೆಗೆ ತಂದಿದ್ದು ನಂತರ ದೇಶದ ಹಲವೆಡೆಗಳಲ್ಲಿ ಈ ಆಚರಣೆಯನ್ನು ಆರಂಭಿಸಲಾಯಿತು.ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ದುರ್ಗಾ ಪೂಜೆಯು ಭಾರತೀಯರನ್ನು ಒಗ್ಗೂಡಿಸಿತು, ದುರ್ಗಾ ಮಾತೆಯನ್ನು ಸಂಕೇತವಾಗಿ ಇರಿಸಿಕೊಂಡು ಸ್ವಾತಂತ್ರ್ಯಸಂಗ್ರಾಮಕ್ಕೆ ಚಾಲನೆಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಪಡೆದುಕೊಂಡ ಹಬ್ಬವು ನಂತರ ದೇಶಾದ್ಯಂತ ಆಚರಣೆಯನ್ನು ಪಡೆದುಕೊಂಡಿತು.

ಸಂಪೂರ್ಣ ಮಾಹಿತಿ:  ಅಮರೇಶ ಕಾಮನಕೇರಿ

Be the first to comment

Leave a Reply

Your email address will not be published.


*