ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ಮಾಹೇಶ್ವರಿ ಸಮಾಜವನ್ನು ರಾಜ್ಯ ಜಾತಿಪಟ್ಟಿಯಲ್ಲಿ ಸೇರ್ಪಡೆಗೊಳಿಸುವುದರ ಜತೆಗೆ ಭಾಷಾ ಅಲ್ಪಸಂಖ್ಯಾತ ಸ್ಥಾನಮಾನ ಒದಗಿಸಲು ಆಗ್ರಹಿಸಿ ಮಹೇಶ್ವರಿ ಸಮಾಜದ ಮುಖಂಡರು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಮಹೇಶ್ವರಿ ಸಮಾಜದ 2600 ಕುಟುಂಬಗಳಿಂದ 14500ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿ ವಿವಿಧ ಉದ್ಯೋಗದಲ್ಲಿ ಸೇರಿಕೊಂಡಿದೆ. ಶಿವನ ಭಕ್ತರಾಗಿ ಮಹೇಶ್ವರಿ ಸಮಾಜ ಗುರುತಿಸಿಕೊಂಡಿದೆ. ನಮ್ಮ ಸಮಾಜದಲ್ಲೂ ಬಡಜನರಿದ್ದಾರೆ. ಶಾಲಾ ಕಾಲೇಜು ಸೇರಲು ಸರ್ಕಾರದ ವಿವಿಧ ಯೋಜನೆಗಳನ್ನು ಪಡೆಯಲು ನಮಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ದೊರೆಯುತ್ತಿಲ್ಲ.
ರಾಜ್ಯ ಜಾತಿ ಪಟ್ಟಿಯಲ್ಲಿ ಮಾಹೇಶ್ವರಿ ಎಂಬ ಉಲ್ಲೇಖ ಇಲ್ಲದಾಗಿದ್ದು ಕಳೆದ 2009ರಲ್ಲಿ ಜಾತಿ ಪಟ್ಟಿಗೆ ಸೇರಿಸಲು ಮನವಿ ಮಾಡಿತ್ತು. 2012ರಲ್ಲಿ ರಾಜ್ಯದಲ್ಲಿ ಈ ಬಗ್ಗೆ ಹಿಂದುಳಿದ ವರ್ಗ ಅಯೋಗ ಪರಿಶೀಲಿಸಿ ವರದಿ ಸಿದ್ದಪಡಿಸಿತ್ತು ಅಲ್ಲದೆ ಜಾತಿ ಪಟ್ಟಿಗೆ ಸೇರಿಸಲು ಆಗ ಶಿಫಾರಸ್ಸು ಮಾಡಿತ್ತು. 2015ರಲ್ಲಿ ಸರ್ಕಾರ ಜಾತಿ ಆಧಾರಿತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾಡಿದಾಗ ಮಾಹೇಶ್ವರಿ ಸಮುದಾಯಕ್ಕೆ 3ಎ ಅಡಿಯಲ್ಲಿ ಗುರುತಿಸಲು ಅವಕಾಶ ನೀಡಿತ್ತು. ಆದರೆ ಈ ವರೆಗೆ ಜಾತಿ ಪಟ್ಟಿಯಲ್ಲಿ ಸೇರಿಲ್ಲ. ಕೂಡಲೇ ಜಾತಿ ಪಟ್ಟಿಯಲ್ಲಿ ಸೇರಿಸಬೇಕೆಂದು ಮನವಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ಶಾಸಕ ಡಾ.ವೀರಣ್ಣ ಚರಂತಿಮಠ, ಎಸ್ಪಿ ಲೋಕೇಶ ಜಗಲಾಸರ್, ಸಮಾಜದ ಮುಖಂಡರು ಉಪಸ್ಥಿತರಿದ್ದರು.
Be the first to comment